Sunday, March 23, 2025
Homeಮಂಗಳೂರುಮಂಗಳೂರು: ದ.ಕ., ಉಡುಪಿ ಭಾಗಗಳಲ್ಲಿ ಸುರಿದ ಮಳೆ

ಮಂಗಳೂರು: ದ.ಕ., ಉಡುಪಿ ಭಾಗಗಳಲ್ಲಿ ಸುರಿದ ಮಳೆ

ಮಂಗಳೂರು: ಏಪ್ರಿಲ್ 13 ರ ಶನಿವಾರದಂದು ಕರಾವಳಿ ಜಿಲ್ಲೆಗಳ ಬಹುತೇಕ ಭಾಗಗಳಲ್ಲಿ ಮಳೆಯಾಗಿದೆ. ನಗರದಲ್ಲಿ ಮುಂಜಾನೆ ತುಂತುರು ಮಳೆ ಸುರಿದಿದೆ. ಬೆಳ್ತಂಗಡಿ, ಕನ್ಯಾಡಿ, ಸವಣಾಲು, ಉಜಿರೆ, ಮುಂಡಾಜೆ, ಗೇರುಕಟ್ಟೆ, ನಿಡ್ಲೆ, ಬಂಗಾಡಿ, ಬಂದಾರು, ಮೈರೋಳ್ತಡ್ಕ, ಕೊಕ್ಕಡ, ಮದ್ಯಂತರು, ಪುತ್ತೂರು, ಉಪ್ಪಿನಂಗಡಿ, ಇಳಂತಿಲ, ಸುಬ್ರಹ್ಮಣ್ಯದಲ್ಲಿ ಉತ್ತಮ ಮಳೆಯಾಗಿದೆ.

ಉಡುಪಿ ಜಿಲ್ಲೆಯ ಬಜಗೋಳಿ, ಮಾಳ, ಹೊಸ್ಮಾರು ಭಾಗದಲ್ಲಿ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆಯಾಗಿದೆ. ಹೆಬ್ರಿಯಲ್ಲಿ ಶನಿವಾರ ಸಂಜೆಯೂ ಧಾರಾಕಾರ ಮಳೆ ಸುರಿದಿದೆ. ಕೋಟೇಶ್ವರ, ಕಾಳಾವರ, ಬಿದ್ಕಲ್ ಕಟ್ಟೆ, ಮೊಳಹಳ್ಳಿ, ಹಾಲಾಡಿ, ಗೋಳಿಯಂಗಡಿ, ಮಡಾಮಕ್ಕಿಯಲ್ಲಿಯೂ ಉತ್ತಮ ಮಳೆಯಾಗಿದೆ. ಉಡುಪಿ ನಗರ ಮತ್ತು ಮಣಿಪಾಲದಲ್ಲಿ ತುಂತುರು ಮಳೆಯಾಗಿದೆ.

ಸಿದ್ದಾಪುರ, ಹೊಸಂಗಡಿ, ಯಡಮೊಗೆ, ಹಳ್ಳಿಹೊಳೆ, ಅಜ್ರಿ, ಅಂಪಾರು, ಶಂಕರನಾರಾಯಣ, ಹಾಲಾಡಿ, ಗೋಳಿಯಂಗಡಿ, ಬೆಳ್ವೆ, ಹೆಂಗವಳ್ಳಿ, ಅಮಾಸೆಬೈಲು ಭಾಗದಲ್ಲಿ ಭಾರಿ ಮಳೆಯಾಗಿದೆ.

ಸುಬ್ರಹ್ಮಣ್ಯ, ಬಿಳಿನೆಲೆ, ನೆಟ್ಟಣ, ಕೊಂಬಾರು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅರ್ಧ ಗಂಟೆ ಕಾಲ ಮಳೆ ಸುರಿದಿದೆ. ಕಡಬದ ಕೆಲವೆಡೆಯೂ ಮಳೆಯಾಗಿದೆ.ಬೆಳ್ತಂಗಡಿಯಲ್ಲಿ ಮಳೆಯಿಂದಾಗಿ ಎನ್‌ಎಚ್‌ ಅಗಲೀಕರಣ ಕಾಮಗಾರಿಗೆ ಅಗೆದ ಮಣ್ಣು ರಸ್ತೆಬದಿಯಲ್ಲಿ ರಾಶಿ ಬಿದ್ದಿದ್ದರಿಂದ ರಸ್ತೆಯಲ್ಲಿ ಕೆಸರು ತುಂಬಿತ್ತು. ರಾಷ್ಟ್ರೀಯ ಹೆದ್ದಾರಿಯ ಸುಮಾರು ನಾಲ್ಕು ಕಿ.ಮೀ ವಿಸ್ತೀರ್ಣ ಅಗೆದಿದ್ದು, ರಸ್ತೆ ಜಾರುತ್ತಿದ್ದರಿಂದ ವಾಹನ ಸವಾರರು ವಾಹನಗಳನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. ಏಪ್ರಿಲ್ 14 ಕ್ಕೆ ಹವಾಮಾನ ಇಲಾಖೆಯಿಂದ ಯಾವುದೇ ಎಚ್ಚರಿಕೆಗಳನ್ನು ಘೋಷಿಸಲಾಗಿಲ್ಲ. , ಕರಾವಳಿ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.

RELATED ARTICLES
- Advertisment -
Google search engine

Most Popular