ಉಡುಪಿ: ಗುಡ್ಯಾಂ ಕೆಮ್ಮಣ್ಣು ಶ್ರೀ ಭದ್ರಕಾಳಿ ಮಹಾ ಮಾರಿಕಾಂಬಾ ದೇವಸ್ಥಾನದ ವಠಾರದಲ್ಲಿರುವ ಶ್ರೀ ವ್ಯಾಘ್ರಚಾಮುಂಡಿ ದೈವಸ್ಥಾನದ ಚಾಮುಂಡಿ ಹಾಗೂ ಪಂಜುರ್ಲಿ ದೈವದ ಶಿಲಾಮೂರ್ತಿ ಪುನಃಪ್ರತಿಷ್ಠೆ ಬ್ರಹ್ಮಕುಂಭಾಭಿಷೇಕ, ಸರಳ ಧೂಮಾವತಿ ಹಾಗೂ ಪರಿವಾರ ದೈವಗಳ ನೇಮ ಮಾ. 22ರಿಂದ 24ರ ವರೆಗೆ ಜರಗಲಿದೆ.
ಮಾ. 22ರ ಸಂಜೆ 4ಕ್ಕೆ ವ್ಯಾಘ್ರ ಚಾಮುಂಡಿ ಹಾಗೂ ಪಂಜುರ್ಲಿ ದೈವದ ಶಿಲಾಮೂರ್ತಿಯನ್ನು ಹಂಪನಕಟ್ಟೆಯಿಂದ ದೈವಸ್ಥಾನದ ವರೆಗೆ ಮೆರವಣಿಗೆಯಲ್ಲಿ ತರಲಾಗುವುದು, ಪ್ರಾರ್ಥನೆ, ಗಣಪತಿ ಪೂಜೆ, ಪುಣ್ಯಾಹ, ಪಂಚಗವ್ಯ, ಮಹಾಸಂಕಲ್ಪ ರಾಕ್ಷೊಘ್ನ ಹೋಮ, ವಾಸ್ತು ಪೂಜೆ, ಬಿಂಬಶುದ್ಧಿ ಪೂರ್ವಕ ಬಿಂಬಾಧಿವಾಸಪೂಜೆ, ಪ್ರತಿಷ್ಠಾಧಿವಾಸ ಹೋಮ, ರಾತ್ರಿ 8.30ಕ್ಕೆ ಸಪರಿವಾರ ಪಿಲಿಚಾಮುಂಡಿ ಹಾಗೂ ಪಂಜುರ್ಲಿ ದೈವದ ಪುನಃಪ್ರತಿಷ್ಠೆ ಜೀವ ಕುಂಭ ಸೇಚನೆ, ಮಹಾಪ್ರಾಣ ಪ್ರತಿಷ್ಟಾಪನೆ, ತತ್ವಕಲಶ, ತತ್ವಹೋಮ, ಕಲಶಾಭಿಷೇಕ ಪೂರ್ವಕ ಮಹಾಪೂಜೆ ನಡೆಯಲಿದೆ. ಮಾ. 23ರ ಬೆಳಗ್ಗೆ 10ರಿಂದ ಅಷ್ಟೋತ್ತರ ಶತಪರಿಕಲಶ ಸಹಿತ ಪ್ರಧಾನ ಕುಂಭಾಭಿಷೇಕ, ಸ್ವಪ್ನಾಧಿವಾಸ ಸರಳ ಹೋಮ, ಕೊಡಿಮರ ಏರುವ ಸಮಯ, ಕಲಶಾಭಿಷೇಕ ಪೂರ್ವಕ ಮಹಾಪೂಜೆ, ಮಧ್ಯಾಹ್ನ 12.30ರಿಂದ ಅನ್ನಸಂತರ್ಪಣೆ, ಮಾ. 24ರ ಬೆಳಗ್ಗೆ 7ಕ್ಕೆ ಜುಮಾದಿ ಸ್ಥಾನದಲ್ಲಿ ಪ್ರಾರ್ಥನೆ, ಚಪ್ಪರ ಆರೋಹಣ, 9ಕ್ಕೆ ಸಾನತೋಟ ಧೂಮಾವತಿ ಪರಿವಾರ ದೈವಗಳ ದೈವಸ್ಥಾನದಿಂದ ಮುಖಮೂರ್ತಿಯೊಂದಿಗೆ ಭಂಡಾರ ಹೊರಟು ಚಪ್ಪರ ಪ್ರವೇಶ, ಮಧ್ಯಾಹ್ನ 12.30ರಿಂದ ಅನ್ನಸಂತರ್ಪಣೆ, ಸಂಜೆ 5ರಿಂದ ನೇಮ ನೆರವೇರಲಿದೆ ಎಂದು ದೈವಸ್ಥಾನದ ಪ್ರಕಟನೆ ತಿಳಿಸಿದೆ.