Thursday, April 24, 2025
Homeಕಾರ್ಕಳಮಾ.17 ಇಂದು ಛತ್ರಪತಿ ಶಿವಾಜಿ ಎಂಬ ನಾಟಕ ಪ್ರದರ್ಶನ

ಮಾ.17 ಇಂದು ಛತ್ರಪತಿ ಶಿವಾಜಿ ಎಂಬ ನಾಟಕ ಪ್ರದರ್ಶನ

ಕಾರ್ಕಳದ ಬಂಡಿ ಮಠದಲ್ಲಿ ಮಾರ್ಚ್ 17 ಸೋಮವಾರ ಛತ್ರಪತಿ ಶಿವಾಜಿ ಎಂಬ ನಾಟಕ ಪ್ರದರ್ಶನ ಗೊಳ್ಳಲಿದೆ.

ಕಾರ್ಕಳದಲ್ಲಿ ಕಳೆದ ಒಂದೂವರೆ ವರ್ಷಗಳಿಂದ ವೈವಿಧ್ಯಮಯ ಕಾರ್ಯಕ್ರಮ ಮಾಡುವ ಮೂಲಕ ಮನೆ ಮಾತಾದ ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗದ ಕಾರ್ಕಳ ಟೈಗರ್ಸ್ ಈ ಕಾರ್ಯಕ್ರಮವನ್ನು ಹಮ್ಮಿ ಕೊಂಡಿದೆ. ನಾಟಕ ರಂಗದ ದಿಗ್ಗಜ ವಿಜಯ ಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದಲ್ಲಿ ಈ ನಾಟಕ ಪ್ರದರ್ಶನಗೊಳ್ಳಲಿದೆ.

ವಿಜಯ ಕುಮಾರ್ ಕೊಡಿಯಾಲ್ ಬೈಲ್ ರವರು ಈ ನಾಟಕವನ್ನು ಹೊಸತಾಗಿ ರಚನೆ ಮಾಡಿದ್ದು ಕಾರ್ಕಳದಲ್ಲಿ ಪ್ರಥಮ ಪ್ರದರ್ಶನ ಇದಾಗಿದೆ. ಇವತ್ತು ಸಾಯಂಕಾಲ 6 ಗಂಟೆಗೆ ಈ ಕಾರ್ಯಕ್ರಮ ನಡೆಯಲಿದ್ದು, ಕಾರ್ಕಳ ಹಾಗು ಹೆಬ್ರಿಯ ಜನತೆ ಈ ದೇಶ ಭಕ್ತಿಯ ನಾಟಕ ವೀಕ್ಷಣೆ ಮಾಡುವಂತೆ ಸಂಘಟಕರು ವಿನಂತಿ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular