Sunday, July 21, 2024
Homeಅಪರಾಧನಾಲ್ಕನೇ ಹೆಂಡತಿಗಾಗಿ ಮೂರನೇ ಹೆಂಡತಿಯ ಚಿನ್ನ ಕದ್ದು ಮಗನಿಂದಲೇ ಧರ್ಮದೇಟು ತಿಂದ ಭೂಪ!

ನಾಲ್ಕನೇ ಹೆಂಡತಿಗಾಗಿ ಮೂರನೇ ಹೆಂಡತಿಯ ಚಿನ್ನ ಕದ್ದು ಮಗನಿಂದಲೇ ಧರ್ಮದೇಟು ತಿಂದ ಭೂಪ!

ಬೆಂಗಳೂರು: ಇಲ್ಲೊಬ್ಬ ಒಂದೊಂದು ಸಾಕಾಗಲಿಲ್ಲವೆಂದು ಬರೋಬ್ಬರಿ ನಾಲ್ಕು ಮದುವೆಯಾಗಿದ್ದಾನೆ. ಅವರಲ್ಲಿ ನಾಲ್ಕನೇ ಹೆಂಡತಿಗೆ ನೀಡಲೆಂದು ಮೂರನೇ ಪತ್ನಿಯ ಮನೆಯಲ್ಲಿ ಚಿನ್ನ ಕದ್ದು ಸಿಕ್ಕಿಬಿದ್ದಿದ್ದಾನೆ. ಅಲ್ಲದೆ, ತನ್ನ ಮೂರನೇ ಮಡದಿಯ ಪುತ್ರನಿಂದ ಧರ್ಮದೇಟು ತಿಂದಿದ್ದಾನೆ. ಬೆಂಗಳೂರು ಉತ್ತರ ತಾಲೂಕಿನ ದೊಡ್ಡಬಿದರಕಲ್ಲು ಗ್ರಾಮದಲ್ಲಿ ಈ ಘಟನೆ ನಡೆದಿದೆ.
ದೊಡ್ಡಬಿದರಕಲ್ಲು ಗ್ರಾಮದ ಭಕ್ತವತ್ಸಲ ಎಂಬಾತ ನಾಲ್ಕು ಮದುವೆಯಾಗಿದ್ದಾನೆ, ಮೊದಲ ಪತ್ನಿ ಕವಿತ, ಎರಡನೇ ಪತ್ನಿ ಸಾವಿತ್ರಿ, ಮೂರನೇ ಪತ್ನಿ ನಾಗರತ್ನಮ್ಮ ಮತ್ತು ನಾಲ್ಕನೇ ಪತ್ನಿಯ ಹೆಸರು ಪದ್ಮಾವತಿ.
ಈ ಭಕ್ತವತ್ಸಲ ತನ್ನ 3ನೇ ಪತ್ನಿ ನಾಗರತ್ನಮ್ಮಳ ಮನೆಯಲ್ಲಿದ್ದ 50 ಗ್ರಾಂಗೂ ಹೆಚ್ಚು ಚಿನ್ನಾಭರಣ ಕದ್ದು ನಾಲ್ಕನೇ ಪತ್ನಿ ಪದ್ಮಾವತಿಗೆ ಕೊಟ್ಟಿದ್ದಾನೆನ್ನಲಾಗಿದೆ. ಈ ವಿಚಾರ ಮೂರನೇ ಪತ್ನಿಯ ಮಗ 18 ವರ್ಷದ ಜೀವನ್‌ಗೆ ಗೊತ್ತಾಗಿ ನೇರ ಪದ್ಮಾವತಿ ಮನೆಗೆ ತೆರಳಿದ್ದಾನೆ. ಅಲ್ಲಿ ಮಲಗಿದ್ದ ಭಕ್ತವತ್ಸಲ ಮೇಲೆ ಆತ ದಾಳಿ ನಡೆಸಿದ್ದಾನೆ.


ಭಕ್ತವತ್ಸಲ ಕೃಷ್ಣ ಭಾಗ್ಯ ಜಲ ನಿಗಮದಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿದ್ದಾನೆ. ಮದುವೆಯಾಗಿರುವ ಯಾರಿಗೂ ವಿಚ್ಛೇದನೆ ಕೊಡದೆ ನಾಲ್ಕು ಮದುವೆಯಾಗಿದ್ದಾನೆ. ಈ ನಾಲ್ವರು ಪತ್ನಿಯರಿಂದ ಒಟ್ಟು 6 ಮಕ್ಕಳನ್ನು ಪಡೆದಿದ್ದಾನೆ ಎಂದು ವರದಿಯೊಂದು ತಿಳಿಸಿದೆ. ಸದ್ಯ ಮೂರನೇ ಪತ್ನಿ ಮತ್ತು ನಾಲ್ಕನೇ ಪತ್ನಿ ಪತಿ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ಪೀಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular