ಬಂಟ್ವಾಳ: ತಾಲೂಕಿನ ಮಣಿನಾಲ್ಕೂರು ಗ್ರಾಮದ ನೇಲ್ಯಪಲ್ಕೆ ಭಾಗದಲ್ಲಿ ಇಂದು ಬೆಳಿಗ್ಗೆ ಸುರಿದ ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ಅಂಗಡಿ ಮುಂಗಟ್ಟುಗಳ ಮೇಲ್ಛಾವಣಿಯ ಶೀಟ್‌ಗಳು ಹಾರಿ ಹೋದ ಘಟನೆ ನಡೆದಿದೆ. ಜೋರಾದ ಗಾಳಿ ಮಳೆಗೆ ಖಾದರ್ ಇಕ್ರಾ ಎಂಬವರಿಗೆ ಸೇರಿದ ಕಾಂಪ್ಲೆಕ್ಸ್‌ನ ಮುಂಭಾಗದ ಶೀಟ್‌ಗಳು ಹಾರಿಹೋಗಿದ್ದು, ಅದರ ವಿಡಿಯೋ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ.