ಮೂಡುಬಿದಿರೆ: ವಿಶ್ವಹಿಂದು ಪರಿಷತ್-ಬಜರಂಗದಳ ‘ಮಾತೃಶಕ್ತಿ-ದುರ್ಗಾವಾಹಿನಿ ಮೂಡುಬಿದಿರೆ ಪ್ರಖಂಡ ಇದರ 21 ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆಯು 30-03-2024ನೇ ಶನಿವಾರ ಸಂಜೆ 5.30ಕ್ಕೆ ಮೂಡುಬಿದಿರೆ ಸ್ವರಾಜ್ಯ ಮೈದಾನ ಶ್ರೀ ಆದಿಶಕ್ತಿ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.
ಸಂಜೆ 5.30ಕ್ಕೆ ಕಲಶ ಪ್ರತಿಷ್ಠೆ, ಶ್ರೀ ಶನೈಶ್ಚರ ಪೂಜೆ ಆರಂಭ, ಸಂಜೆ 7.00ಕ್ಕೆ ಮಹಾಪೂಜೆ, ರಾತ್ರಿ 7.30ಕ್ಕೆ ಧಾರ್ಮಿಕ ಸಭೆ ರಾತ್ರಿ 8.30ರಿಂದ ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ರಾತ್ರಿ 10.00ರಿಂದ ಸುಪ್ರಸಿದ್ಧ ಕಲಾವಿದರನ್ನು ಒಳಗೊಂಡ ತೆಂಕುತಿಟ್ಟಿನ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ, ಹನುಮಗಿರಿ ಇವರಿಂದ ಶ್ರೀರಾಮ ಸೇತು ಕುಶಲವ ಯಕ್ಷಗಾನ ನಡೆಯಲಿದೆ.