ನಗರದ ಪಿವಿಎಸ್ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿರುವ ಇಸ್ಕಾನ್ ಸಂಸ್ಥೆಯ ಆಶ್ರಯದಲ್ಲಿ ವೈಕುಂಠ ಏಕಾದಶಿಯ ಉತ್ಸವ ಶುಕ್ರವಾರ ಸಂಸ್ಥೆಯ ಅಧ್ಯಕ್ಷ ಗುಣಕರ ರಾಮದಾಸರ ಮಾರ್ಗದರ್ಶನದಲ್ಲಿ ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಯಿತು. ಉತ್ಸವದ ಪೂಜಾವಿಧಿವಿಧಾನಗಳು ಪ್ರಾತಃಕಾಲದ ದ್ವಾರ ಪೂಜೆ, ಶೃಂಗಾರ ಪೂಜೆ ಮತ್ತು ಸಂಜೆ ಪುಷ್ಪಾರ್ಚನೆಯೊಂದಿಗೆ ಸಾಗಿತು. ಮಧ್ಯಾಹ್ನ ಹಾಗೂ ಸಂಜೆ ಧಾರ್ಮಿಕ ಹರಿಕಥಾ ಮತ್ತು ಪ್ರವಚನ ಜರುಗಿತು. ರಾತ್ರಿ ಮಹಾಮಂಗಳಾರತಿಯೊಂದಿಗೆ ಸಮಾಪನಗೊಂಡಿತು. ಉಪಾಧ್ಯಕ್ಷ ಸನಾಂದನ ದಾಸ, ಸುಂದರ ಗೌರದಾಸ ಮತ್ತು ನಂದನದಾಸ ಈ ಉತ್ಸವಕ್ಕೆ ಸಹಕರಿಸಿದ್ದರು. ಸಹಸ್ರಾರು ಭಕ್ತಾಭಿಮಾನಿಗಳು ದೇವರ ಅನುಗ್ರಹ ಪಡೆದು ಪ್ರಸಾದ ಸ್ವೀಕರಿಸಿದರು.
ಮಂಗಳೂರು: ಇಸ್ಕಾನ್ ಸಂಸ್ಥೆಯ ಆಶ್ರಯದಲ್ಲಿ ವೈಕುಂಠ ಏಕಾದಶಿಯ ಉತ್ಸವ
RELATED ARTICLES