Wednesday, September 11, 2024
Homeಮಂಗಳೂರುಮಂಗಳೂರು: ಪದವಿ ಪ್ರದಾನ ಸಮಾರಂಭ ಹಾಗೂ ಉದ್ಘಾಟನಾ ಸಮಾರಂಭ

ಮಂಗಳೂರು: ಪದವಿ ಪ್ರದಾನ ಸಮಾರಂಭ ಹಾಗೂ ಉದ್ಘಾಟನಾ ಸಮಾರಂಭ


ಪೋಸ್ಟ್ ಗ್ರಾಜುಯೇಟ್ ಡಿಪ್ಲೋಮಾ ಇನ್ ಗೈ ಡೆನ್ಸ್ ಅಂಡ್ ಕೌನ್ಸಿಲಿಂಗ್ (ಪಿಜಿಡಿಜಿಸಿ)ಯ 12ನೇ ಬ್ಯಾಚ್ ‘ELEMENTS’ ನ ಪದವಿ ಪ್ರದಾನ ಸಮಾರಂಭ ಹಾಗೂ 13ನೇ ಬ್ಯಾ ಚ್ ‘PATHFINDERS’ ನ ಉದ್ಘಾಟನಾ ಸಮಾರಂಭವು 2ನೇಆಗಸ್ಟ್ 2024ರಂದು ಮಂಗಳೂರಿನ ಸೈ ಂಟ್ ಆಗ್ನಿಸ್ ಪಿಜಿ ಸೆಂಟರ್ ಆಡಿಟೋ ರಿಯಂ ನಲ್ಲಿ ಜರಗಿತು. ಈ ಕಾರ್ಯ ಕ್ರಮದಲ್ಲಿ ಗೌರವಾನ್ವಿತ ಗಣ್ಯರಾದ ಕ್ಯಾ ಪ್ಟನ್ ಗಣೇ ಶ್ ಕಾರ್ಣಿ ಕ್, ಕರ್ನಾ ಟಕ ಸರಕಾರದ ಮಾಜಿ ವಿಧಾನ ಪರಿಷತ್ ಸದಸ್ಯರು, ಸಿಸ್ಟರ್ ಡಾ.ಎಂ. ವೆನಿಸ್ಸಾ ,ಎ.ಸಿ., ಸೈ ಂಟ್ ಅಗ್ನಿಸ್ ಕಾಲೇ ಜಿನ ಪ್ರಾಂಶುಪಾಲರು; ಸಿಸ್ಟರ್ ಡಾ.ಎಂ. ವಿನೋ ರ ಎ.ಸಿ., ಪಿಜಿ ಸಂಯೋ ಜಕರು, ಮತ್ತು ಲುಜಿನಾ ಮಿರಾಂಡ, ಪಿಜಿಡಿಜಿಸಿ ಸಂಯೋ ಜಕರು, ಸೈ ಂಟ್ ಆಗ್ನೀಸ್ ಕಾಲೇಜ್,ಮಂಗಳೂರು, ಇವರುಗಳು ಉಪಸ್ಥಿತರಿದ್ದರು.
ಸಮಾರಂಭವನ್ನು ಕಾರ್ಯ ಕ್ರಮದ ಉದ್ಘಾ ಟನೆಯ ಸಂಕೇ ತವಾಗಿ ಸಾಂಪ್ರದಾಯಿಕ ರೀ ತಿಯಲ್ಲಿ ದೀ ಪ ಬೆಳಗುವ ಮೂಲಕ ಪ್ರಾರಂಭಿಸಲಾಯಿತು, ನಂತರ Pathfinders ತಂಡದಿಂದ ಭಾವಪೂರ್ಣ ವಾಗಿ ಪ್ರಾರ್ಥ ನೆ ಮಾಡಲಾಯಿತು. ಕಾರ್ಯ ಕ್ರಮದ ವೈ ಶಿಷ್ಟ್ಯವಾಗಿ ಸರ್ವ ಧರ್ಮ ಪಾಲನೆಯ ಸಂದೇ ಶಗಳನ್ನು ಭಗವದ್ಗೀತೆ, ಕುರಾನ್ ಮತ್ತು ಬೈ ಬಲ್ ಗ್ರಂಥಗಳಿಂದ ಆರಿಸಿ ಕ್ರಮವಾಗಿ ಶ್ರ ೀ ಉಮೇ ಶ್ ಕುಮಾರ್, ಮಿಸ್ ಹಬೀ ಬ ಮತ್ತು ಮಿಸ್ ಸಿರಿಜಾ ಮೊಂತೆರೋ ರವರಿಂದ ವಾಚನ ಮಾಡಲಾಯಿತು.
ಮುಖ್ಯ ಅತಿಥಿಯವರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರು ತಮ್ಮ ಪ್ರಧಾನ ಭಾಷಣದಲ್ಲಿ ಇಂದಿನ ಸಮಾಜದ ಶಿಕ್ಷಣ ವ್ಯವಸ್ಥೆಯಲ್ಲಿ ಗೈ ಡೆನ್ಸ್ ಮತ್ತು ಕೌನ್ಸಿಲಿಂಗ್ ನಿರ್ಣಾ ಯಕ ಪಾತ್ರ ವಹಿಸುತ್ತದೆ ಎಂದರು. ಅವರು ನಮ್ಮೆಲ್ಲರಲ್ಲಿ ಒಂದು ಮಗು ಇದ್ದು ನಾವು ಬೆಳೆದು ದೊ ಡ್ಡವರಾದಂತೆ ಶಿಕ್ಷಣವು ಮಹತ್ವವಾಗುತ್ತದೆ ಎಂದು ಹೇ ಳಿದರು. ಅಲ್ಲದೆ ಸಾಂಪ್ರದಾಯಿಕ ಶಿಕ್ಷಣವನ್ನು ಸೃಜನಾತ್ಮಕವಾಗಿ ಮತ್ತು ಪ್ರಾಯೋ ಗಿಕ ಆಧಾರದಲ್ಲಿ ನೀ ಡುವ ಪ್ರಾಮುಖ್ಯತೆಯ ಬಗ್ಗೆ ಒತ್ತಿ ಹೇ ಳಿದರು. ಮುಂದುವರಿದು ಅವರು ಹಲವು ಸಮಸ್ಯೆ ಗಳಿಂದ ಛಿದ್ರಗೊ ಂಡ ಈ ಸಮಾಜದಲ್ಲಿ ಮೊದಲು ನಾವು ಅಗತ್ಯವಾಗಿ ನೆನಪಿನಲ್ಲಿ ಇಡಬೇ ಕಾದದ್ದು
ಮೊದಲು ನಾವು ಮನುಷ್ಯರು ಮತ್ತು ನಾವು ಕ್ರಮಬದ್ಧವಾಗಿ ಜೀ ವನ ನಡೆಸಲು ನಮ್ಮ ಮನಸ್ಸು ಹಾಗೂ ದೇ ಹ ಎರಡರ ಮಧ್ಯೆ ಸಾಮರಸ್ಯ ಇರಬೇ ಕು ಎಂದು ಹೇಳಿದರು.
ಸಿಸ್ಟರ್ ಡಾ. ಎಂ. ವೆನಿಸಾ ಎ.ಸಿ ಯವರು ತಮ್ಮ ಅಧ್ಯಕ್ಷ ಭಾಷಣದಲ್ಲಿ, ರೂಪುಗೊ ಳ್ಳುವಿಕೆಯ ಅವಧಿಯಲ್ಲಿ ಗೈ ಡೆನ್ಸ್ ಮತ್ತು ಕೌನ್ಸಿಲಿಂಗ್ ನ ಅವಶ್ಯಕತೆಯ ಬಗ್ಗೆ ತಿಳಿಸಿದರು. ಅವರು ಮುಂದುವರಿಸಿ ಒಬ್ಬ ವ್ಯಕ್ತಿಯು ವೃತ್ತಿ ಜೀ ವನ, ಕುಟುಂಬದ ಬದ್ಧತೆ ಮತ್ತು ಸಾಮಾಜಿಕ ಜವಾಬ್ದಾರಿ ಇವುಗಳ ಮಧ್ಯೆ ಸಮತೋ ಲನ ಕಾಪಾಡಿಕೊ ಂಡು ವೈ ಯಕ್ತಿಕವಾಗಿ ತನ್ನ ಬೆಳವಣಿಗೆ ಅಲ್ಲದೆ ದೇಶದ ಬೆಳವಣಿಗೆಗೂ ಸಹಕಾರಿಯಾಗಬೇ ಕು ಎಂದು ಒತ್ತಿ ಹೇ ಳಿದರು.
ಅರ್ಚನಾ ಕಾಮತ್ ರವರು ಪಿಜಿಡಿಜಿಸಿ ಕೋ ರ್ಸ್ ನ ಸಂಕ್ಷಿಪ್ತವರದಿಯನ್ನು ಓದಿದರು. ‘ELEMENT’ S ತಂಡದ
ಮಿಸ್ ಪ್ಲೋರಿನ್ ಡಿಸೋಜಾ, ಮಿಸ್ಟರ್ ಕಿರಣ್ ಕೊ ಟ್ಟಾರಿ ಮತ್ತು ಮಿಸ್ಟರ್ ಆನಂದ್ ನಜರೆತ್ ರವರು ತಮ್ಮ ಅನಿಸಿಕೆ ಮತ್ತು ಅನುಭವಗಳನ್ನು ಹಂಚಿಕೊ ಂಡರು. ಲುಜಿನಾ ಮಿರಾಂಡಾ, ಕೌನ್ಸಿಲರ್, ಸೈ ಕೋ ಥೆರಪಿಸ್ಟ್ ಮತ್ತು ಪಿಜಿಡಿಜಿಸಿ ಕೋ ರ್ಸ್ ನ ಸಂಯೋ ಜಕರು ಆಗಿರುವ ಇವರು ಪದವೀ ಧರರನ್ನು ಪರಿಚಯಿಸಿದರು ಮತ್ತು ಕ್ಯಾ ಪ್ಟನ್ ಗಣೇ ಶ್ ಕಾರ್ಮಿ ಕರವರು ಸರ್ಟಿ ಫಿಕೇ ಟ್ ಗಳನ್ನು ವಿತರಿಸಿದರು.
13 ನೇ ಬ್ಯಾ ಚ್ ‘PATHFINDERS’ ನ ಪ್ರಾರಂಭೋ ತ್ಸವವನ್ನು ಸಿಸ್ಟರ್ ಡಾ.ಎಂ.ವಿನೋ ರ ಎ.ಸಿ, ಪಿಜಿ ಸಂಯೋ ಜಕರು ಇವರು ದೀ ಪ ಬೆಳಗುವ ಮೂಲಕ ಚಾಲನೆ ನೀ ಡಿದರು ಮತ್ತು ನಂತರ ಶ್ರ ೀಮತಿ ಲುಜಿನಾ ಮಿರಾಂಡ ರವರಿಂದ ಪ್ರಮಾಣವಚನ ಬೋ ಧನಾ ಕಾರ್ಯ ಕ್ರಮ ನಡೆಯಿತು. ಹೊ ಸ ಬ್ಯಾ ಚ್ ಗೆ ಹೆಸರು ನೀ ಡುವ ಸೃಜನಾತ್ಮಕತೆಯನ್ನು ಪ್ರೇಕ್ಷಕರಿಗೆ ಒಂದು ಅರ್ಥ ಗರ್ಭಿ ತ ಅಭಿನಯದಿಂದ ಪ್ರಹಸನದ ಮೂಲಕ ಸಿಸ್ಟರ್ ರೀ ನಾ ಮತ್ತು ಅವರ ಬಳಗದಿಂದ ಪ್ರದರ್ಶಿಸಲಾಯಿತು.
ಶ್ರ ೀ ಗ್ರಿಶಿನ್ ಡಿಸೋ ಜಾರವರು ಎಲ್ಲಾ ಗಣ್ಯರನ್ನು ಹಾರ್ದಿ ಕವಾಗಿ ಸ್ವಾ ಗತಿಸಿದರು. ಮಿಸ್ಟರ್ ವೆಂಕಟೇ ಶ್ ಪ್ರಸಾದ್ ಮುಖ್ಯ ಅತಿಥಿಯವರಾದ ಕ್ಯಾ ಪ್ಟನ್ ಗಣೇ ಶ್ ಕಾರ್ಣಿ ಕ್ ಮತ್ತು ಡಾ. ಶರ್ಮಿ ಳಾ ಕುಮಾರಿ ಎಂ ಇವರು ಸಿಸ್ಟರ್ ಡಾ. ಎ.ಸಿ ಇವರನ್ನು ಸಭೆಗೆ ಪರಿಚಯಿಸಿದರು. ಮಿಸ್ ಸಿರಿಜಾ ಮೊಂತೆರೋ ರವರ ಹೃದಯ ತುಂಬಿದ ಧನ್ಯವಾದ ಸಮರ್ಪಣೆಯೊಂದಿಗೆ ಕಾರ್ಯ ಕ್ರಮವು ಅಂತ್ಯಗೊ ಂಡಿತು. ಸಮಾರಂಭದಲ್ಲಿ ಕಾಲೇ ಜಿನ ಸಿಬ್ಬಂದಿ ವರ್ಗ , ಪಿಜಿಡಿಜಿಸಿ ಯ ಪದವೀ ಧರರು ಮತ್ತು ಅವರ ಕುಟುಂಬ ಸದಸ್ಯರು ಭಾಗವಹಿಸಿದ್ದರು. ಮಿಸ್ ಡೆಬ್ಬಿ ಲೋಬೋ ಮತ್ತು ಮಿಸ್ ಪ್ರಿಯಾಂಕಾ ಡಿಸೋಜಾರವರು ಕಾರ್ಯ ಕ್ರಮವನ್ನು ನಿರೂಪಿಸಿದರು.

RELATED ARTICLES
- Advertisment -
Google search engine

Most Popular