Friday, February 14, 2025
Homeಮಂಗಳೂರುಅಮ್ಟೂರಿನ ಪ್ರತಿಷ್ಠಿತ ಮುಳಿಕೊಡಂಗೆ ಬಂಗೇರ ಕುಟುಂಬಸ್ಥರ ಸಮಿತಿಯ ಟ್ರಸ್ಟ್ ನೂತನ ಅಧ್ಯಕ್ಷರಾಗಿ ಪೆರಾಜೆಯ ಮನೋಹರ್ ಮಡಲ...

ಅಮ್ಟೂರಿನ ಪ್ರತಿಷ್ಠಿತ ಮುಳಿಕೊಡಂಗೆ ಬಂಗೇರ ಕುಟುಂಬಸ್ಥರ ಸಮಿತಿಯ ಟ್ರಸ್ಟ್ ನೂತನ ಅಧ್ಯಕ್ಷರಾಗಿ ಪೆರಾಜೆಯ ಮನೋಹರ್ ಮಡಲ ಆಯ್ಕೆ

ಕಲ್ಲಡ್ಕ: ಅಮ್ಟೂರಿನ ಪ್ರತಿಷ್ಠಿತ ಮುಳಿಕೊಡಂಗೆ ಬಂಗೇರ ಕುಟುಂಬಸ್ಥರ ಸಮಿತಿಯ ಟ್ರಸ್ಟ್ ರಚನೆಯಾಗಿದ್ದು ಇದರ ನೂತನ ಅಧ್ಯಕ್ಷರಾಗಿ ಪೆರಾಜೆಯ ಮನೋಹರ್ ಮಡಲ ಆಯ್ಕೆಯಾಗಿದ್ದಾರೆ. ಇವರು ಪೆರಾಜೆ-ಬುಡೋಳಿಯಲ್ಲಿ, ಧರ್ಮಸ್ಥಳ ಸ್ವಸಹಾಯ ಸಂಘ, ನವೋದಯ ಸ್ವಸಹಾಯ ಸಂಘ, ಪೆರಾಜೆ ಸ್ಮಶಾನ ಸಮಿತಿ, ಬೆಳಕು ಸೇವಾ ಟ್ರಸ್ಟ್ ಹಾಗೂ ಇನ್ನಿತರ ಹಲವಾರು ಸಂಘಟನೆಗಳಲ್ಲಿ ಪದಾಧಿಕಾರಿಯಾಗಿ ಸಮಾಜ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಇವರೊಂದಿಗೆ ಕಾರ್ಯದರ್ಶಿಯಾಗಿ ಧನುಶ್ರೀ ಅರ್ಕುಲ,‌ಕೋಶಾಧಿಕಾರಿಯಾಗಿ ಶಿವರಾಜ್ ಕುದ್ರೆಬೆಟ್ಟು ಆಯ್ಕೆಯಾಗಿರುತ್ತಾರೆ. ಬಂಗೇರ ಕುಟುಂಬದ ಮುಂದಿನ ದೈವದೇವರ ಕಾರ್ಯಕ್ರಮ, ಇನ್ನಿತರ ಆರಾಧನೆಗಳು ಮತ್ತು ಇತರ ಕಾರ್ಯಕ್ರಮಗಳಲ್ಲಿ ಈ ಸಮಿತಿ ಕಾರ್ಯ ನಿರ್ವಹಿಸಲಿದೆ.

RELATED ARTICLES
- Advertisment -
Google search engine

Most Popular