ತೀರ್ಥಹಳ್ಳಿ : ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಆದಿ ನಾಟಿ ಔಷಧಿ ಪರಂಪರಾಗತವಾಗಿ ಬಂದತಹ ಹಾಗು ಅವರ ತಂದೆ ಬನಮೇಗೌಡರಿಂದ ಕಲಿತ ನಾಟಿ ವೈದ್ಯವನ್ನು ತಮ್ಮ ಕೊನೆಯುಸಿರವರೆಗೂ ಮುಂದುವರೆಸಿ ಲಕ್ಷಾಂತರ ಜನರಿಗೆ ಚಿಕಿತ್ಸೆ ನೀಡಿ ಜನ ಮನ್ನಣಿ ಪಡೆದವರಾಗಿದ್ದ ಶಿವಣ್ಣಗೌಡರು ಮಂಗಳ ಇನ್ನಿಲ್ಲ.
ರಾಜ್ಯದ ಮೂಲೆ – ಮೂಲೆಗಳಿಂದ ಬಂದವರಿಗೆ ಹಗಲು-ರಾತ್ರಿಯ ಪರಿವೆ ಇಲ್ಲದೆ, ಹಣದ ವ್ಯಾಮೋಹ ಇಲ್ಲದೆ ಚಿಕಿತ್ಸೆ ನೀಡಿದ ಮಹಾನ್ ನಾಟಿ ವೈದ್ಯ ರಾಗಿದ್ದರು. ಪ್ರತಿ ಶನಿವಾರ ,ಮಂಗಳವಾರ, ಹಾಗೂ ಭಾನುವಾರ ಕರ್ನಾಟಕದಾದ್ಯಂತ ಅಲ್ಲದೆ ಬಾಂಬೆ ಗುಜರಾತ್, ದೆಲ್ಲಿ ರಾಜ್ಯಗಳಿಂದ ಬೆನ್ನು ನೋವು ಕಾಲು ನೋವುಗಳೆಂದು ಬಂದು ಚಿಕಿತ್ಸೆ ಪಡೆದು ಗುಣಮುಖರಾದವರು ಸಾವಿರಾರು ಜನರಿದ್ದಾರೆ, ಅಲ್ಲದೆ ಮಾಜಿ ಪ್ರಧಾನ ಮಂತ್ರಿಗಳಾದ ಶ್ರೀ ದೇವೆಗೌಡರು, ಮಾಜಿ ಮುಖ್ಯ ಮಂತ್ರಿಗಳಾದ ಕುಮಾರಸ್ವಾಮಿ ಗಳಿಗೆ ಚಿಕಿತ್ಸೆ ನೀಡಿ ಗುಣಪಡಿಸಿರುವ ವೈದ್ಯ ರತ್ನ ಶಿವಣ್ಣ ಗೌಡರನ್ನು ಕಳೆದುಕೊಂಡಿರುವುದು ಕುಟುಂಬಕ್ಕೆ ( ಮಗ ಡಾ|| ಶ್ರೀಕಾಂತ್) ದುಃಖ ಬರಿಸುವ ಶಕ್ತಿ ನೀಡಲಿ .
ದೇವರು ಅವರ ಆತ್ಮಕ್ಕೆ ಸದ್ಗತಿಯನ್ನು ನೀಡಿ,
ಅವರ ಕುಟುಂಬಕ್ಕೆ ದುಖಃವನ್ನು ಬರಿಸುವ ಶಕ್ತಿ ನೀಡಲಿ.
ಓಂ ಶಾಂತಿಃ
ವರದಿ :- ಅರುಣ ಕುಂದ