Thursday, May 1, 2025
HomeUncategorizedಮಾ. 18: ಚಾರ್ಮಾಡಿ ಶ್ರೀಕ್ಷೇತ್ರ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಗಣಪತಿ ದೇವರಿಗೆ ಸಹಸ್ರನಾಳಿಕೇರ ಯಾಗ

ಮಾ. 18: ಚಾರ್ಮಾಡಿ ಶ್ರೀಕ್ಷೇತ್ರ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಗಣಪತಿ ದೇವರಿಗೆ ಸಹಸ್ರನಾಳಿಕೇರ ಯಾಗ

ಶ್ರೀಕ್ಷೇತ್ರ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನ ಚಾರ್ಮಾಡಿ ಬೆಳ್ತಂಗಡಿ ತಾಲೂಕು, ದ.ಕ. ಆತ್ಮೀಯ ಭಗವದ್ಭಕ್ತರೇ, ಇದೇ ಬರುವ ತಾರೀಕು 18-03-2025ರ ಮಂಗಳವಾರದಂದು “ಮತ್ತೂರು ಪಂಚಲಿಂಗೇಶ್ವರ” ದೇವಸ್ಥಾನದಲ್ಲಿ ಬೆಳಿಗ್ಗೆ ಗಂಟೆ 6-00ರಿಂದ ಗಣಪತಿ ದೇವರಿಗೆ ಸಹಸ್ರನಾಳಿಕೇರ ಯಾಗ ವಿವಿಧ ಧಾರ್ಮಿಕ ಹಾಗೂ ವೈದಿಕ ಕಾರ್ಯಕ್ರಮಗಳೊಂದಿಗೆ ಜರುಗಲಿರುವುದು.

ಕಾರ್ಯಕ್ರಮಗಳು: ಬೆಳಿಗ್ಗೆ ಗಂಟೆ 6-00ಕ್ಕೆ ಯಾಗ ಪ್ರಾರಂಭ * ಪೂರ್ವಾಹ್ನ ಗಂಟೆ 11-00ಕ್ಕೆ ಪೂರ್ಣಾಹುತಿ * ಮಧ್ಯಾಹ್ನ ಗಂಟೆ 12-30ಕ್ಕೆ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ

‘ಕಲೌ ದುರ್ಗಾ ವಿನಾಯಕೌ’ ಎನ್ನುವ ಋಷಿ ವಚನದಂತೆ ಈ ಕಲಿಯುಗದಲ್ಲಿ ದುರ್ಗೆ ಮತ್ತು ಗಣಪತಿಯ ಆರಾಧನೆ ಶೀಘ್ರ ಫಲದಾಯಕವಾಗಿದೆ. ತತ್ರಾಪಿ ಗಣಪತಿಯ ಉಪಾಸನೆ “ಆದಿ ಪೂಜ್ಯೋ ವಿನಾಯಕಾ” ಎನ್ನುವಂತೆ ಸಕಲ ಕರ್ಮಾರಂಭಗಳಲ್ಲಿ ಮಾಡುವುದು ಸನಾತನ ಪರಂಪರೆಯಲ್ಲಿ ರೂಢಿಗತವಾಗಿದೆ. ಗಣಪತಿಯ ವಿವಿಧ ಉಪಾಸನೆಗಳಲ್ಲಿ ಅಷ್ಟ ದ್ರವ್ಯದಿಂದ ಮಡುವ “ಗಣಹೋಮ’ವು ಕ್ಷಿಪ್ರಾತಿಕ್ಷಿಪ್ರ ಫಲಪ್ರದವು ಆಗಿರುತ್ತದೆ. ಅದು ಎಲ್ಲರೂ ಸರ್ವತ್ರ ಆಚರಿಸಿಕೊಂಡು ಬಂದ ಉಪಾಸನಾ ವಿಧಾನವೂ ಹೌದು. ಬಯಸಿದ ಬಯಕೆಗಳ ಸಿದ್ದಿಯೊಂದಿಗೆ ಎಂಟು ದ್ರವ್ಯಗಳ (ಅಷ್ಟದ್ರವ್ಯ) ಹೋಮಕ್ಕೆ ಎಂಟು ವಿಶೇಷ ಫಲಗಳನ್ನು ನೀಡುವವನು ಮೊದಲೊಂದಿಪ ಗಣಪತಿಯು ಚತುರ್ಥಿ ತಿಥಿಯಂದು ವಿಶೇಷವಾಗಿ ಎಲ್ಲರಿಂದ ಪೂಜಿಸುವ ಮಹಾಗಣಪತಿಯನ್ನು “ಸನಾತನ ಧರ್ಮದ ದಿಗ್ವಿಜಯ, ಸಕಲ ಆಸ್ತಿಕ ಜನರ ಹಿತ, ಲೋಕೋದ್ಧಾರ’ದ ಫಲಗಳ ಬಯಸಿ ದಿನಾಂಕ 18-03-2025ರ ಮಂಗಳವಾರದ ಫಾಲ್ಗುಣ ಮಾಸದ ಕೃಷ್ಣ ಚತುರ್ಥಿ ತಿಥಿಯಂದು “ಚಾರ್ಮಾಡಿಯ ಮತ್ತೂರು ಪಂಚಲಿಂಗೇಶ್ವರ” ದೇವರ ಸನ್ನಿಧಿಯಲ್ಲಿ “1008 ತೆಂಗಿನಕಾಯಿಯ ಗಣಹೋಮ” ದಿಂದ ಆರಾಧಿಸುವುದಾಗಿ ಪರಮಾತ್ಮ ಪ್ರೇರಣೆಯಾಗಿರುತ್ತದೆ. ಅದರ ಜೊತೆ ನಮಗೆಲ್ಲರಿಗೂ ಜೀವನ ಪಠ್ಯಂತ ಬದುಕಿಗೆ ಅವಿಭಾಜ್ಯವಾದ ಅಮೃತ ತುಲ್ಯ ಹಾಲನಿತ್ತು ನಮ್ಮ ಒಳಿತಿಗೆ ಕಾರಣಳಾದ ಗೋಮಾತೆಯ ಸಂರಕ್ಷಣೆಗಾಗಿ “ಗೋ ಸೂಕ್ತ ಹವನ” ಮಾಡಲು ಪ್ರೆರೇಪಿಸಿರುತ್ತಾನೆ. ಆ ನಿಮಿತ್ತವಾಗಿ ನಡೆಯುವ ಈ ಉಭಯ ಸಮಾರಂಭಗಳಿಗೆ ಆಸ್ತಿಕ ಭಕ್ತರಾದ ತಾವೆಲ್ಲರೂ ತಮ್ಮವರೊಂದಿಗೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮನಃ ಪೂರ್ವಕವಾಗಿ ಪಾಲ್ಗೊಂಡು ವಿನಾಯಕನ ಮತ್ತು ಗೋ ಮಾತೆಯ ರೂಪದ ದುರ್ಗೆಯ ಕೃಪೆಗೆ ಭಾಜನರಾಗಿ ತಮ್ಮ ತಮ್ಮವರ ಲೋಕದ ಏಳೆಯನ್ನು ಪಡೆದು ಕೃತಾರ್ಥರಾಗೋಣ.

ವಿ.ಸೂ.: ಬೆಳ್ತಿಗೆ ಅಕ್ಕಿ, ಹಿಂಗಾರ, ತೆಂಗಿನ ಕಾಯಿ, ಅಡಿಕೆ, ದೇಸಿ ತುಪ್ಪ, ಬೆಲ್ಲ, ಬಾಳೆ ಎಲೆ ಭಕ್ತರಿಂದ ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಲಾಗುವುದು.

RELATED ARTICLES
- Advertisment -
Google search engine

Most Popular