ಮಣಿಪಾಲ; 21 ಅಕ್ಟೋಬರ್ 2024: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) ಐ ಈ ಎಲ್ ಟಿ ಎಸ್ ಪರೀಕ್ಷಾ ಕೇಂದ್ರವಾಗಿ ಆಥಿತ್ಯ ವಹಿಸಲಿರುವ ಭಾರತದ ಮೊದಲ ವಿಶ್ವವಿದ್ಯಾನಿಲಯವಾಗಿ ಗಮನಾರ್ಹ ಮೈಲಿಗಲ್ಲನ್ನು ಸಾಧಿಸಿದೆ. ಈ ಹೊಂದಾಣಿಕೆಗಾಗಿ ಮಾಹೆ ಮಣಿಪಾಲವು ಐಡಿಪಿ ಎಜುಕೇಶನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ನವದೆಹಲಿಯೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ. ಪರೀಕ್ಷಾ ಕೇಂದ್ರಕ್ಕಾಗಿ ಈಗ ಕ್ಯಾಂಪಸ್‌ನಲ್ಲಿ ಪ್ರವೇಶಿಸಬಹುದಾಗಿದ್ದು, ವಿದ್ಯಾರ್ಥಿಗಳು ಕೋರ್ಸ್ ಮಾಡ್ಯೂಲ್‌ಗಳಿಗೆ ಅನುಕೂಲಕರ ಪ್ರವೇಶವನ್ನು ಹೊಂದಿರುತ್ತಾರೆ, ಜೊತೆಗೆ ರಿಯಾಯಿತಿ ಸದಸ್ಯತ್ವಗಳು ಮತ್ತು ಸಹಾಯಕ್ಕಾಗಿ ತರಬೇತಿ ಪಡೆದ ಅಧ್ಯಾಪಕ ಮಾರ್ಗದರ್ಶಕರಂತಹ ಹೆಚ್ಚುವರಿ ಪ್ರಯೋಜನಗಳನ್ನು ಹೊಂದಿರುತ್ತಾರೆ. ಮಾನವಿಕ ಮತ್ತು ನಿರ್ವಹಣಾ ವಿಭಾಗ, ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT), ಮಣಿಪಾಲವು ಮಾಹೆ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಕೇಂದ್ರವಾಗಿ ಕಾರ್ಯ ನಿರ್ವಹಿಸಲಿದೆ . ನವೆಂಬರ್ 7, 2024 ರಿಂದ ಮೊದಲ ಐ ಈ ಎಲ್ ಟಿ ಎಸ್ ಪೇಪರ್ ಆಧಾರಿತ ಪರೀಕ್ಷೆಗಾಗಿ ನೋಂದಣಿಗಳು ಈಗ ತೆರೆಯಲಿವೆ.
2024 ರ ಅಕ್ಟೋಬರ್ 14 ರಂದು ಮಾಹೆಯ ಕುಲಸಚಿವ ಡಾ ಗಿರಿಧರ್ ಕಿಣಿ, ಮತ್ತು ಶ್ರೀ ಕಿಶನ್ ಕುಮಾರ್ ಯಾದವ್, ಏರಿಯಾ ಮ್ಯಾನೇಜರ್ – ಐ ಈ ಎಲ್ ಟಿ ಎಸ್ ಕಾರ್ಯಾಚರಣೆಗಳು (ದಕ್ಷಿಣ ಭಾರತ), ಐ ಡಿ ಪಿ ಎಜುಕೇಶನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಅವರ ಉಪಸ್ಥಿತಿಯಲ್ಲಿ ಈ ತಿಳುವಳಿಕಾ ಒಪ್ಪಂದವನ್ನು ಅಧಿಕೃತವಾಗಿ ಕಾರ್ಯಗತಗೊಳಿಸಲಾಯಿತು.
ಡಾ.ಅನಿಲ್ ರಾಣಾ, ನಿರ್ದೇಶಕ ಎಂಐಟಿ ಮಣಿಪಾಲ, ಡಾ.ಅನುಪ್ ನಹಾ, ಡೈರೆಕ್ಟರ್ ಇಂಟರ್‌ನ್ಯಾಶನಲ್ ಸಹಯೋಗ, ಡಾ.ಯೋಗೇಶ್ ಪೈ ಪಿ, ಎಂಐಟಿ ಮಣಿಪಾಲದ ಮಾನವಿಕ ಮತ್ತು ನಿರ್ವಹಣಾ ವಿಭಾಗದ ಮುಖ್ಯಸ್ಥರು ಮತ್ತು ಸಹೋದ್ಯೋಗಿಗಳು ಈ ವಿನಿಮಯಕ್ಕೆ ಸಾಕ್ಷಿಯಾದರು. ಶ್ರೀ ಅಭಿಷೇಕ್ ಸ್ವಾಮಿ, ಸಹಾಯಕ ಟೆರಿಟರಿ ಮ್ಯಾನೇಜರ್ – ಕರ್ನಾಟಕ, ಐಡಿಪಿ ಎಜುಕೇಶನ್ ಇಂಡಿಯಾ ಪ್ರೈ. ಲಿಮಿಟೆಡ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
“ಮಾಹೆಯು ಐ ಈ ಎಲ್ ಟಿ ಎಸ್ ನ ಪರೀಕ್ಷಾ ಕೇಂದ್ರವಾಗಿ ಆಥಿತ್ಯ ವಹಿಸುವ ಭಾರತದ ಮೊದಲ ವಿಶ್ವವಿದ್ಯಾಲಯವಾಗಿದೆ ಎಂದು ನಾವು ಹೆಮ್ಮೆಪಡುತ್ತೇವೆ. ಈ ಸಾಧನೆಯು ನಮ್ಮ ವಿದ್ಯಾರ್ಥಿಗಳು ಮತ್ತು ಸಮುದಾಯಕ್ಕೆ ಜಾಗತಿಕ ಅವಕಾಶಗಳನ್ನು ಹೆಚ್ಚಿಸುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಕ್ಯಾಂಪಸ್‌ನಲ್ಲಿ ಪರೀಕ್ಷಾ ಕೇಂದ್ರವನ್ನು ಹೊಂದಿರುವುದು ಅಂತರರಾಷ್ಟ್ರೀಯ ಶಿಕ್ಷಣಕ್ಕೆ ಸುಲಭ ಪ್ರವೇಶವನ್ನು ಒದಗಿಸುತ್ತದೆ. ನಮ್ಮ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಉತ್ಕೃಷ್ಟತೆ ಮತ್ತು ಜಾಗತಿಕ ಮಾನ್ಯತೆಯನ್ನು ಉತ್ತೇಜಿಸುವಲ್ಲಿ ನಮ್ಮ ಪ್ರಯತ್ನಗಳನ್ನು ಬಲಪಡಿಸುತ್ತದೆ” ಎಂದು ಡಾ. ಗಿರಿಧರ್ ಕಿಣಿ ಹೇಳಿದರು.
ಈ ಮಹತ್ವದ ಮೈಲಿಗಲ್ಲನ್ನು ಸಾಧಿಸಿರುವುದು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳ ಸಮಗ್ರ ಅಭಿವೃದ್ಧಿಯ ಕಡೆಗೆ ಜಾಗತಿಕ ಶಿಕ್ಷಣ ಗುಣಮಟ್ಟವನ್ನು ಬೆಳೆಸುವ ಮಾಹೆಯ ಬದ್ಧತೆಗೆ ಮತ್ತೊಂದು ಪುರಾವೆಯಾಗಿದೆ. ಮಾಹೆ ಮತ್ತು ಐ ಡಿ ಪಿ ಎಜುಕೇಶನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಡುವಿನ ಈ ಜಂಟಿ ಉಪಕ್ರಮವು ವಿಶ್ವವಿದ್ಯಾನಿಲಯ ಮತ್ತು ಪ್ರದೇಶ ಎರಡರ ಮೇಲೆ ಆಳವಾದ ಪ್ರಭಾವವನ್ನು ಬೀರುತ್ತದೆ, ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ಹಲವಾರು ಮಾರ್ಗಗಳನ್ನು ಸೃಷ್ಟಿಸಲಿದೆ.