ಮಂಗಳೂರು: ದಕ್ಷಿಣ ಭಾರತದ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಒಂದಾಗಿರುವ ಮಂಗಳೂರಿಗೆ ಪ್ರತ್ಯೇಕ ರೈಲ್ವೆ ವಿಭಾಗ ರಚಿಸುವಂತೆ ರೈಲ್ವೆ ಸಚಿವಾಲಯದ ಅಧ್ಯಕ್ಷರಿಗೆ ಆನ್‌ಲೈನ್ ಪಿಟಿಷನ್ ಅಭಿಯಾನ ಆರಂಭವಾಗಿದೆ. www.change.org ವೆಬ್‌ಸೈಟ್‌ನಲ್ಲಿ ಪಿಟಿಷನ್ ತೆರೆಯಲ್ಪಟ್ಟಿದ್ದು, ಸಾರ್ವಜನಿಕರ ಬೆಂಬಲಕ್ಕೆ ಕೋರಲಾಗಿದೆ.
ಜು.2ರಂದು ಆನ್‌ಲೈನ್ ಪಿಟಿಷನ್ ಅಭಿಯಾನ ಆರಂಭಿಸಲಾಗಿದ್ದು, 2,500 ಬೆಂಬಲಿಗರ ಗುರಿ ಇರಿಸಲಾಗಿದೆ. ಸದ್ಯಕ್ಕೆ ಕೇವಲ ಎರಡು ದಿನದಲ್ಲಿ 1885 ಮಂದಿ ಈ ಆನ್‌ಲೈನ್ ಅರ್ಜಿಗೆ ಸಹಿ ಮಾಡಿದ್ದಾರೆ.
ದಕ್ಷಿಣ ಭಾರತದ ಪ್ರಮುಖ ವಾಣಿಜ್ಯ ಹಾಗೂ ಪ್ರವಾಸಿ ಕೇಂದ್ರವಾಗಿರುವ ಮಂಗಳೂರಿಗರಿಗೆ ಹೊರಗಿನ ಸಂಪರ್ಕಕ್ಕೆ ಮತ್ತು ಹೊರಗಿನವರು ಮಂಗಳೂರನ್ನು ಸಂಪರ್ಕಿಸುವುದಕ್ಕೆ ಇಲ್ಲಿಗೆ ಪ್ರತ್ಯೇಕ ರೈಲ್ವೆ ವಲಯದ ಅಗತ್ಯವಿದೆ. ತಕ್ಷಣವೇ ಇಲ್ಲಿಗೆ ಸೂಕ್ತ ಕಂಡಂತೆ ಪ್ರತ್ಯೇಕ ರೈಲ್ವೆ ವಲಯ ರಚಿಸುವಂತೆ ಮನವಿಯಲ್ಲಿ ಕೋರಲಾಗಿದೆ.
ಮಂಗಳೂರಿಗೆ ಪ್ರತ್ಯೇಕ ರೈಲ್ವೆ ವಲಯ ಬೇಕೆಂದು ಬಯಸುವವರು ಈ ಆನ್‌ಲೈನ್ ಪಿಟಿಷನ್ ಅಭಿಯಾನ ಬೆಂಬಲಿಸುವುದಕ್ಕಾಗಿ ಕೆಳಗೆ ನೀಡಲಾದ ಲಿಂಕ್ ಕ್ಲಿಕ್ ಮಾಡಿ, ಅಲ್ಲಿ ನಿರ್ದೇಶಿಸಲಾದಂತೆ ಸಹಿ ಮಾಡಬಹುದು…