ಗುಂಡ್ಯಡ್ಕ: ಶ್ರೀ ವಿಠೋಬ ರುಕುಮಾಯಿ ದೇವಸ್ಥಾನದಲ್ಲಿ ಮಾ.13 ರಿಂದ 18 ರ ವರೆಗೆ “ಶತಚಂಡಿಕಾಯಾಗ” ನಡೆಯಲಿದೆ.
ಕಾರ್ಯಕ್ರಮಗಳು
13-3-2024 ಬುಧವಾರ ಬೆಳಿಗ್ಗೆ 7-00ಕ್ಕೆ ದೇವತಾ ಪ್ರಾರ್ಥನೆ, ಪುಣ್ಯಾಹ ವಾಚನ, ಗಣಪತಿ ಹೋಮ, ಉಗ್ರಾಣ ಮುಹೂರ್ತ . ಶ್ರೀ ದೇವರಿಗೆ ಪಂಚಾಮೃತ ಪವಮಾನ ಅಭಿಷೇಕ, ಮಹಾಪೂಜೆ, ಮಧ್ಯಾಹ್ನ ಘಂಟೆ 12-30ಕ್ಕೆ ಅನ್ನಸಂತರ್ಪಣೆ. ಸಾಯಂಕಾಲ 5-30ರಿಂದ ಭಜನೆ, ರಾತ್ರಿ 7-30ಕ್ಕೆ ಪೂಜೆ, ಪ್ರಸಾದ ವಿತರಣೆ.
14-3-2024 ಗುರುವಾರ ಬೆಳಿಗ್ಗೆ 7-00ಕ್ಕೆ ಗಣಪತಿ ಅಥರ್ವಶೀರ್ಷ ಹೋಮ, ದೀಪ ಪ್ರಜ್ವಲನೆ, ಆಚಾರ್ಯಋತ್ವಿಜರ ಸ್ವಾಗತ, ಪುಣ್ಯಾಹ ವಾಚನ, ಆಚಾರ್ಯದಿವರಣ ಕಲಶಸ್ಥಾಪನ, ಸಪ್ತಶತೀ ಪಾರಾಯಣ ಆರಂಭ, ಮಧ್ಯಾಹ್ನ 12-00ಕ್ಕೆ ಪೂಜೆ, ಘಂಟೆ 12-30ಕ್ಕೆ ಅನ್ನಸಂತರ್ಪಣೆ, ಸಂಜೆ 5-00ರಿಂದ ಭಜನೆ, ದುರ್ಗಾನಮಸ್ಕಾರ ಪೂಜೆ, ಲಲಿತಾ ಸಹಸ್ರನಾಮಾರ್ಚನೆ, ಅಷ್ಟಾವಧಾನ ಸೇವೆ, ರಾತ್ರಿ 7-30ಕ್ಕೆ ಪೂಜೆ, ಪ್ರಸಾದ ವಿತರಣೆ.
15-3-2024 ಶುಕ್ರವಾರ ಬೆಳಿಗ್ಗೆ 7-00ಕ್ಕೆ ಗಣಪತಿ ಹೋಮ, ಸಪ್ತಶತೀಪಾರಾಯಣ, ಲಕ್ಷ್ಮೀನಾರಾಯಣಹೃದಯ ಹೋಮ, ಮಧ್ಯಾಹ್ನ ಘಂಟೆ 12-30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 5-00ರಿಂದ ಭಜನೆ, ದುರ್ಗಾನಮಸ್ಕಾರ ಪೂಜೆ, ಲಲಿತಾ ಸಹಸ್ರನಾಮಾರ್ಚನೆ, ಅಷ್ಟಾವಧಾನ ಸೇವೆ, ರಾತ್ರಿ 7-30ಕ್ಕೆ ಪೂಜೆ, ಪ್ರಸಾದ ವಿತರಣೆ.
16-3-2024 ಶನಿವಾರ ಬೆಳಿಗ್ಗೆ 7-00ಕ್ಕೆ ಗಣಪತಿ ಹೋಮ, ಸಪ್ತಶತೀಪಾರಾಯಣ, ಮೃತ್ಯುಂಜಯ ಹೋಮ, ಸೌರಸೂಕ್ತ ಹೋಮ, ಮಧ್ಯಾಹ್ನ 12-00ಕ್ಕೆ ಮಹಾಪೂಜೆ, 12-30ಕ್ಕೆ ಅನ್ನಸಂತರ್ಪಣೆ. ಸಂಜೆ 5-00ರಿಂದ ಭಜನೆ, ದುರ್ಗಾನಮಸ್ಕಾರ ಪೂಜೆ, ಲಲಿತಾ ಸಹಸ್ರನಾಮಾರ್ಚನೆ, ಅಷ್ಟಾವಧಾನ ಸೇವೆ, ರಾತ್ರಿ 7-30ಕ್ಕೆ ಪೂಜೆ, ಪ್ರಸಾದ ವಿತರಣೆ.
17-3-2024 ಆದಿತ್ಯವಾರ ಬೆಳಿಗ್ಗೆ 7-00ಕ್ಕೆ ಗಣಪತಿ ಹೋಮ, ಸಪ್ತಶತೀಪಾರಾಯಣ, ರುದ್ರ ಹೋಮ, ಮಧ್ಯಾಹ್ನ 12-00ಕ್ಕೆ ಮಹಾಪೂಜೆ, 12-30ಕ್ಕೆ ಅನ್ನಸಂತರ್ಪಣೆ, ಸಂಜೆ 5-00ರಿಂದ ಭಜನೆ, ಅಗ್ನಿಜನನ, ದುರ್ಗಾನಮಸ್ಕಾರ ಪೂಜೆ, ದೀಪಾರಾಧನೆ, ಲಲಿತಾ ಸಹಸ್ರನಾಮಾರ್ಚನೆ, ಅಷ್ಟಾವಧಾನ ಸೇವೆ, ರಾತ್ರಿ 7-30ಕ್ಕೆ ಪೂಜೆ, ಪ್ರಸಾದ ವಿತರಣೆ.
18-3-2024 ಸೋಮವಾರ ಬೆಳಿಗ್ಗೆ 6 ಕ್ಕೆ ಶತಚಂಡಿಕಾಯಾಗದ ಅಗ್ನಿ ಪ್ರತಿಷ್ಠೆ, ಶತಚಂಡಿಕಾಯಾಗದ ಆರಂಭ, ಕಲಶಾಭಿಷೇಕ (ಪ್ರತಿಷ್ಠಾ ದಿನದ ಪ್ರಧಾನ ಹೋಮ) 10-30ಕ್ಕೆ ಯಾಗದ ಪೂರ್ಣಾಹುತಿ, ಕುಮಾರೀ ಪೂಜೆ, ಸುವಾಸಿನೀ ಪೂಜೆ, ದಂಪತೀ ಪೂಜೆ, ಮಧ್ಯಾಹ್ನ ಘಂಟೆ 12-00ಕ್ಕೆ ಮಹಾಪೂಜೆ. ಘಂಟೆ 12-30ರಿಂದ ಅನ್ನಸಂತರ್ಪಣೆ. ಸಂಜೆ 5-00ರಿಂದ ಭಜನೆ, 6-00ರಿಂದ ಪ್ರತಿಷ್ಠಾ ವರ್ಧಂತಿಯ ಬಗ್ಗೆ ರಂಗಪೂಜೆ. ರಾತ್ರಿ 7-30 ಕ್ಕೆ ಪೂಜೆ, ಪಲ್ಲಕಿ ಸೇವೆ, ಪ್ರಸಾದ ವಿತರಣೆ ನಡೆಯಲಿದೆ.