Wednesday, April 23, 2025
Homeಮಂಗಳೂರುಮನೊಹರರಾಯ್ ಸರ್ದೆಸಾಯ್ (18 ಜನವರಿ 1925 – 22 ಜೂನ್ 2006) ಜನ್ಮಶತಾಬ್ದಿ ಸಮಾರಂಭ

ಮನೊಹರರಾಯ್ ಸರ್ದೆಸಾಯ್ (18 ಜನವರಿ 1925 – 22 ಜೂನ್ 2006) ಜನ್ಮಶತಾಬ್ದಿ ಸಮಾರಂಭ

ಕೊಂಕಣಿ ಕಾವ್ಯ-ಕವಿತೆ ಕ್ಷೆತ್ರಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಹಿರಿಯ ಕವಿ, ಮುಂಬೈ ಗೋವಾ ವಿಶ್ವವಿದ್ಯಾನಿಲಯಗಳ ಫ್ರೆಂಚ್ ಭಾಷಾ ಪ್ರೊಫೆಸ್ಸರ್ ಹಾಗೂ ಅನುವಾದಕ, ರೇಡಿಯೊ ದೂರದರ್ಶನದಲ್ಲಿ ಸತತವಾಗಿ ಕೊಂಕಣಿ ಕಾರ್ಯಕ್ರಮಗಳನ್ನು ನೀಡುತ್ತಿದ್ದ ಡಾ. ಮನೋಹರರಾಯ್ ಸರ್ದೆಸಾಯ್ ಅವರ ಜನ್ಮಶತಾಬ್ದಿ ಆಚರಣೆಯನ್ನು ದಿ16, ಮಾರ್ಚ್ ಆದಿತ್ಯವಾರದಂದು ಅರ್ಥಪೂರ್ಣವಾಗಿ ಆಚರಿಸಲಾಗುವುದು
ಕಾರ್ಯಕ್ರಮಗಳ ವಿವರ: ಈ ದಿನ ಬೆಳಗ್ಗೆ 9.30 ಕ್ಕೆ ಗಂಟೆಗೆ ಮನೋಹರರಾಯ್ ಸರದೇಸಾಯಿ ಅವರ ಬಗ್ಗೆ ಸಾಹಿತ್ಯ ಆಕಾಡೆಮಿಯ ಸಾಕ್ಷ್ಯ ಚಿತ್ರದೊಂದಿಗೆ ಆರಂಭಗೊಳ್ಳುವ ಕಾರ್ಯಕ್ರಮಗಳು ತದನಂತರದ ಗೋವಾದ ಹೆಸರಾಂತ ಸಾಹಿತಿ ಮಾಧವ ಬೊರಕಾರ್ ಅವರ ” ಮನೋಹರ್ ಸರ್ದೆಸಾಯ್ ಯುವ ಸಾಹಿತ್ಯಿಕ ಹಾಗೂ ಕವಿತಾ ವಿಚಾರಧಾರೆ“ಗಳ ಬಗ್ಗೆ ಬೀಜ ಭಾಷಣ ದೊಂದಿಗೆ ಮುಂದುವರಿಯಲಿದೆ.

ಬಳಿಕ 11.00 ಕ್ಕೆ” ಜೀವನವೇ ಒಂದು ಪ್ರೇರಣೆ: ಮನೋಹರರಾಯ್ ಸರದೇಸಾಯಿ ಶಿಕ್ಷಣ, ಬರವಣಿಗೆ, ಮತ್ತು ಆಂದೋಲನ” ಈ ವಿಷಯದ ಕುರಿತು ಹೆಸರಾಂತ ಕವಿ ಮೆಲ್ವಿನ್ ರೊಡ್ರಿಗಸ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಚರ್ಚಾಗೋಷ್ಟಿಯಲ್ಲಿ ಸುನಿಲ್ ಸರ್ದೆಸಾಯ್, ಅರ್.ಎಸ್. ಭಾಸ್ಕರ್, ಮಾಯಾ ಕರಂಗಟೆ, ಜೊಕೀಮ್ ಪಿಂಟೊ ಭಾಗವಹಿಸಲಿರುವರು.

ಮಧ್ಯಾಹ್ನ 12.00 ಕ್ಕೆ ಐಶ್ವರ್ಯಾಲಕ್ಷ್ಮಿ ಭಟ್ ಇವರ ನಿರ್ದೇಶನದಲ್ಲಿ ಶಾಲಾ ವಿದ್ಯಾರ್ಥಿಗಳ ಕಾರ್ಯಕ್ರಮ – “ಬಾಲ್ಯಮನಸ್ಸಿನ ಮನೊಹರರಾಯ್” ಯೆಂಬ ಪ್ರಸ್ತುತಿ ಇರುತ್ತದೆ.

ಅಪರಾಹ್ನದ ಅವಧಿಯಲ್ಲಿ ನಂದಿತಾ ಪೈ ತಂಡದವರಿಂದ “ಮನೋಹರ ಸಂಗೀತ” ದ ಮೂಲಕ ಸರ್ದೆಸಾಯ್ ಯವರ ಕವಿತೆಗಳ ಸುಶ್ಯಾವ್ಯ ಗಾಯನ, ಮುರಲೀಧರ ಕಾಮತ್ ತಂಡದ ಹಿಮ್ಮೇಳನದೊಂದಿಗೆ ಗೋವಾದ ಅನಂತ್ ಅಗ್ನಿ ಇವರಿಂದ “ಮನೋಹರ್ ದರ್ಶನ” ವೆಂಬ ದೃಶ್ಯ ಶ್ರವಣ ಪ್ರದರ್ಶನ ನಡೆಯಲಿದೆ.

ಸಂಜೆ 4.೦೦ ಕ್ಕೆ ಜರುಗಲಿರುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಗೋವಾ ರಾಜ್ಯ ಭಾಷಾ ನಿರ್ದೇಶನಾಲಯದ, ಉಪನಿರ್ದೇಶಕರಾದ ಅನಿಲ್ ಸಾವಂತ್ ಇವರ ಅಧ್ಯಕ್ಷತೆಯಲ್ಲಿ ಅಖಿಳ ಭಾರತ ಕೊಂಕಣಿ ಪರಿಷದ್ ಅಧ್ಯಕ್ಷ ಫಾ. ಮೌಜಿನ್ಹೊ ದ ಅಟೈಡೆ, ಕೊಂಕಣಿ ಭಾಷಾ ಮಂಡಳದ ಅಧ್ಯಕ್ಷೆ ರತ್ನಮಾಲಾ ದಿವಕಾರ, ಉಮೇಶ ಸರದೇಸಾಯಿ, ಮಾಯಾ ಸರದೇಸಾಯಿ ಭಾಗವಹಿಸಲಿರುವರು.

ಹೊರ ರಾಜ್ಯದ ಸಾಹಿತಿಗಳು, ಕವಿಗಳು ಸಾಹಿತ್ಯ ಪ್ರಿಯರು, ವಿದ್ಯಾರ್ಥಿಗಳು ಈ ಎರಡು ದಿನಗಳ ವಿಭಿನ್ನ ಅಧಿವೇಶನಗಳಲ್ಲಿ ಭಾಗವಹಿಸಲಿದ್ದಾರೆ. ಗೋವಾ ಸರಕಾರದ ರಾಜ್ಯಭಾಷಾ ನಿರ್ದೇಶನಾಲಯ ಮತ್ತು ಸಾರಸ್ವತ ಕೊಪರೇಟಿವ್ ಬ್ಯಾಂಕ ಪ್ರಾಯೋಜಕತ್ವದಲ್ಲಿ ವಿಶ್ವ ಕೊಂಕಣಿ ಕೇಂದ್ರದ ಈ ಕಾರ್ಯಕ್ರಮವನ್ನು ನಡೆಸಲಿದೆ .

ವಿನಂತಿ: ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಸಿಎ ನಂದಗೋಪಾಲ್ ಶೆಣೈ, ಉಪಾಧ್ಯಕ್ಷರುಗಳಾದ ವಿಲಿಯಮ್ ಡಿ ಸೋಜ, ಡಾ ಕಿರಣ್ ಬುಡ್ಕುಳೆ, ರಮೇಶ್ ನಾಯಕ್, ಕಾರ್ಯದರ್ಶಿ ಡಾ ಮೋಹನ್ ಪೈ, ಕೋಶಾಧಿಕಾರಿ ಬಿ ಆರ್ ಭಟ್, ಜತೆ ಕಾರ್ಯದರ್ಶಿ ನಾರಾಯಣ ನಾಯಕ್ ಹಾಗೂ ಇತರ ಟ್ರಸ್ಟಿಗಳಾದ ನಾವು ಈ ಎರಡು ದಿನಗಳ ರಾಷ್ಟ್ರೀಯ ಕಾರ್ಯಕ್ರಮ ಕ್ಕೆ ಎಲ್ಲಾ ಕೊಂಕಣಿ ಅಭಿಮಾನಿಗಳನ್ನು ಆದರದಿಂದ ಸ್ವಾಗತಿಸುತ್ತೇವೆ.

RELATED ARTICLES
- Advertisment -
Google search engine

Most Popular