ಕಾರ್ಕಳ: ತಾಲೂಕಿನ ದುರ್ಗ ಗ್ರಾಮ ಕಿರುತಿರುಪತಿ ಶ್ರೀ ಲಕ್ಷ್ಮೀ ವೆಂಕಟರಮಣ ನೂತನ ದೇವಾಲಯದಲ್ಲಿ ಪುನಃ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕುಂಭಾಭಿಷೇಕ, ರಕ್ತೇಶ್ವರಿ ಪರಿವಾರ ದೈವಗಳ ಪ್ರತಿಷ್ಠೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ವೇದಮೂರ್ತಿ ಶ್ರೀ ಅನಂತ ಗೋಖಲೆಯವರ ನೇತೃತ್ವದಲ್ಲಿ ಮಾ. 13ರಿಂದ 19ರ ವರೆಗೆ ನಡೆಯಲಿದೆ ಎಂದು ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಪೂರ್ವಭಾವಿ ಸಭೆಯಲ್ಲಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು ತಿಳಿಸಿದರು.
ಮಾ. 13 ಹೊರೆಕಾಣಿಕೆ ಹಾಗೂ ನೂತನ ಪುಷ್ಪರಥದ ಮೆರವಣಿಗೆ, ಮಾ. 14 ಉದ್ಘಾಟನಾ ಸಮಾರಂಭ, ಮಾ.16 ಪ್ರಾಣ ಪ್ರತಿಷ್ಠೆ, ಮಾ. 17 ಬ್ರಹ್ಮಕುಂಭಾಭಿಷೇಕ , ಮಾ. 18 ನಾಗಬನದಲ್ಲಿ ಆಶ್ಲೇಷ ಬಲಿ ರಕ್ತೇಶ್ವರಿ ಪರಿವಾರ ದೈವಗಳಿಗೆ ಕೋಲ. ದಿನಂಪ್ರತಿ ವಿವಿಧ ತಂಡಗಳಿಂದ ಭಜನಾ ಸೇವೆ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ. ಸಂಜೆ ಪ್ರಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.