ತಾ. 06-03-2025ನೇ ಗುರುವಾರ ಕಾರ್ಯಕ್ರಮಗಳು ಬೆಳಿಗ್ಗೆ ಗಂಟೆ 9-00ಕ್ಕೆ ನಾಗ ದೇವರ ಪ್ರತಿಷ್ಠಾ ವರ್ದಂತಿ, ಭಕ್ತಾಧಿಗಳಿಂದ ಸಾಮೂಹಿಕ ಆಶ್ಲೇಷ ಬಲಿ ಪೂಜೆ, ಪವಮಾನ ಹೋಮ, ಕಲಶಾಭಿಷೇಕ, ಮಹಾಪೂಜೆ ಹಾಗೂ ಪ್ರಸಾದ ವಿತರಣೆ. ಮದ್ಯಾಹ್ನ ಗಂಟೆ 12-30ರಿಂದ ಪಲ್ಲ ಪೂಜೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ದಿ. ಶಂಕರ ಶೆಟ್ಟ ಪರೇಲರ ಮನೆ ಹೆಜಮಾಡಿ ಇವರ ಸ್ಮರಣಾರ್ಥ, ಪತ್ನಿ, ಮಕ್ಕಳು, ಸೊಸೆಯಂದಿರು ಮತ್ತು ಮೊಮ್ಮಕ್ಕಳಿಂದ ಸೇವೆ. ಸಂಜೆ ಗಂಟೆ 6-30ಕ್ಕೆ ಶ್ರೀ ದೈವದ ಭಂಡಾರ ಇಳಿಯುವುದು. ರಾತ್ರಿ ಗಂಟೆ 10-00ಕ್ಕೆ ಶ್ರೀ ಧೂಮಾವತಿ ದೈವದ ನೇಮೋತ್ಸವ ನಡೆಯಲಿದೆ.