Wednesday, January 15, 2025
Homeಧಾರ್ಮಿಕಮಣಿಪಾಲ: ಕಾಸರಗೋಡು ಚಿನ್ನಾ ರವರ ಪರಿಕಲ್ಪನೆಯ ‘ಘರ್ ಘರ್ ಕೊಂಕಣಿ’ ಎನ್ನುವ 151 ನೇ ಕಾರ್ಯಕ್ರಮ

ಮಣಿಪಾಲ: ಕಾಸರಗೋಡು ಚಿನ್ನಾ ರವರ ಪರಿಕಲ್ಪನೆಯ ‘ಘರ್ ಘರ್ ಕೊಂಕಣಿ’ ಎನ್ನುವ 151 ನೇ ಕಾರ್ಯಕ್ರಮ

ಕಾಸರಗೋಡು ಚಿನ್ನಾ ಅವರ ಪರಿಕಲ್ಪನೆಯ ‘ಘರ್ ಘರ್ ಕೊಂಕಣಿ’ ಎನ್ನುವ 151 ನೇ  ಕಾರ್ಯಕ್ರಮವು ಮಣಿಪಾಲದ ಪೆರಂಪಳ್ಳಿ ರಸ್ತೆಯಲ್ಲಿರುವ ಸಾಯಿರಾಧಾ ಗ್ರೀನ್ ವೇಲಿಯ ಖ್ಯಾತ ಸಾಹಿತಿ ಕಾಡಬೆಟ್ಟು ಮನೋಹರ ನಾಯಕ್ ಮತ್ತು ಶೀಲಾ ನಾಯಕ್ ಇವರ ಆತಿಥ್ಯದಲ್ಲಿ ಏ.13 ರಂದು ಉದ್ಘಾಟನೆಗೊಂಡಿತು.

ಈ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ‘ಘರ್ ಘರ್ ಕೊಂಕಣಿ’ ಇದರ ರೂವಾರಿ ಕಾಸರಗೋಡು ಚಿನ್ನಾ ಮಾತನಾಡಿ “ಮಾತೃ ಭಾಷೆಯೇ ಅತ್ಯಂತ ಶ್ರೇಷ್ಟವಾದ ಭಾಷೆ. ಅದನ್ನು ಕಲಿಸಿದ ತಾಯಿಯೇ ಈ ಜಗತ್ತಿನ ಅತ್ಯಂತ ಶ್ರೇಷ್ಟ ದೇವರು. ಆ ಋಣವನ್ನು ತೀರಿಸಲಸಾಧ್ಯ. ಕೊನೆ ಪಕ್ಷ ಮನೆಯಲ್ಲಿ ಭಾಷೆಗಾಗಿ ದೀಪ ಹಚ್ಚುವ ಕೆಲಸ ಮಾಡಬೇಕಾಗಿದೆ” ಎಂದು ತಿಳಿಸಿದರು.

ಕೊಂಕಣಿ ಭಾಷೆಯ ಅಭಿವೃದ್ಧಿಗಾಗಿ, ಭಾಷಾ ಪ್ರೀತಿಯನ್ನು ಬೆಳೆಸುವುದಕ್ಕಾಗಿ ಹಾಗೂ ವಿವಿಧ ಪಂಗಡಗಳಲ್ಲಿ ಕೊಂಕಣಿ ಭಾಷಿಗರನ್ನು ಒಂದುಗೂಡಿಸುವುದಕ್ಕಾಗಿ ಕೊಂಕಣಿ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಕಾಸರಗೋಡು ಚಿನ್ನಾರವರು ತಮ್ಮ ಅಧಿಕಾರಾವಧಿಯಲ್ಲಿ ಪ್ರಾರಂಭಿಸಿದ ಅದ್ಭುತ ಪರಿಕಲ್ಪನೆಯ ಈ ‘ಘರ್ ಘರ್ ಕೊಂಕಣಿ’ ಎನ್ನುವ ವಿನೂತನ ಹಾಗೂ ಅದ್ಭುತ ಸಾಂಸ್ಕೃತಿಕ  ಕಾರ್ಯಕ್ರಮದಲ್ಲಿ ತರಂಗ ವಾರ ಪತ್ರಿಕೆಯ ಸಂಪಾದಕಿ ಸಂಧ್ಯಾ ಪೈ , ಖ್ಯಾತ ಸಂಗೀತಗರ ತೋನ್ಸೆ ರಂಗ ಪೈ, ರಂಗ ಕಲಾವಿದ ಶಶಿಭೂಷಣ ಕಿಣಿ, ನಿರ್ಮಾಪಕ ಟಿ.ಎ. ಶ್ರೀನಿವಾಸ  ಉಪಸ್ಥಿತರಿದ್ದರು. ಮನೋಹರ್ ನಾಯಕ್ ಅವರೇ ರಚಿಸಿದ ಕೊಂಕಣಿ ಸಂಸ್ಕೃತಿಯ ವಿವಾಹದ ಹಾಗೂ ಜೋಗುಳದ ಹಾಡುಗಳ ವಿಡಿಯೋ ಚಿತ್ರೀಕರಣ ನಡೆಯಿತು. ಕೊಂಕಣಿ ಭಾಷಿಗ ಪಂಗಡಗಳ ವೈವಿಧ್ಯಮಯ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು ಜನಮನ ಸೂರೆಗೊಂಡವು. ಚೇಂಪಿ ರಾಮಚಂದ್ರ ಭಟ್  ನಿರೂಪಣೆಗೈದರು. ಸಂಜೆಯ ಸಭಾ ಕಾರ್ಯಕ್ರಮ ಮಣಿಪಾಲದ ಹೊಟೇಲ್ ಮಧುವನ್ ಸೆರಾಯ್ ಇದರ ಮಧುರಾ ಸಭಾಂಗಣದಲ್ಲಿ ಅತ್ಯಂತ ಸಂಭ್ರಮದಿಂದ ನಡೆಯಿತು. T M A ಪೈ  ಪೌಂಡೇಶೆನ್ ಟಿ. ಅಶೋಕ್ ಪೈಯವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿ ತಮ್ಮ ಹಾಗೂ ಮನೋಹರ್ ನಾಯಕ್ ಹಾಗೂ ಅವರ ತೀರ್ಥರೂಪರ ಅನುಬಂಧದ ಬಗ್ಗೆ ಅತ್ಯಂತ ಸರಳ ಹಾಗೂ ಹೃದಯ ಸ್ಪರ್ಶಿ ಅನುಭವಗಳ ವಿಚಾರಗಳನ್ನು ಮಾತನಾಡುತ್ತಾ ಕೊಂಕಣಿ ಭಾಷೆ ಮನೆಗೆ ಮಾತ್ರ ಸೀಮಿತವಾಗದೇ ದೇವಸ್ಥಾನ , ಇತರೇ  ಸಭಾ ವೇದಿಕೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡಾಗ  ಭಾಷೆ ಬೆಳೆಯುತ್ತದೆ ಉಳಿಯುತ್ತದೆ ಎಂದು ಶುಭ ಹಾರೈಸಿದರು.

ವೇದಿಕೆಯಲ್ಲಿ ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ನಂದಗೋಪಾಲ್ ಶೆಣೈ , ವೈಶ್ಯವಾಣಿ ಸಮಾಜದ ಅಧ್ಯಕ್ಷ ವಸಂತ ನಾಯಕ್ , ಕುಡಾಳ್ ಸಮಾಜದ ಅಧ್ಯಕ್ಷ ರಾಧಾಕೃಷ್ಣ ಸಾವಂತ್ , ಕೊಂಕಣಿ ಸಾಹಿತ್ಯಕಾರ ಡಾ ಜೆರಾಲ್ಡ್ ಪಿಂಟೋ , ಸಮಾಜ ಸೇವಕ ವಿಶ್ವನಾಥ ಶೆಣೈ , ಶ್ರೀ ದುರ್ಗಾಂಭ ದೇವಸ್ಥಾನ ಅರ್ಚಕಃ ಶಿವಾನಂದ ಭಟ್ , ಖಾರ್ವಿ ಸಮಾಜದ ಲಾವಕಾರ ಖಾರ್ವಿ , ದೈವಜ್ಞ ಸಮಾಜದ ಅಧ್ಯಕ್ಷ ಸುಬ್ರಹ್ಮಣ್ಯ ಶೇಟ್ , ಪಲ್ಲವಿ ಮಡಿವಾಳ ಕುಮಟಾ , ಮನೋಹರ ನಾಯಕ್ ಮತ್ತು ಶೀಲಾ ನಾಯಕ್  ಉಪಸ್ಥಿತರಿದ್ದರು. ಕೊಂಕಣಿ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಕಾಸರಗೋಡು ಚಿನ್ನಾರವರನ್ನು  ಗೌರವಿಸಲಾಯಿತು, ಬಳಿಕ ಉಡುಪಿ ಪರಿಸರದ ವಿವಿಧ ರಂಗಗಳಲ್ಲಿ ವಿಶೇಷ ಸಾಧನೆಗೈದ  12  ಸಾಧಕರನ್ನು  ಗುರುತಿಸಿ ಸನ್ಮಾನಿಸಲಾಯಿತು ಹಾಗೂ ಇಬ್ಬರು ಯುವ ಪ್ರತಿಭಾನ್ವಿತರಿಗೆ ಯುವ ಪುರಸ್ಕಾರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ರಾಜಪುರ ಸಾರಸ್ವತ ಬ್ರಾಹ್ಮಣ, ಕುಡಾಳ ದೇಶಸ್ಥ ಆದ್ಯ ಗೌಡ ಬ್ರಾಹ್ಮಣ ಸಮಾಜ , ವೈಶ್ಯವಾಣಿ ಸಮಾಜ, ಕ್ಯಾಥೊಲಿಕ್, ಮಡಿವಾಳ, ದೇಶ್ ಭಂಡಾರಿ, ದೈವಜ್ಞ ಬ್ರಾಹ್ಮಣ, ಜಿ.ಎಸ್.ಬಿ., ಖಾರ್ವಿ ಜನಾಂಗದ ಹಲವಾರು ನಾಯಕರು , ಸಮಾಜ ಬಾಂದವರು  ಉಪಸ್ಥಿತರಿದ್ದರು. ವಿಧ್ವಾನ್  ಹರಿ ಪ್ರಸಾದ್ ಶರ್ಮಾ ಹಾಗೂ  ಚೇಂಪಿ ರಾಮಚಂದ್ರ ಭಟ್  ನಿರೂಪಣೆಗೈದರು. ವಿವಿಧ ಸಮಾಜದವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಕೊನೆಯಲ್ಲಿ ಮುಲ್ಕಿ ರವೀಂದ್ರ ಪ್ರಭು ಇವರಿಂದ ಶುಶ್ರಾವ್ಯವಾದ ಸಂಗೀತ ಕಾರ್ಯಕ್ರಮವು ಸಂಪನ್ನಗೊಂಡಿತು.

RELATED ARTICLES
- Advertisment -
Google search engine

Most Popular