ಪ್ರಾಚೀನ ಭಾರತೀಯ ಶಾಸ್ತ್ರದ ಪ್ರಕಾರ ವಿಶ್ವವು ಕಾಲಚಕ್ರಕ್ಕನುಸಾರ ಏರು-ಪೇರಾಗುತ್ತಿರುತ್ತದೆ. ರಜ-ತಮ ಗುಣದ ಪ್ರಾಬಲ್ಯ ಹೆಚ್ಚಾಗುವುದರಿಂದ ಅದರ ನಕಾರಾತ್ಮಕ ಪ್ರಭಾವ ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಈ ಪಂಚಮಹಾಭೂತಗಳ ಮೇಲೆ ಬೀರುತ್ತದೆ. ಪರಿಣಾಮವಾಗಿ ಪೃಥ್ವಿಯಲ್ಲಿ ನೈಸರ್ಗಿಕ ಆಪತ್ತುಗಳ ಪ್ರಮಾಣ ಹೆಚ್ಚಾಗುತ್ತದೆ. ಆದ್ದರಿಂದ ಜಾಗತಿಕ ಮಟ್ಟದಲ್ಲಿ ಕೇವಲ ಸ್ಥೂಲದಲ್ಲಿನ ಉಪಾಯದ ಬಗ್ಗೆ ಪ್ರಯತ್ನ ಮಾಡಲಾಗುತ್ತದೆ; ಆದರೆ ಅದು ಸಾಲದು. ಆಧ್ಯಾತ್ಮಿಕ ಮಟ್ಟದಲ್ಲಿಯೂ ಪ್ರಯತ್ನವಾಗುವುದು ಅಗತ್ಯವಾಗಿರುತ್ತದೆ. ಮಂತ್ರೋಚ್ಛಾರ, ಅಗ್ನಿಹೋತ್ರ, ಯಜ್ಞ, ಸಾಧನೆ ಮುಂತಾದರ ಮೂಲಕ ನಾವು ನಮ್ಮ ಜೀವನ ಮತ್ತು ಹವಾಮಾನದ ಅಧ್ಯಾತ್ಮಿಕ ಶುದ್ಧಿ ಮಾಡಬಹುದು ಮತ್ತು ಅದರಿಂದ ಹವಾಮಾನದ ಸಂತುಲನೆ ಕಾಪಾಡಬಹುದು ಎಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಶ್ರೀ. ಶಾನ್ ಕ್ಲಾರ್ಕ್ ಇವರು ಹೇಳಿದರು.
ಅವರು ಅಝರಬೈಜನೀಯ ರಾಜಧಾನಿ ಬಾಕು ನಲ್ಲಿ ‘ಸಂಯುಕ್ತ ರಾಷ್ಟ್ರಸಂಘ’ (UN) ಆಯೋಜಿಸಿರುವ ‘ಸಿಓಪಿ 29’ ಈ ಅಂತರಾಷ್ಟ್ರೀಯ ಸಭೆಯಲ್ಲಿ ಮಾತನಾಡುತ್ತಿದ್ದರು. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ಮತ್ತು ಸ್ಪಿರಿಚ್ಯುಯಲ್ ಸೈನ್ಸ್ ರಿಸರ್ಚ್ ಫೌಂಡೇಶನ್ ನ ವತಿಯಿಂದ ಶ್ರೀ. ಶಾನ್ ಕ್ಲಾರ್ಕ್ ಇವರು ‘ಸಾಮಾಜಿಕ ಜಾಗೃತಿಯಿಂದ ಹವಾಮಾನದ ಹಾನಿ ಕಡಿಮೆಗೊಳಿಸಬಹುದೇ ?’ ಈ ಕುರಿತು ಸಂಶೋಧನೆ ಪ್ರಸ್ತುತಪಡಿಸುವಾಗ ಯಜ್ಞದ ಕೆಲವು ವಿಡಿಯೋ ಹಾಗೂ ಛಾಯಾಚಿತ್ರಗಳನ್ನು ಪ್ರಸ್ತುತಪಡಿಸಿದರು. ಈ ಸಂಶೋಧನೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಲಾಜಿ ಆಠವಲೆ ಇವರ ಮಾರ್ಗದರ್ಶನದಲ್ಲಿ ಮಾಡಲಾಯಿತು .
ಶ್ರೀ. ಶಾರ್ನ್ ಕ್ಲಾರ್ಕ್ ಇವರು ಮಾತು ಮುಂದುವರಿಸಿ, ಆಧ್ಯಾತ್ಮಿಕ ಶುದ್ಧತೆಯ ಅಂದರೆ ಸಾತ್ವಿಕತೆಯ ಪರಿಣಾಮ ಪಂಚಮಹಾಭೂತಗಳ ಮೇಲೆ ಆಗುತ್ತದೆ, ಇದು ಅನೇಕ ಉದಾಹರಣೆಗಳಿಂದ ಸಿದ್ಧವಾಗಿದೆ. ನಿಯಂತ್ರಿತ ವಾತಾವರಣದಲ್ಲಿ ಮಾಡಿರುವ ಒಂದು ಪ್ರಯೋಗದಲ್ಲಿ ‘ಮಂತ್ರೋಚ್ಛಾರದಿಂದ ಜ್ಯೋತಿಯ ಎತ್ತರ ಹೆಚ್ಚುತ್ತದೆ, ಎಂದು ಗಮನಕ್ಕೆ ಬಂದಿದೆ. ಇನ್ನೊಂದು ಉದಾಹರಣೆ, ಮುಂಬಯಿಯಲ್ಲಿ ಎರಡು ಅಪಾರ್ಟ್ಮೆಂಟಲ್ಲಿ ನೀರಿನ ಬಾಟಲಿಯ ಪ್ರಭಾವಲಯ ‘ಯುನಿವರ್ಸಲ್ ಔರಾ ಸ್ಕ್ಯಾನರ್’ ಹೆಸರಿನ ಉಪಕರಣದಿಂದ ಅಳೆಯಲಾಯಿತು. ಯಾವ ಅಪಾರ್ಟ್ಮೆಂಟ್ ನಲ್ಲಿನ ನಿವಾಸಿಗಳು ಸಾಧನೆ (ಉಪಾಸನೆ) ಮಾಡುತ್ತಿದ್ದರು. ಅವರ ನೀರಿನ ಬಾಟಲಿಯ ಪ್ರಭಾವಲಯ ಸಕಾರಾತ್ಮಕ ಮತ್ತು ಯಾವ ಅಪಾರ್ಟ್ಮೆಂಟ್ ನಲ್ಲಿ ನಿವಾಸಿ ಸಾಧನೆ ಮಾಡುತ್ತಿರಲಿಲ್ಲ, ಅವರ ಬಾಟಲಿಯ ಪ್ರಭಾವಲಯ ನಕಾರಾತ್ಮಕವಾಗಿತ್ತು. ಇದರಿಂದ ಮನುಷ್ಯನ ಆಚರಣೆಯ ಪ್ರಭಾವ ಪಂಚ ಮಹಾಭೂತಗಳು ಮತ್ತು ವಾತಾವರಣದ ಮೇಲೆ ಆಗುತ್ತದೆ. ಇದು ಗಮನಕ್ಕೆ ಬರುತ್ತದೆ.
ಪ್ರಸ್ತುತ ಪೃಥ್ವಿಯಲ್ಲಿ ಆಗುತ್ತಿರುವ ಹವಾಮಾನದಲ್ಲಿನ ಶೇಕಡ 98 ರಷ್ಟು ಸೈಕ್ಲೇಕಲ್ ಬದಲಾವಣೆಯಿಂದ ಆಗುತ್ತದೆ. ಹಾಗೂ ಕೇವಲ ಶೇಕಡ 2 ರಷ್ಟು ಮನುಷ್ಯನಿಂದ ಆಗುತ್ತದೆ. ಪ್ಯಾರಿಸ್ ನಲ್ಲಿಯ ಸಭೆಯಲ್ಲಿ ಹವಾಮಾನದ ಬದಲಾವಣೆಯ ಬಗ್ಗೆ ಏನೆಲ್ಲ ವಿನ್ಯಾಸ ಮತ್ತು ಅಂದಾಜು ಮಾಡಲಾಗಿತ್ತು, ಅದಕ್ಕಿಂತ ಹೆಚ್ಚಿನ ಗತಿಯಲ್ಲಿ ಮತ್ತು ತೀವ್ರತೆಯಿಂದ ಹವಾಮಾನದ ಹಾನಿ ಆಗುವುದು ಕಂಡು ಬರುತ್ತಿದೆ. 2006 ರಲ್ಲಿ ಈ ವಿಷಯದ ಬಗ್ಗೆ ಆಧ್ಯಾತ್ಮಿಕ ಸಂಶೋಧನೆ ನಡೆಸಿದ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಿಂದ ಹವಾಮಾನದ ತೀವ್ರ ಹಾನಿಯ ಕಾರಣ ಕೇವಲ ಸ್ಥೂಲದಿಂದ ಆಗದೆ ಸೂಕ್ಷ್ಮದಿಂದ ಎಂದರೆ ಆಧ್ಯಾತ್ಮಿಕವಾಗಿ ಕೂಡ ಇದೆ, ಎಂದು ಅಂದಾಜಿಸಲಾಗಿದೆ.
ಈ ಸಭೆಯಲ್ಲಿ ‘ಪ್ರಾಚೀನ ಭಾರತೀಯ ಶಾಸ್ತ್ರಗಳ ಆಧಾರಿತ ಆಧ್ಯಾತ್ಮಿಕ ಸೂತ್ರದ ಸಹಾಯದಿಂದ ವಾತಾವರಣದಲ್ಲಿನ ಬದಲಾವಣೆ ತೀವ್ರತೆ ಕಡಿಮೆ ಮಾಡಲು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಈ ಪ್ರಯತ್ನ ವಿಶೇಷ ಶ್ಲಾಘನೀಯವಾಗಿದೆ, ಎಂದು ಐ. ಎಸ್ .ಆರ್. ಎನ್. ನ ಮುಖ್ಯ ಕಾರ್ಯಕಾರಿ ಅಧಿಕಾರಿ ಶ್ರೀ. ಸಂತೋಷ ಗುಪ್ತ ಮತ್ತು ಹವಾಮಾನ ತಜ್ಞ ಮತ್ತು ಕರ್ಮ ಲೇಕ್ಲ್ಯಾಡ್ ಇದರ ಪ್ರಮುಖ ಕಾರ್ಯಕಾರಿ ಅಧಿಕಾರಿ ಶ್ರೀ. ಅಶ್ವಿನಿ ಖುರಾನ್ ಇವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕಳೆದ 8 ವರ್ಷಗಳಲ್ಲಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ 20 ರಾಷ್ಟ್ರೀಯ ಮತ್ತು 96 ಅಂತರಾಷ್ಟ್ರೀಯ ವಿಜ್ಞಾನ ಪರಿಷತ್ತಿನಲ್ಲಿ ಶೋಧ ಪ್ರಬಂಧ ಪ್ರಸ್ತುತಪಡಿಸಿದ್ದಾರೆ. ಇದರಲ್ಲಿ 14 ಅಂತರಾಷ್ಟ್ರೀಯ ವಿಜ್ಞಾನ ಪರಿಷತ್ತಿನಲ್ಲಿ ವಿಶ್ವವಿದ್ಯಾಲಯದ ‘ಉತ್ಕೃಷ್ಟ ಪ್ರಸ್ತುತೀಕರಣ’ ದ ಪ್ರಶಸ್ತಿ ದೊರೆತಿದೆ.