Saturday, April 26, 2025
Homeಮಂಗಳೂರುಅಂತಾರಾಷ್ಟ್ರೀಯ ಕಿರೀಟ ಗೆದ್ದ ಮಂಗಳೂರಿನ ವೈದ್ಯೆ ಡಾ.ನಿಶಿತಾ ಶೆಟ್ಟಿಯಾನ್ ಫೆರ್ನಾಂಡಿಸ್

ಅಂತಾರಾಷ್ಟ್ರೀಯ ಕಿರೀಟ ಗೆದ್ದ ಮಂಗಳೂರಿನ ವೈದ್ಯೆ ಡಾ.ನಿಶಿತಾ ಶೆಟ್ಟಿಯಾನ್ ಫೆರ್ನಾಂಡಿಸ್

ಮಂಗಳೂರು : ಮಂಗಳೂರಿನ ಖ್ಯಾತ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ.ನಿಶಿತಾ ಶೆಟ್ಟಿಯಾನ್ ಫೆರ್ನಾಂಡಿಸ್ ಅವರು ಇತ್ತೀಚೆಗೆ ಫಿಲಿಪೈನ್ಸ್ ಮನಿಲಾದಲ್ಲಿ ನಡೆದ ಮಿಸೆಸ್ ಇಂಡಿಪೆಂಡೆಂಟ್ ಇಂಟರ್‌ನ್ಯಾಷನಲ್ ಪೇಜೆಂಟ್‌ನಲ್ಲಿ ಪ್ರಥಮ ರನ್ನರ್ ಅಪ್ ಆಗಿ ಮೂಡಿ ಬಂದಿದ್ದಾರೆ.

ವಿಶ್ವದ ಹದಿನೇಳಕ್ಕೂ ಅಧಿಕ ದೇಶಗಳ ಸ್ಪರ್ಧಿಗಳು ಕೊನೆಯ ಹಂತದ ಸ್ಫರ್ದೆಗೆ ಆಯ್ಕೆಗೊಂಡಿದ್ದರು, ಅವರಲ್ಲಿ ಡಾ.ನಿಶಿತಾ ಶೆಟ್ಟಿಯಾನ್ ಫೆರ್ನಾಂಡಿಸ್ ಪ್ರಥಮ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದು, ಮಿಸೆಸ್ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದ ಮಂಗಳೂರಿನ ಪ್ರಥಮ ಮಹಿಳೆಯಾಗಿದ್ದಾರೆ. ಬೆಸ್ಟ್ ನ್ಯಾಷನಲ್ ಕಾಸ್ಟ್ಯೂಮ್ ಅವಾರ್ಡ್, ಬೆಸ್ಟ್ ಟ್ಯಾಲೆಂಟ್ ಸಬ್‌ಟೈಟಲ್‌ಗಳು ಕೂಡ ದೊರೆತಿದೆ.

ನಗರದ ಏಜೆ ಹಾಗೂ ಅತೆನಾ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಫ್ಯಾಶನ್ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿದ್ದು, ಈಗಾಗಲೇ 2023ರಲ್ಲಿ ನಡೆದ ಡಾಕ್ಟರ್ಸ್ ಫ್ಯಾಶನ್ ರ‌್ಯಾಂಪ್‌ನಲ್ಲಿ ವಿಜೇತರಾಗಿದ್ದು ಮಾತ್ರವಲ್ಲದೆ ಮಿಸೆಸ್ ಇಂಡಿಯಾ ಕರ್ನಾಟಕ ಮಂಗಳೂರು 5ನೇ ಆವೃತ್ತಿಯ ಕಿರೀಟ ಪಡೆದುಕೊಂಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಮಿಸೆಸ್ ಇಂಡಿಯಾ ಕರ್ನಾಟಕ ದಿವಾ 2024, ಮಿಸೆಸ್ ಇಂಡಿಯಾ ಇಂಡಿಪೆಂಡೆಂಟ್‌ ಇಂಟರ್ನ್ಯಾಷನಲ್ 2024 ಕಿರೀಟಗಳನ್ನು ಗೆದ್ದು, ಅಂತಾರಾಷ್ಟ್ರೀಯ ಮಟ್ಟಕ್ಕೆ ಅರ್ಹತೆ ಗಳಿಸಿಕೊಂಡಿದ್ದರು.

ಪಾತ್‌ವೇ ಮಾಡಲಿಂಗ್‌ನ ದೀಪಕ್ ಗಂಗೂಲಿ, ಮರ್ಸಿ ಬ್ಯೂಟಿ ಅಕಾಡೆಮಿಯ ಮರ್ಸಿ ವೀಣಾ ಡಿಸೋಜಾ ಅವರ‌ ಮಾರ್ಗದರ್ಶನದಲ್ಲಿ ಸೌಂದರ್ಯ ಸ್ಪರ್ಧೆಗೆ ತಯಾರಿಯನ್ನು ಮಾಡಿಕೊಂಡಿದ್ದರು. ಅದೇ ರೀತಿ ಟಾಲೆಂಟ್ ರೌಂಡ್‌ಗೆ ಪ್ರಮೋದ್ ಆಳ್ವ ನೃತ್ಯ ತರಬೇತಿ ನೀಡಿದ್ದರು. ಅಂತಾರಾಷ್ಟ್ರೀಯ ಸ್ಪರ್ಧೆಗೆ ನ್ಯಾಷನಲ್ ಕಾಸ್ಟ್ಯೂಮ್ ಸ್ಪರ್ಧೆಗೆ ಕಲಾವಿದ ಜೆ.ಪಿ. ಆಚಾರ್ಯ ವಸ್ತ್ರ ವಿನ್ಯಾಸ ಮಾಡಿದ್ದರು.

ಅಂತಾರಾಷ್ಟ್ರೀಯ ಕಿರೀಟ ಗೆದ್ದಿರುವುದು ತುಂಬಾ ಸಂತಸವಾಗಿದೆ. ನನ್ನ ಮೆಂಟರ್‌ಗಳು ಸೇರಿದಂತೆ ಎಲ್ಲಾ ಹಿತೈಷಿಗಳು ತುಂಬಾ ಸಪೋರ್ಟ್ ಮಾಡಿದ್ದಾರೆ. ಪತಿ ಡಾ.ರಾಯನ್ ಫೆರ್ನಾಂಡಿಸ್, ಹೆತ್ತವರು ಹಾಗೂ ಮಕ್ಕಳೂ ಸಹಕಾರ ನೀಡಿದ್ದಾರೆ ಎನ್ನುತ್ತಾರೆ ಡಾ.ನಿಶಿತಾ ಶೆಟ್ಟಿಯಾನ್ ಫೆರ್ನಾಂಡಿಸ್.

RELATED ARTICLES
- Advertisment -
Google search engine

Most Popular