Thursday, December 5, 2024
Homeಮಂಗಳೂರುಮಂಗಳೂರು : ಪ್ರೀತಿಸಿ ಮದುವೆಯಾದ ಗಂಡನಿಂದ ಹೆಂಡತಿಯ ಮೇಲೆ ಹಲ್ಲೆ ಮತ್ತು ತ್ರಿವಳಿ ತಲಾಖ್

ಮಂಗಳೂರು : ಪ್ರೀತಿಸಿ ಮದುವೆಯಾದ ಗಂಡನಿಂದ ಹೆಂಡತಿಯ ಮೇಲೆ ಹಲ್ಲೆ ಮತ್ತು ತ್ರಿವಳಿ ತಲಾಖ್

ಮಂಗಳೂರು : ಪ್ರೀತಿಸಿ ಮದುವೆಯಾಗಿ ಹೆಂಡತಿಗೆ ದೈಹಿಕವಾಗಿ ಹಲ್ಲೆ, ಕಿರುಕುಳ ನೀಡಿವುದರ ಜೊತೆಗೆ ತ್ರಿವಳಿ ತಲಾಖ್ ನೀಡಿದ ಗಂಡನ ವಿರುದ್ದ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಉಳ್ಳಾಲದಲ್ಲಿ ನಡೆದಿದ್ದು, ಈ ಬಗ್ಗೆ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತ್ರಿವಳಿ ತಲಾಖ್ ನೀಡಿದ ಆರೋಪಿಯನ್ನು ಉಳ್ಳಾಲ ಸಮ್ಮರ್ ಸ್ಯಾಂಡ್ ಸಮೀಪದ ನಿವಾಸಿ ಮೊಹಮ್ಮದ್ ದಿಲ್ಫಾಝ್ ಹಾಗೂ ಸಂತ್ರಸ್ಥ ಮಹಿಳೆಯನ್ನು ಹೀನಾ ಫಾತಿಮಾ ಎಂದು ಗುರುತಿಸಲಾಗಿದೆ.

ಈ ಜೋಡಿ 2019ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ ಬಳಿಕ ದಿಲ್ಫಾಝ್ ತಮ್ಮ ಹೆಂಡತಿ ಜೊತೆ ಅನೋನ್ಯವಾಗಿಯೇ ಇದ್ದ.ಈ ನಡುವೆ ದಿಲ್ ಫಾಜ್ ಅನ್ಯ ಮಹಿಳೆಯರ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ಪತ್ನಿ ಪ್ರಶ್ನಿಸಿದ್ದಾರೆ. ಈ ವೇಳೆ ಪತ್ನಿ ಮೇಲೆ ದೈಹಿಕ ಹಲ್ಲೆ ನಡೆಸಿದ್ದು, ಪತ್ನಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಬಂದ ನಂತರ ಕುಟುಂಬದ ಹಿರಿಯರು ಸೇರಿ ದಿಲ್ಪಾಜ್‌ಗೆ ಬುದ್ದಿವಾದ ಹೇಳಿದ್ದರು.

ನಂತರವೂ ಸುಧಾರಿಸದ ದಿಲ್ಫಾಝ್ ನನ್ನು, ನ.8ರಂದು ಹೀನಾ ಫಾತಿಮಾ ತಂದೆ ಸಬೀಲ್ ಅಹಮ್ಮದ್ ಪ್ರಶ್ನಿಸಿದಾಗ, ಪತ್ನಿ ಮೇಲೆ ಹಲ್ಲೆ ನಡೆಸಿ ಅದೇ ದಿನ ರಾತ್ರಿ ಸಬೀಲ್ ಅಹಮ್ಮದ್ ಅವರನ್ನು ತನ್ನ ಮನೆಗೆ ಕರೆದು, ಅವರ ಎದುರಿನಲ್ಲಿ ಪತ್ನಿ ಹೀನಾಗೆ ತಲಾಖ್..ತಲಾಖ್..ತಲಾಖ್ ಎಂದು ಹೇಳಿ “ನೀನು ನನ್ನ ಪತ್ನಿಯಲ್ಲ” ಎಂದು ಹೇಳಿ ಮನೆಯಿಂದ ಹೊರ ಹಾಕಿದ್ದಾನೆ ಎಂದು ದೂರು ದಾಖಲಿಸಲಾಗಿದೆ. ಮುಸ್ಲಿಂ ಮಹಿಳೆಯರ ವಿವಾಹ ಹಕ್ಕುಗಳ ಸಂರಕ್ಷಣೆ ಕಾಯ್ದೆ ಅಡಿಯಲ್ಲಿ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.

RELATED ARTICLES
- Advertisment -
Google search engine

Most Popular