Wednesday, April 23, 2025
Homeಮಂಗಳೂರುಮಂಗಳೂರು ಕೋಸ್ಟ್ ಗಾರ್ಡ್ ಅಧಿಕಾರಿಯ ಪುತ್ರನ ನಾಪತ್ತೆ..!

ಮಂಗಳೂರು ಕೋಸ್ಟ್ ಗಾರ್ಡ್ ಅಧಿಕಾರಿಯ ಪುತ್ರನ ನಾಪತ್ತೆ..!

ಮಂಗಳೂರು : ಮಂಗಳೂರು ಕೋಸ್ಟ್ ಗಾರ್ಡ್ ಕಚೇರಿಯಲ್ಲಿ ಅಧಿಕಾರಿಯಾಗಿರುವ ಪಶ್ಚಿಮ ಬಂಗಾಳ ಮೂಲದ ಜೀವನ್ ಕುಮಾರ್ ಎಂಬವರ ಪುತ್ರ, ಪಿಯುಸಿ ವಿದ್ಯಾರ್ಥಿ ಹಿತೇನ್ ಬದ್ರ (17) ಮಾ.12ರಂದು ಕುಂಜತ್ತಬೈಲಿನ ತನ್ನ ಮನೆಯಿಂದ ತೆರಳಿದಾತ ನಾಪತ್ತೆಯಾಗಿದ್ದಾನೆ.

ಹಿತೇನ್ ಅಂದು ಬೆಳಗ್ಗೆ ಮನೆಯಿಂದ ಹೋಗಿದ್ದು, ಮೊಬೈಲ್ ಫೋನ್ ಮತ್ತು ಪರ್ಸ್ ಅನ್ನು ಮನೆಯಲ್ಲೇ ಬಿಟ್ಟು ಹೋಗಿದ್ದ. ಆತನನ್ನು ಯಾರಾದರೂ ಪುಸಲಾಯಿಸಿ ಅಪಹರಿಸಿರುವ ಸಾಧ್ಯತೆಯಿದೆ ಎಂದು ತಂದೆ ಕಾವೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಜೀವನ್ ಕುಮಾರ್ ಪಶ್ಚಿಮ ಬಂಗಾಳ ಜಿಲ್ಲೆಯ ಜಡಾಗ್ರಾಮ್ ಜಿಲ್ಲೆಯ ನಿವಾಸಿಯಾಗಿದ್ದು, ಕೆಲವು ವರ್ಷಗಳಿಂದ ಮಂಗಳೂರಿನ ಪಣಂಬೂರು ಕಚೇರಿಯಲ್ಲಿ ಕರ್ತವ್ಯದಲ್ಲಿದ್ದಾರೆ. ಹುಡುಗನ ದೇಹ ಚಹರೆ 172 ಸೆಂ.ಮೀ. ಎತ್ತರ, ಕಾಣೆಯಾದ ದಿನ ಬಿಳಿ ಬಣ್ಣದ ಚಪ್ಪಲಿ, ತಿಳಿ ಹಸುರು ಬಣ್ಣದ ರೌಂಡ್ ಟಿ ಶರ್ಟ್, ನೀಲಿಬಣ್ಣದ ಟ್ರ್ಯಾಕ್ ಸೂಟ್ ಮತ್ತು ಬಿಳಿ ಬಣ್ಣದ ಕನ್ನಡಕ ಧರಿಸಿದ್ದ.

ಇಂಗ್ಲಿಷ್, ಹಿಂದಿ, ಓಡಿಯಾ ಭಾಷೆ ಮಾತನಾಡುತ್ತಾನೆ. ಹಣೆಯ ಮೇಲೆ ಮಧ್ಯದಲ್ಲಿ ಕಪ್ಪು ಮಚ್ಚೆ ಇದೆ. ಕುಂಜತ್ತಬೈಲಿನ ಕೋಸ್ಟ್ ಗಾರ್ಡ್ ವಸತಿಗೃಹದಲ್ಲಿ ವಾಸವಾಗಿದ್ದಾರೆ. ಯುವಕನ ಬಗ್ಗೆ ಮಾಹಿತಿ ಇದ್ದಲ್ಲಿ ಕಾವೂರು ಪೊಲೀಸ್ ಠಾಣೆಗೆ ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular