Sunday, July 21, 2024
Homeಮಂಗಳೂರುಏಳು ವರ್ಷಗಳ ಬಳಿಕ ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಮತ್ತೆ ಹಡಗು ಪ್ರಯಾಣ ಆರಂಭ

ಏಳು ವರ್ಷಗಳ ಬಳಿಕ ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಮತ್ತೆ ಹಡಗು ಪ್ರಯಾಣ ಆರಂಭ

ಮಂಗಳೂರು: ಮಂಗಳೂರು-ಲಕ್ಷದ್ವೀಪದ ನಡುವೆ ಏಳು ವರ್ಷಗಳ ಬಳಿಕ ಮತ್ತೆ ಹೈಸ್ಪೀಡ್ ಹಡಗು ಪ್ರಯಾಣ ಆರಂಭವಾಗಿದೆ. ಲಕ್ಷದ್ವೀಪದಿಂದ ಗುರುವಾರ ಸಂಜೆ ಆಗಮಿಸಿದ ಪರೇಲಿ ಎಂಬ ಐಶಾರಾಮಿ ಹಡಗಿನಲ್ಲಿ ಆಗಮಿಸಿದ ಪ್ರಯಾಣಿಕರನ್ನು ನಗರದ ಹಳೆ ಬಂದರಿನಲ್ಲಿ ಸ್ವಾಗತಿಸಲಾಯಿತು.

ಈ ಐಶಾರಾಮಿ ಹಡಗಿನಲ್ಲಿ 150 ಪ್ರಯಾಣಿಕರು ಸೇರಿದಂತೆ ಎಂಟು ಮಂದಿ ಸಿಬ್ಬಂದಿ, ಓರ್ವ ಪೈಲಟ್, ಚೀಫ್ ಎಂಜಿನಿಯರ್ಮ ಸಹಾಯಕ ಇಂಜಿನಿಯರ್ ಬಂದಿಳಿದಿದ್ದಾರೆ. ಈ ಹಡಗು ಇಂದು ಬೆಳಿಗ್ಗೆ ಮತ್ತೆ ಲಕ್ಷದ್ವೀಪದತ್ತ ಪ್ರಯಾಣ ಬೆಳೆಸಿದೆ. ಇದು ಮಂಗಳೂರು ಮತ್ತು ಲಕ್ಷದ್ವೀಪದ ನಡುವಿನ ಬಾಂಧವ್ಯವನ್ನು ಮತ್ತೆ ಬೆಸೆಯುವ ಆಶಾದಾಯಕ ಬೆಳವಣಿಗೆಯಾಗಿದೆ.

ಲಕ್ಷದ್ವೀಪದಿಂದ ಮಂಗಳೂರು ತಲುಪಲು ಸರಾಸರಿ 13 ಗಂಟೆ ಅಗತ್ಯ. ಆದರೆ ಅತಿ ವೇಗದ ಈ ಪರೇಲಿ ಎಂಬ ಹಡಗು ಏಳು ಗಂಟೆಯಲ್ಲಿ ಮಂಗಳೂರು ತಲುಪಿದೆ. ಪ್ರತಿ ಪ್ರಯಾಣಿಕರಿಗೆ 350 ರೂ. ದರ ಎನ್ನಲಾಗಿದೆ.

ಮಂಗಳೂರಿಗೆ ಹಡಗು ಪ್ರಯಾಣ ನಿಲ್ಲಿಸಲ್ಪಟ್ಟ ಬಳಿಕ, ಲಕ್ಷದ್ವೀಪದಿಂದ ಮಂಗಳೂರಿಗೆ ಬರುವವರು ಅಥವಾ ಅಲ್ಲಿಗೆ ಹೋಗುವವರು ಕೇರಳದ ಕೊಚ್ಚಿ, ಕಲ್ಲಿಕೋಟೆಗೆ ಹೋಗಿ ಅಲ್ಲಿಂದ ಹೋಗಬೇಕಾಗಿತ್ತು ಅಥವಾ ಅಲ್ಲಿಗೆ ಬಂದು ಅಲ್ಲಿಂದ ಬರಬೇಕಾಗಿತ್ತು.

RELATED ARTICLES
- Advertisment -
Google search engine

Most Popular