ರೋಟರಿ ಮಂಗಳೂರು ಡೌನ್ ಟೌನ್ ವತಿಯಿಂದ ಮಂಗಳೂರಿನ ಕೊಂಚಾಡಿಯ ಶ್ರೀ ರಾಮಾಶ್ರಮ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂಟರಾಕ್ಟ್ ಕ್ಲಬ್ ನ ಸ್ಥಾಪನೆ ನಡೆಯಿತು. ವಲಯ-3ರ ವಲಯ ಸಮನ್ವಯಾಧಿಕಾರಿ (ಇಂಟರಾಕ್ಟ್) ರೋ. ಉಮೇಶ ಗಟ್ಟಿ ಸ್ಥಾಪನಾ ಅಧಿಕಾರಿಯಾಗಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಧ್ಯಕ್ಷರಾದ ರೋ. ಗಣಪತಿ ಶೆಣೈ ವಹಿಸಿದ್ದರು. ಗೌರವ ಅತಿಥಿಗಳಾಗಿ ಕಾರ್ಯದರ್ಶಿ ರೋ. ಜಯರಾಜ್ ಕೆ. ಮುಖ್ಯೋಪಾಧ್ಯಾಯಿನಿ ಮಂಜುಳಾ ಬಾಲಕೃಷ್ಣ, ಇಂಟರಾಕ್ಟ್ ಶಿಕ್ಷಕ ಸಮನ್ವಯಾಧಿಕಾರಿ ಶ್ರೀಮತಿ ಪುಷ್ಪಲತಾ ಮತ್ತು ಸದಸ್ಯರಾದ ರೋ. ಸೂರಜ್ ಹೆಬ್ಬಾರ್ ನೆರಿಯಾ, ರೋ. ರಾಜೇಶ್ ಶೆಟ್ಟಿ, ರೋ. ಗಣೇಶ್ ಪ್ರಭು ಉಪಸ್ಥಿತರಿದ್ದರು. ಮಾಸ್ಟರ್ ಸುಶನ್ ಡಿ.ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರೆ, ಕು. ನಿತ್ಯ ಇಂಟರಾಕ್ಟ್ ಕ್ಲಬ್ ನ ಕಾರ್ಯದರ್ಶಿಯಾದರು. ಕು. ಶಾಂತಾ ಸಾರ್ಜೆಂಟ್ ಆಗಿ ಮತ್ತು ನಿರ್ದೇಶಕರಾಗಿ ರಕ್ಷಿತ್, ಸಂಜನಾ, ಶ್ರೀಪ್ರಿಯಾ, ಕೀರ್ತನಾ ಮತ್ತು ಇಶಾನಿ ಅಧಿಕಾರ ವಹಿಸಿಕೊಂಡರು.
ಸ್ಥಾಪಕ ಅಧಿಕಾರಿ ರೋ. ಉಮೇಶ ಗಟ್ಟಿ ತಮ್ಮ ಭಾಷಣದಲ್ಲಿ ಇಂಟರಾಕ್ಟ್ ಕ್ಲಬ್‌ನ ಮಹತ್ವವನ್ನು ಒತ್ತಿ ಹೇಳಿದರು ಮತ್ತು ರಾಷ್ಟ್ರದ ಭವಿಷ್ಯದ ನಾಯಕರಾದ ವಿದ್ಯಾರ್ಥಿಗಳಲ್ಲಿ ಅದು ಹೇಗೆ ನಾಯಕತ್ವವನ್ನು ಬೆಳೆಸುತ್ತದೆ ಎಂದು ತಿಳಿಸಿದರು.