Thursday, December 5, 2024
Homeಬಂಟ್ವಾಳಶೌರ್ಯ ವಿಪತ್ತು ನಿರ್ವಹಣಾ ಘಟಕ ಕಾಡಬೆಟ್ಟು ವಗ್ಗ ವತಿಯಿಂದ ಶ್ರಮದಾನ ಹಾಗೂ ಮಾಸಿಕ ಸಭೆ

ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಾಡಬೆಟ್ಟು ವಗ್ಗ ವತಿಯಿಂದ ಶ್ರಮದಾನ ಹಾಗೂ ಮಾಸಿಕ ಸಭೆ

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಾಡಬೆಟ್ಟು ವಗ್ಗದ ಸದಸ್ಯರು ಬಂಟ್ವಾಳ ತಾಲೂಕಿನ ವಗ್ಗದ ದೊಂಪದ ಪಲಿಕೆಯಿಂದ ಕಾಡಬೆಟ್ಟು ಅಂತರಂಗಡಿ ತನಕ ಸುಮಾರು ಒಂದುವರೆ ಕಿಲೋಮೀಟರ್ ರಸ್ತೆ ಬದಿ ಬೆಲೆದ ಬಲ್ಲೆ, ಹುಲ್ಲು, ಗಿಡ ಗಂಟೆಗಳನ್ನು ಕಡಿದು ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ ಮಾಡಿದರು.

ಈ ಶ್ರಮದಾನ ಕಾರ್ಯಕ್ರಮಕ್ಕೆಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ, ಪಂಚಾಯತ್ ಮಾಜಿ ಅಧ್ಯಕ್ಷರಾದ ಹಾಗೂ ಸದಸ್ಯರಾದ ಪ್ರಮೋದ್ ಕುಮಾರ್ ರೈ ಶ್ರಮದಾನದ ಸಂದರ್ಭ ಭಾಗವಹಿಸಿ ಕೆಲಸ ಕಾರ್ಯಗಳಿಗೆ ಪ್ರೋತ್ಸಾಹಿಸಿದರು.

ಶ್ರಮಧಾನ ಕಾರ್ಯದಲ್ಲಿ ಶೌರ್ಯ ಘಟಕ ಕಾಡಬೆಟ್ಟು ವಗ್ಗದ ಸಂಯೋಜಕಿ ರೇಖಾ.ಪಿ,ಘಟಕ ಪ್ರತಿನಿಧಿ ಪ್ರವೀಣ್, ಸದಸ್ಯರುಗಳಾದ ಸಂಪತ್ ಶೆಟ್ಟಿ,ಮಹಾಬಲ ರೈ, ನಾರಾಯಣ್ ಪೂಜಾರಿ, ನಾರಾಯಣ್ ಶೆಟ್ಟಿ, ಲಕ್ಷ್ಮಣ್,ಆನಂದ,ಮೋಹನಂದ ,ರೋಹಿತ್,ಪವನ್,ಜನಾರ್ಧನ, ಅಶೋಕ,ರಮೇಶ, ಪ್ರಮೀಳಾ, ಪ್ರಿಯಾಂಕ,ಶಶಿಕಲಾ, ಪವಿತ್ರ ಮಧ್ವ, ಭಾಗವಹಿಸಿದ್ದರು. ಶ್ರಮಧಾನ ಕಾರ್ಯಕ್ರಮದ ಬಳಿಕ ತಂಡದ ಮಾಸಿಕ ಸಭೆಯನ್ನು ನಡೆಸಿ ಮುಂದಿನ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು.

RELATED ARTICLES
- Advertisment -
Google search engine

Most Popular