ಪಾಲಕ್ಕಾಡ್: ಇಡ್ಲಿ ಗಂಟಲಲ್ಲಿ ಸಿಲುಕಿ ಉಸಿರುಗಟ್ಟಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ. ಕೇರಳದ ವಲ್ಯಾರ್‌ನಲ್ಲಿ ಈ ಘಟನೆ ನಡೆದಿದೆ. ಕಂಚಿಕೋಡು ಗ್ರಾಮದ ಸುರೇಶ್ (50) ಮೃತ ವ್ಯಕ್ತಿ. ಸೆ.15ರಂದು ಕೇರಳದಾದ್ಯಂತ ಓಣಂ ಹಬ್ಬ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಅದರಂತೆ ಆಯಾಯ ಪ್ರದೇಶದಲ್ಲಿ ಮಕ್ಕಳಿಗೆ, ಯುವಕ, ಯುವತಿಯರಿಗೆ ವಿವಿಧ ಸ್ಪರ್ಧೆ ಆಯೋಜಿಸಲಾಗಿತ್ತು. ವಲ್ಯಾರ್‌ನಲ್ಲಿ ಇಡ್ಲಿ ತಿನ್ನುವ ಸ್ಪರ್ಧೆ ಆಯೋಜಿಸಲಾಗಿತ್ತು. ಅದೂ ಚಟ್ನಿ, ಸಾಂಬಾರ್ ಇಲ್ಲದೆ ಬರೇ ಇಡ್ಲಿ ತಿನ್ನಬೇಕಾಗಿತ್ತು.
ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಲಾರಿ ಚಾಲಕ ಸುರೇಶ್ ಕೂಡ ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಎಲ್ಲರೂ ಇಡ್ಲಿ ತಿನ್ನಲು ಶುರು ಮಾಡಿದಂತೆ, ಸುರೇಶ್ ಕೂಡ ಇಡ್ಲಿ ತಿನ್ನಲು ಶುರು ಮಾಡಿದ್ದಾರೆ. ಆದರೆ ಸ್ಪರ್ಧೆಯಲ್ಲಿ ಗೆಲ್ಲಬೇಕು ಎಂಬ ತವಕದಲ್ಲಿ ಒಮ್ಮೆಲೇ ಮೂರೂ ಇಡ್ಲಿಯನ್ನು ಬಾಯಿಗೆ ತುರುಕಿದ್ದಾರೆ. ಈ ವೇಳೆ ಇಡ್ಲಿ ಸುರೇಶ್ ಗಂಟಲಲ್ಲಿ ಸಿಲುಕಿ ಉಸಿರಾಡಲು ಕಷ್ಟವಾಗಿದ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಸುರೇಶ್ ಅವರ ದುರಾದೃಷ್ಟ ಅವರು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲೇ ಸಾವನ್ನಪ್ಪಿದ್ದಾರೆ.
ಗಂಟಲಲ್ಲಿ ಇಡ್ಲಿ ಸಿಲುಕಿ ವ್ಯಕ್ತಿ ಮೃತ್ಯು
RELATED ARTICLES