Tuesday, April 22, 2025
HomeUncategorizedಸುಳ್ಯ: ಮರ ಕಡಿಯುವಾಗ ಮರಗಳ ನಡುವೆ ಸಿಲುಕಿ ವ್ಯಕ್ತಿ ಸಾವು

ಸುಳ್ಯ: ಮರ ಕಡಿಯುವಾಗ ಮರಗಳ ನಡುವೆ ಸಿಲುಕಿ ವ್ಯಕ್ತಿ ಸಾವು

ಸುಳ್ಯ: ಮರ ಕಡಿಯುವಾಗ ಮರದ ಕೊಂಬೆಗಳ ನಡುವೆ ಸಿಲುಕಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ. ಸುಳ್ಯದ ಕುರುಂಜಿ ಗುಡ್ಡೆಯಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ಕೇರ್ಪಳದ ಚಿನ್ನಪ್ಪ ನಾಯ್ಕ ಮೃತ ದುರ್ದೈವಿ.

ಕುರುಂಜಿ ಗುಡ್ಡೆಯಲ್ಲಿ ಮರ ಕಡಿಯುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಮರ ಕಡಿಯುತ್ತಿದ್ದಾಗ ಮರದ ಬುಡ ಹಿಂದಕ್ಕೆ ಬಂದಿದೆ. ಈ ವೇಳೆ ಕಡಿದ ಮರದ ಬುಡ ಮತ್ತು ಇನ್ನೊಂದು ಮರದ ನಡುವೆ ಚಿನ್ನಪ್ಪ ಸಿಲುಕಿದ್ದಾರೆ. ಗಂಭೀರ ಗಾಯಗೊಂಡ ಚಿನ್ನಪ್ಪ ಅವರು ಮೃತಪಟ್ಟಿದ್ದಾರೆ. ಸುಳ್ಯ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದಾರೆ.

RELATED ARTICLES
- Advertisment -
Google search engine

Most Popular