Sunday, July 14, 2024
Homeಕ್ರೀಡೆಮಾ.5 : ಹೆಜಮಾಡಿಯಲ್ಲಿ ಉಡುಪಿ ಜಿಲ್ಲಾ ಪತ್ರಕರ್ತರ ಕ್ರಿಕೆಟ್ ಪಂದ್ಯ

ಮಾ.5 : ಹೆಜಮಾಡಿಯಲ್ಲಿ ಉಡುಪಿ ಜಿಲ್ಲಾ ಪತ್ರಕರ್ತರ ಕ್ರಿಕೆಟ್ ಪಂದ್ಯ

ಪಡುಬಿದ್ರೆ : ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿ ಹಬ್ಬದ ಸಂಭ್ರಮದ ಪರವಾಗಿ ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮುಂದಾಳತ್ವದಲ್ಲಿ ಮಾ.5 ಮಂಗಳವಾರ ಹೆಜಮಾಡಿಯ ಬಸ್ತಿಪಡ್ಪು ರಾಜೀವಗಾಂಧಿ ಕ್ರೀಡಾಂಗಣದಲ್ಲಿ ಉಡುಪಿ ಜಿಲ್ಲಾ ಪತ್ರಕರ್ತರ ಕ್ರಿಕೆಟ್ ಪಂದ್ಯ ನಡೆಯಲಿದೆ.

ಜಿಲ್ಲೆಯ ಎಲ್ಲಾ ತಾಲೂಕು ಪತ್ರಕರ್ತರ ಸಂಘದ ಸದಸ್ಯರು ಪಂದ್ಯದಲ್ಲಿ ರಜತ ಸಂಭ್ರಮ ಟ್ರೋಫಿಗಾಗಿ ಆಡಲಿದ್ದಾರೆ. ಮಾ.5 ಮಂಗಳವಾರ ಬೆಳಿಗ್ಗೆ 9 ಗಂಟೆಯಿಂದ ಆರಂಭಗೊಳ್ಳಲಿದೆ.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಪು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಹೆಜ್ಮಾಡಿ ವಹಿಸಲಿದ್ದಾರೆ. ಇದರ ಉದ್ಘಾಟನೆಯನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾಡುವರು.

ಮುಖ್ಯ ಅತಿಥಿಯಾಗಿ ಉಡುಪಿ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ, ಕಾಪು ತಹಸೀಲ್ದಾರ್ ಡಾ.ಪ್ರತಿಭಾ ಆರ್., ಪಡುಬಿದ್ರೆ ಆಸ್ಪಿನ್ ಇನ್ಫ್ರಾ ಪ್ರೈ.ಲಿ. ದ ಜಿ.ಎಮ್. ಅಶೋಕ್ ಶೆಟ್ಟಿ, ಪಡುಪಣಂಬೂರು ಗ್ರಾ.ಪಂ. ಮಾಜಿ ಅಧ್ಯಕ್ಷ ವಿನೋದ್ ಸಾಲ್ಯಾನ್ ಬೆಳ್ಳಾಯರ್, ಉಡುಪಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ತಾ.ಪಂ.ಮಾಜಿ ಸದಸ್ಯ ಸಚಿನ್ ನಾಯಕ್, ತಾಲೂಕು ಯುವಜನ ಮತ್ತು ಕ್ರೀಡಾ ಅಧಿಕಾರಿ ರಿತೇಶ್ ಕುಮಾರ್ ಶೆಟ್ಟಿ, ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಲಯದ ಆಡಳಿತ ಮೊಕ್ತೇಸರರು ದಯಾನಂದ ಹೆಜ್ಮಾಡಿ, ರಜತ ಸಂಭ್ರಮ ಸಮಿತಿಯ ಸಂಚಾಲಕರಾದ ಮೊಹಮ್ಮದ್ ಶರೀಫ್ ಪಾಲ್ ಉಪಸ್ಥಿತರಿರುವರು.

ಸಂಜೆ ನಡೆಯುವ ಧನ್ಯವಾದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ವಿನಯಕುಮಾರ್ ಸೊರಕೆ ಪ್ರಶಸ್ತಿ ನೀಡುವರು. ಅದಾನಿ ಪವರ್ ಕಂಪೆನಿಯ ಕಿಶೋರ್ ಆಳ್ವ, ಪಡುಬಿದ್ರೆ ಬಿಡು ರತ್ನಾಕರ ರಾಜ್ ಅರಸು ಕಿನ್ಯಕ್ಕ ಬಲ್ಲಾಳ, ಪಡುಬಿದ್ರೆ ಸಹಕಾರಿ ಸೊಸೈಟಿಯ ಅಧ್ಯಕ್ಷರಾದ ವೈ.ಸುಧೀರ್ ಕುಮಾರ್, ಕಾಪು ಗಾರ್ಡನ್ ಪ್ಯಾಲೇಸ್ ಎಮ್.ಡಿ. ಗೌರವ್ ಶೇಣವ, ಪಡುಬಿದ್ರೆ ಅಮರ್ ಕಾಂಫರ್ಟ್ ನ ಮಿಥುನ್ ಆರ್.ಹೆಗ್ಡೆ, ಕೆಪಿಸಿಸಿ ಕೋರ್ಡಿನೇಟರ್ ನವೀನ್‌ಚಂದ್ರ ಜೆ.ಶೆಟ್ಟಿ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಉಪಸ್ಥಿತರಿರುವರು.

RELATED ARTICLES
- Advertisment -
Google search engine

Most Popular