ಮಂಗಳೂರು: ಮಹಿಳೆಯನ್ನು ಬೆದರಿಸಿ ಹಣ ದೋಚಿದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಬೊಂದೇಲ್ ಪಟ್ರಕೋಡಿಯ ಸುನೀಲ್ (31) ಬಂಧಿತ ಆರೋಪಿಯಾಗಿದ್ದಾನೆ.
ಆರೋಪಿಯು ನಾಗುರಿಯ ಮೆಡಿಕಲ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಉದ್ಯೋಗಿಗೆ ಚೂರಿ ತೋರಿಸಿ, ಹಲ್ಲೆ ನಡೆಸಿ, ಶಾಪ್‌ನ ಕ್ಯಾಶ್ ಡ್ರಾವರ್‌ನಲ್ಲಿದ್ದ 19,300 ರೂ. ನಗದನ್ನು ದೋಚಿ ಪರಾರಿಯಾಗಿದ್ದ.
ಅದರಂತೆ ಆರೋಪಿ ಸುನೀಲ್‌ನನ್ನು ದಸ್ತಗಿರಿ ಮಾಡಿ ದೋಚಿದ್ದ 17,500 ರೂ. ನಗದನ್ನು ಹಾಗೂ ಸುಲಿಗೆ ಮಾಡಲು ಬಳಸಿದ ಸ್ಕೂಟರ್ ಹಾಗೂ ಇತರ ಸೊತ್ತುಗಳು ಸೇರಿದಂತೆ ಒಟ್ಟು 1,20,000 ರೂ. ಬೆಲೆ ಬಾಳುವ ಸೊತ್ತುಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.