Tuesday, June 18, 2024
Homeಧಾರ್ಮಿಕನಾರಾವಿ ಬಸದಿಯಲ್ಲಿ ಮಂಡಲ ಪೂಜೆ

ನಾರಾವಿ ಬಸದಿಯಲ್ಲಿ ಮಂಡಲ ಪೂಜೆ

ಉಜಿರೆ: ನಾರಾವಿ ಗ್ರಾಮದಲ್ಲಿರುವ ಭಗವಾನ್ ಶ್ರೀ ಧರ್ಮನಾಥಸ್ವಾಮಿ ಬಸದಿಯಲ್ಲಿ ಧಾಮಸಂಪ್ರೋಕ್ಷಣಾ ಪೂರ್ವಕ ಜಿನಬಿಂಬ ಪ್ರತಿಷ್ಠಾ ಮಹೋತ್ಸವದ 48ನೆ ದಿನವಾದ ಇದೇ ಜೂನ್ 22ರಂದು ಶನಿವಾರ ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿಭಟ್ಟಾರಕ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಮಂಡಲಪೂಜೆ ನಡೆಯಲಿದೆ.

ಜೂನ್ 22ರಂದು ಶನಿವಾರ ಪೂರ್ವಾಹ್ನ ಗಂಟೆ 6:45ರಿಂದ ತೋರಣಮುಹೂರ್ತ, ವಿಮಾನಶುದ್ಧಿ, ಮುಖವಸ್ತ್ರ ಉದ್ಘಾಟನೆ ಮೊದಲಾದ ಧಾರ್ಮಿಕ ವಿಧಿ-ವಿಧಾನಗಳು ನಡೆಯಲಿವೆ. ಪೂರ್ವಾಹ್ನ ಗಂಟೆ 9 ರಿಂದ ಸಾಮೂಹಿಕ ಜಿನಾಭಿಷೇಕ ಮತ್ತು ಋಷಿಮಂಡಲ ಆರಾಧನಾ ಪೂಜಾ ವಿಧಾನ ನಡೆಯಲಿದೆ. ಅಪರಾಹ್ನ ಗಂಟೆ 2:30 ರಿಂದ ಶ್ರೀ ಪದ್ಮಾವತಿದೇವಿ ಆರಾಧನೆ, ನೂತನ ಉಯ್ಯಾಲೆ ಸಮರ್ಪಣೆ ಮತ್ತು ಅಷ್ಟಾವಧಾನ ಪೂಜೆ ನಡೆಯುತ್ತದೆ.

ಧಾರ್ಮಿಕ ಸಭೆ: ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿಭಟ್ಟಾರಕ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಸಂಜೆ ಏಳು ಗಂಟೆಯಿಂದ ಧಾರ್ಮಿಕಸಭೆ ನಡೆಯಲಿದೆ. ಮೂಲ್ಕಿ ಸೀಮೆಯ ಅರಸರಾದ ಎಂ. ದುಗ್ಗಣ್ಣ ಸಾವಂತರು, ಮೂಡಬಿದ್ರೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ ಜೈನ್ ಮತ್ತು ಗುರುವಾಯನಕೆರೆಯ ಎಕ್ಸೆಲ್ ಪದವಿಪೂರ್ವ ಕಾಲೇಜಿನ ಅಧ್ಯಕ್ಷ ಸುಮಂತ್‌ಕುಮಾರ್ ಮುಖ್ಯ ಅತಿಥಿಗಳಾಗಿ ಶುಭಾಶಂಸನೆ ಮಾಡುವರು.

RELATED ARTICLES
- Advertisment -
Google search engine

Most Popular