ಯುಎಇ ದುಬೈಯ “ತುಳು ಪಾತೆರ್ ಗ ತುಳು ಒರಿಪಾಗ” ಕೂಟದ 11ನೇ ವರ್ಷದ ಗೌಜಿ ಗಮ್ಮತ್ತ್ ತುಳುನಾಡಿನ ಕ್ರೀಡೆ ಕಾರ್ಯಕ್ರಮವು ಮಾ.3 ಭಾನುವಾರ ಬೆಳಿಗ್ಗೆ 9.30 ರಿಂದ ಸಂಜೆ 6 ಗಂಟೆಯ ತನಕ ದುಬೈಯ ಜಾಪ್ಲೆ ಮೆಟ್ರೋ ಸ್ಟೇಷನ್ ನ ಹಿಂದೆ ಇರುವ ಝುಟೀಲ್ ಪಾರ್ಕ್ ನ ಗೇಟ್ ನಂ.1 ರಲ್ಲಿ ನಡೆಯಲಿದೆ.
ಹಾಗೆಯೇ ಬೇರೆ ಬೇರೆ ಕ್ಷೇತ್ರದಲ್ಲಿ ಕೆಲಸ ಮಾಡಿದ ಸಾಧಕರಿಗೆ ಸನ್ಮಾನ ನಡೆಯಲಿದೆ. ಸಮಸ್ತ ತುಳುವರು ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ಯುಎಇ ದುಬೈಯ ತುಳು ಪಾತೆರ್ ಗ ತುಳು ಒರಿಪಾಗ ಸಂಘದ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.