ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಪಿಎಂಶ್ರೀ ಸರಕಾರಿ ಉನ್ನತ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನೆಲ್ಯಾಡಿಯಲ್ಲಿ ಮೇರಿ ಜೋನ್ ಇವರು ಶಿಕ್ಷಕ ವೃತ್ತಿಯನ್ನು ಮಾಡುತ್ತಿದ್ದು, ಹಲವಾರು ಕಡೆ ಉತ್ತಮ ಸಮಾಜ ಸೇವೆ, ಉತ್ತಮ ತರಬೇತಿದಾರರಾಗಿ ಮಾರ್ಗದರ್ಶನವನ್ನು ನೀಡುತ್ತ ಹಲವಾರು ಜನರ ಮತ್ತು ಮಕ್ಕಳ ಮೆಚ್ಚುಗೆಗೆ ಪಾತ್ರರಾಗಿದ್ದು ಕರುನಾಡಿಗೆ ಉತ್ತಮ ಸೇವೆಯನ್ನು ಸಲ್ಲಿಸಿದ್ದಾರೆ. ಇವರಿಗೆ ಮಂಗಳೂರಿನ ಪಣಂಬೂರು ಬೀಚಿನಲ್ಲಿ ನಡೆದ ಜನಪದ ಕಡಲೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಪ್ರಶಸ್ತಿ ದೊರೆತಿದೆ.