Tuesday, April 22, 2025
Homeಮಂಗಳೂರುಮಂಗಳೂರು: ಅಂತಾರಾಷ್ಟ್ರೀಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಸಾಗರ್ ದೇವಾಡಿಗರಿಗೆ FIP MEDAL

ಮಂಗಳೂರು: ಅಂತಾರಾಷ್ಟ್ರೀಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಸಾಗರ್ ದೇವಾಡಿಗರಿಗೆ FIP MEDAL

ಮಂಗಳೂರು: ಕೊಲ್ಕತ್ತಾದ ಬ್ಯಾರಕ್‌ಪೊರ್‌ನ ಥ್ರೂ ದಿ ಲೆನ್ಸ್ ಇಂಟರ್ನ್ಯಾಷನಲ್ ಡಿಜಿಟಲ್ ಸಲೂನ್-2025 ಆಯೋಜನೆಯ ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಮಂಗಳೂರಿನ ಕೊಂಚಾಡಿಯ ಸಾಗರ್ ದೇವಾಡಿಗರಿಗೆ FIP MEDAL ಪಡೆದಿದ್ದಾರೆ.

2025ರ ಫೆಬ್ರವರಿ 4ರಂದು ನಡೆದ ಮಂಗಳೂರಿನ ಪ್ರಸಿದ್ಧ ಕೊಡಿಯಲ್ ತೇರು ಉತ್ಸವದ ಛಾಯಾ ಚಿತ್ರವನ್ನು ಸಾಗರ್ ದೇವಾಡಿಗ ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದರು. ಇದೀಗ ಈ ಛಾಯಾಚಿತ್ರಕ್ಕೆ ಅಂತಾರಾಷ್ಟ್ರೀಯ ಛಾಯಾಚಿತ್ರ ಪ್ರಶಸ್ತಿ ಲಭಿಸಿದೆ.

ಕೊಂಚಾಡಿಯ ಸಾಗರ್ ದೇವಾಡಿಗ ಅವರಿಗೆ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಪ್ರಶಸ್ತಿ ಸೇರಿ ಹಲವು ಚಿನ್ನದ ಪದಕ ನಗದು ಪುರಸ್ಕಾರಗಳು ಲಭಿಸಿದೆ.

RELATED ARTICLES
- Advertisment -
Google search engine

Most Popular