Thursday, September 12, 2024
Homeಧಾರ್ಮಿಕಮಾ.21 ರಿಂದ 26: ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ

ಮಾ.21 ರಿಂದ 26: ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ

ಪೆರ್ಲ: ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವವು ಬ್ರಹ್ಮಶ್ರೀ ದೇಲಂಪಾಡಿ ಅನಿರುದ್ಧ ತಂತ್ರಿಯವರ ನೇತೃತ್ವದಲ್ಲಿ ಮಾ.21ರಿಂದ 26ರ ವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.

ಮಾ.21ರಂದು ಬೆಳಗ್ಗೆ 7.30ಕ್ಕೆ ಉಷಃಪೂಜೆ, ಗಣಪತಿ ಹೋಮ, ನಡೆಯಲ್ಲಿ ಪ್ರಾರ್ಥನೆ, ಶ್ರೀ ದೇವರ ರಾಜಾಂಗಣ ಪ್ರವೇಶ, ಧ್ವಜಾರೋಹಣ, ನವಕಾಭಿಷೇಕ, ತುಲಾಭಾರ ಸೇವೆ, ಮಹಾಪೂಜೆ, ಅನ್ನ ಸಂತರ್ಪಣೆ, ರಾತ್ರಿ 8ರಿಂದ ಶ್ರೀ ಭೂತ ಬಲಿ ಕಟ್ಟೆಪೂಜೆ ಜರಗಲಿದೆ. ಮಾ.22ರಂದು ಬೆಳಗ್ಗೆ ಉಷಃಪೂಜೆ, 10 ಗಂಟೆಗೆ ಶ್ರೀ ಬಲಿ ಉತ್ಸವ, ದರ್ಶನ ಬಲಿ, ನವಾಕಾಭಿಷೇಕ, ಮಹಾಪೂಜೆ, ಮಧ್ಯಾಹ್ನ ಅನ್ನ ಸಂತರ್ಪಣೆ, ರಾತ್ರಿ 8ಕ್ಕೆ ಶ್ರೀ ಭೂತಬಲಿ, ಕಟ್ಟೆ ಪೂಜೆ, 10ರಿಂದ ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮಿ ಕೃಪಾಪೋಷಿತ ಯಕ್ಷಗಾನ ಮಂಡಳಿಯರಿಂದ ಸುದರ್ಶನ ವಿಜಯ ಎಂಬ ಯಕ್ಷಗಾನ ಬಯಲಾಟ, ಪೆರ್ಲ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಲಿರುವ ರಾಜೇಂದ್ರ ಬಿ. ಅವರಿಗೆ ಗೌರವಾರ್ಪಣೆ ನಡೆಯುವುದು. ಮಾ.23ರಂದು ಬೆಳಗ್ಗೆ ಉಷಃಪೂಜೆ, 10ಕ್ಕೆ ಶ್ರೀ ಬಲಿ ಉತ್ಸವ, ನವಕಾಭಿಷೇಕ, ಮಹಾಪೂಜೆ, ಮಧ್ಯಾಹ್ನ 1.30ರಿಂದ ಅನ್ನಸಂತರ್ಪಣೆ, ಸಂಜೆ 6.30ರಿಂದ ಮಂಜೇಶ್ವರ

ನಾಟ್ಯನಿಲಯಂ ನಿರ್ದೇಶಕ ಬಾಲಕೃಷ್ಣ ಮಂಜೇಶ್ವರ ಅವರ ಶಿಷ್ಠೆಯರಿಂದ ನೃತ್ಯ ವೈವಿಧ್ಯ, ರಾತ್ರಿ 8ಕ್ಕೆ ದೀಪೋತ್ಸವ, ಶ್ರೀ ಭೂತಬಲಿ, ಪಡುಭಾಗಕ್ಕೆ ಸವಾರಿ, ಕಟ್ಟೆಪೂಜೆ ಜರಗಲಿದೆ.

ಮಾ.24ರಂದು ಬೆಳಗ್ಗೆ 7.30ಕ್ಕೆ ಉಷಃಪೂಜೆ, 10ಕ್ಕೆ ಶ್ರೀ ಬಲಿ ಉತ್ಸವ, ಅಯ್ಯಂಗಾಯಿ ದರ್ಶನ ಬಲಿ, ನವಕಾಭಿಷೇಕ, ಮಧ್ಯಾಹ್ನ 12ರಿಂದ ರಾಮಚಂದ್ರ ಭಟ್ ಪೆರ್ಲ ಬಳಗದವರಿಂದ ಭಕ್ತಿ ಸಂಗೀತ, ಮಹಾಪೂಜೆ, 1 ರಿಂದ ಅನ್ನ ಸಂತರ್ಪಣೆ, ರಾತ್ರಿ 7ರಿಂದ ಜಗದೀಶ ಆಚಾರ್ಯ ಪುತ್ತೂರು ಮತ್ತು ಬಳಗದವರಿಂದ ಸಂಗೀತ ಗಾನ ಸಂಭ್ರಮ, 9ರಿಂದ ಶ್ರೀ ಭೂತ ಬಲಿ ಉತ್ಸವ, ಕಟ್ಟೆಪೂಜೆ, ರಥೋತ್ಸವ, ಸುಡುಮದ್ದು ಪ್ರದರ್ಶನ, ದರ್ಶನ, ಶಯನ, ಮಾ.25ರಂದು ಬೆಳಗ್ಗೆ ಕವಾಟೋದ್ಘಾಟನೆ, ಜಲದ್ರೋಣಿ ಪೂಜೆ, ಅಭಿಷೇಕ, ಹಣ್ಣುಕಾಯಿ ಸಮರ್ಪಣೆ, ಯಾತ್ರಾ ಹೋಮ, ಮಹಾಪೂಜೆ, ಮಧ್ಯಾಹ್ನ 12ರಿಂದ 1.30ರ ವರೆಗೆ ಅನ್ನ ಸಂತರ್ಪಣೆ, 2ರಿಂದ ಬಿಂದು ಮತ್ತು ಅನುಪಮ ಬಳಗದವರಿಂದ ಭಕ್ತಿ ಭಜನ್ ಸಂಧ್ಯಾಕಾರ್ಯಕ್ರಮ, ಶ್ರೀ ಬಲಿ ಉತ್ಸವ, ಕಟ್ಟೆಪೂಜೆ, ಅವಕೃತ ಸ್ನಾನ, ದರ್ಶನ ಬಲಿ, ರಾಜಾಂಗಣದಲ್ಲಿ ಶ್ರೀಮುಡಿ ಗಂಧ ಪ್ರಸಾದ ವಿತರಣೆ, ಬಟ್ಟಲು ಕಾಣಿಕೆ, ಧ್ವಜಾವರೋಹಣ, ಮಂತ್ರಾಕ್ಷತೆ, ಮಾ.26ರಂದು ಬೆಳಗ್ಗೆ 10 ರಿಂದ ಶ್ರೀ ವ್ಯಾಘ್ರ ದೈವ (ಪಿಲಿ ಚಾಮುಂಡಿ)ದ ನೇಮ ಜರಗಲಿದೆ ಎಂದು ಪ್ರಕಟಣೆ ತಿಳಿಸಿದೆ.

RELATED ARTICLES
- Advertisment -
Google search engine

Most Popular