ತೆಕ್ಕಟ್ಟೆ: ಮಲ್ಯಾಡಿ ಶ್ರೀ ಸತ್ಯಗಣಪತಿ ದೇವಸ್ಥಾನ, ಶ್ರೀ ಮಹಾದೇವಿ, ಶ್ರೀ ನಂದಿಕೇಶ್ವರ ಸಪರಿವಾರ ದೈವಸ್ಥಾನದ ನಾಗದೇವರ ಸನ್ನಿಧಿಯಲ್ಲಿ ಮಾ. 26ರಿಂದ ಮಾ.30ರ ವರೆಗೆ ಪುನಃ ಪ್ರತಿಷ್ಠೆ, ಬಹ್ಮಕಲಶಾಭಿಷೇಕ, ಚತುಃ ಪವಿತ್ರ ನಾಗಮಂಡಲೋತ್ಸವವು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವೇ.ಮೂ. ಮಧುಸೂದನ ಬಾಯರಿ ಮಣೂರು ನೇತೃತ್ವದಲ್ಲಿ ಅವರ ಗಣಪತಿ ಅಡಿಗ ಮಲ್ಯಾಡಿ ಅವರ ಮಾರ್ಗದರ್ಶನದಲ್ಲಿ ಜರಗಲಿದೆ.
ಮಾ.26ರಂದುಸಂಜೆ ಪ್ರಾರ್ಥನಾ ಫಲನ್ಯಾಸ ಪೂರ್ವಕ, ಕುಲದೇವತಾ ಪ್ರಾರ್ಥನೆ, ಗುರುಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹ ವಾಚನ, ವಾಸ್ತುಪೂಜಾ ಬಲಿ, ಅಧಿವಾಸ ಹೋಮಗಳು, ಮಾ.27ರಂದು ಬೆಳಗ್ಗೆ ಗುರುಗಣೇಶ ಪ್ರಾರ್ಥನೆ, ನಾಂದೀ ಸಮಾರಾಧನೆ, ಕೃಚ್ಚಾಚರಣೆ, ಋತ್ವಿಗ್ ವರಣೆ, 10.35ಕ್ಕೆ ಪೂರ್ವಕ ಶ್ರೀ ನಾಗದೇವರ ಪ್ರತಿಷ್ಠೆ ತದಂಗ ನ್ಯಾಸಾದಿಗಳು, ತತ್ವಕಲಶ ಸ್ಥಾಪನೆ, ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ ಸಪರಿವಾರ ಶ್ರೀ ನಂದಿಕೇಶ್ವರನ ಸನ್ನಿಧಿಯಲ್ಲಿ ವಾಸ್ತು ಪೂಜಾ ಬಲಿ, ಕಲಾಭಿವೃದ್ಧಿ ನಡೆಯಲಿದೆ.
ಸಂಜೆ ತೆಕ್ಕಟ್ಟೆ ಮಹಾಲಿಂಗೇಶ್ವರ ದೇವಸ್ಥಾನದಿಂದ ಮಲ್ಯಾಡಿಯ ತನಕ ಹೊರೆಕಾಣಿಕೆ ಸಮರ್ಪಣೆ ಮೆರವಣಿಗೆ ಸಾಗಿಬರಲಿದೆ. ಮಾ.28ರಂದು ಬೆಳಗ್ಗೆ ಶ್ರೀ ಬ್ರಹ್ಮನಿಗೆ ಕಲಾಭಿವೃದ್ಧಿ ಕಾರ್ಯಕ್ರಮ, ಸಂಜೆ ಉಳ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದಿಂದ ಮಲ್ಯಾಡಿ ತನಕ ಹೊರೆಕಾಣಿಕೆ ಸಮರ್ಪಣೆ ಮೆರವಣಿಗೆ ಸಾಗಿ ಬರಲಿದೆ. ಮಾ.29ರಂದು ರಾತ್ರಿ ಸರ್ವ ಪ್ರಾಯಶ್ಚಿತ್ತ ರೂಪ ಆಶ್ಲೇಷಾ ಬಲಿ, ಉದ್ಯಾಪನ ಹೋಮ, ವಾಸ್ತು ಪೂಜಾ ಬಲಿ, ರಾಕ್ಷೋಘ್ನ ಹೋಮ, ದಿಗ್ನಲಿ, ಪ್ರಸಾದ ವಿತರಣೆ ನಡೆಯಲಿದೆ.
ಮಾ.30ರಂದು ಬೆಳಗ್ಗೆ 7ಕ್ಕೆ ಗುರುಗಣಪತಿ ಪೂಜೆ, ಕಚ್ಚ್ರಾಚರಣೆ, ಮಹಾಸಂಕಲ್ಪ, ಮಹಾಗಣಪತಿ ಯಾಗ, ತಿಲಾಹೋಮ, ಕೂಷ್ಮಾಂಡ ಹೋಮ, ಪವಮಾನ ಹೋಮ, ಪಂಚವಿಂಶತಿ ದ್ರವ್ಯ ಕಲಶ ಪೂರ್ವಕ ಕಲಶ ಸ್ಥಾಪನೆ, ಗಾಯತ್ರಿ ಜಪ, ಬ್ರಹ್ಮಕಲಶಾಭಿಷೇಕ, ವಟು ಬ್ರಾಹ್ಮಣ ಆರಾಧನೆ, ಸುವಾಸಿನಿ ಪೂಜೆ, ದಂಪತಿ ಪೂಜೆ, ಆಚಾರ್ಯ ಪೂಜೆ, ಮಹಾಮಂಗಳಾರತಿ, ನಾಗಸಂದರ್ಶನ, ಪಲ್ಲ ಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ, ಸಂಜೆ ಗಂಟೆ 7ಕ್ಕೆ ನಾಗನಿಗೆ ಹಾಲಿಟ್ಟು ಸೇವೆ, ರಾತ್ರಿ 8.30ಕ್ಕೆ ಚತುಃಪವಿತ್ರ ನಾಗಮಂಡಲ ಸೇವೆ ಜರಗಲಿದೆ. ಮಾ. 30ರಂದು ಸಂಜೆ ಗಂಟೆ 5ಕ್ಕೆ ಕುಂಭಾಶಿ ಆನೆಗುಡ್ಡೆ ದೇವಸ್ಥಾನದ ವಿಶ್ರಾಂತ ಧರ್ಮದರ್ಶಿ ಕೆ.ಸೂರ್ಯನಾರಾಯಣ ಉಪಾಧ್ಯಾಯ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ.
ಜನಸಾಗರದ ನಿರೀಕ್ಷೆ: ಏಕಕಾಲಕ್ಕೆ 3000 ಮಂದಿ ಅನ್ನಪ್ರಸಾದ ಸ್ವೀಕರಿಸಲು 6ಚಪ್ಪರಗಳನ್ನುಹಾಕಲಾಗಿದ್ದು, 30 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸುವ ನಿರೀಕ್ಷೆ ಇದೆ. 4 ಸಾವಿರಕ್ಕೂ ಅಧಿಕ ವಾಹನ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಬೃಹತ್ ಸ್ವಾಗತ ಕಮಾನು, ಬಂಟಿಂಗ್‌ಗಳನ್ನು ಅಳವಡಿಸಲಾಗಿದ್ದು, ಸಕಲ ಸಿದ್ಧತೆಗಳು ಭರದಿಂದ ಸಾಗುತ್ತಿದೆ.