ಮಣಿಪಾಲ: ಮಣಿಪಾಲ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ನ ಉದ್ಘಾಟನಾ ಸಮಾರಂಭವು ಮಾರ್ಚ್ 31 ರಂದು ಸೋಮವಾರ ಬೆಳಿಗ್ಗೆ 10.30 ಗಂಟೆಗೆ ನಡೆಯಲಿದೆ.
ಮಂಜುನಾಥ ಎಸ್ ಕೆ. ನಿರ್ದೇಶಕರು, ಕ.ರಾ. ಸಂಯುಕ್ತ ಸಹಕಾರಿ ನಿ., ಬೆಂಗಳೂರು ಇವರು ಉದ್ಘಾಟಿಸಲಿರುವರು. ಜಗನ್ನಾಥ ಶೆಟ್ಟಿ ಅಧ್ಯಕ್ಷರು, ಉಡುಪಿ ಜಿಲ್ಲಾ ಸೌಹಾರ್ದ ಒಕ್ಕೂಟ ನಿ. ಗಣಕಯಂತ್ರ ಉದ್ಘಾಟನೆ ಮಾಡಲಿರುವರು. ವಿಜಯ್ ಬಿ. ಎಸ್ ಭದ್ರತಾ ಕೊಠಡಿ ಉದ್ಘಾಟಿಸಲಿರುವರು.
ಮುಖ್ಯ ಅತಿಥಿಗಳಾಗಿ ಚೆಂಪಿ ರಾಮಚಂದ್ರ ಅನಂತ ಭಟ್, ದೇವಿ ಪ್ರಸಾದ ಶೆಟ್ಟಿ, ಪ್ರಶಾಂತ್ ಜತ್ತನ್, ನಿತ್ಯಾನಂದ ವಳಕಾಡು, ಸ್ಟಿಫನ್ ಜಮಖಂಡಿ, ಪ್ರಸಾದ್ ರೈ, ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮುಲ್ಕಿ, ಆನಂದ ಕುಮಾರ್, ಫಾದರ್ ಪಾಲ್ಸ್ ಮ್ಯಾನೇಜಸ್, ಓಂ ಪ್ರಸಾದ್ ಶೆಟ್ಟಿ, ಸಂತೋಷ್ ಕುಮಾರ್ ಹೆಗ್ಡೆ, ಗ್ಲಾಡ್ಸನ್ ಕರ್ಕಡ, ಪ್ರಶಾಂತ ಸಾಲಿಯನ್, ರೂಪೇಶ ಕಲ್ಮಾಡಿ, ವಿಜಯ ಶೆಟ್ಟಿ ಉಪಸ್ಥಿತರಿರಲಿರುವರು.