ಮಂಗಳೂರು : ತೋಟ ಬೇಂಗ್ರೆ, ಕುಳಾಯಿ, ಉಳ್ಳಾಲ-ಮೊಗವೀರಪಟ್ನದಲ್ಲಿ ಉಚಿತ NFDP ವಿಶೇಷ ನೋಂದವಣಾ ಅಭಿಯಾನ ನಡೆಯಿತು.
ದಿನಾಂಕ 01-11-2024ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಸಾಮಾನ್ಯ ಸೇವಾ ಕೇಂದ್ರ (CSC) ಮಂಗಳೂರು ನಗರ ವತಿಯಿಂದ ಉಚಿತ NFDP(National Fisheries Digital Platform) ನಲ್ಲಿ ಮೀನುಗಾರರ ನೋಂದವಣಾ ಅಭಿಯಾನ ನಡೆಯಿತು. ಈ ಅಭಿಯಾನದಲ್ಲಿ 1100ಕ್ಕೂ ಮಿಕ್ಕಿ ಜನರು ಸೇವೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು, ಸುಮಾರು 980 ಮೀನುಗಾರ ಫಲಾನುಭವಿಗಳು ನೋಂದಾವಣೆ ಮಾಡಿಕೊಂಡರು.
ಮೀನುಗಾರ ಮಿತ್ರರು ತಮ್ಮ ಸಮೀಪದ ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆ ಸಿ.ಎಸ್.ಸಿ ಕೇಂದ್ರಗಳಿಗೆ ಭೇಟಿ ನೀಡಿ ಉಚಿತವಾಗಿ NFDP ನೋಂದಾವಣೆ ಮಾಡಿಕೊಳ್ಳಿ.