Tuesday, March 18, 2025
Homeಧಾರ್ಮಿಕಮಾ.7 -20: ನಂದಿಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಮಹೋತ್ಸವ

ಮಾ.7 -20: ನಂದಿಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಮಹೋತ್ಸವ

ಪಡುಬಿದ್ರೆ : ನಂದಿಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಮಹೋತ್ಸವವು ಮಾ. 7 ರಿಂದ 20 ರ ವರೆಗೆ ನಡೆಯಲಿದೆ. ಮಾ.18 ರಂದು ಸೋಮವಾರ ವರ್ಷಾವಧಿ ಮಹೋತ್ಸವವು ಜರಗಲಿರುವುದು.

ಕಾರ್ಯಕ್ರಮ

7-3-2024 ಗುರುವಾರ ಮಧ್ಯಾಹ್ನ 12ಕ್ಕೆ ಮಹಾಪೂಜೆ, ರಾತ್ರಿ 7-00ಕ್ಕೆ ಮಹಾರಂಗಪೂಜೆ, ಅಡ್ವೆ ಮಾಗಂದಡಿ ಜಗ್ಗು ಶೆಟ್ಟಿಯವರಿಂದ, ಉತ್ಸವ ಬಲಿ ಹೊರಡುವುದು.

8-3-2024 ಶುಕ್ರವಾರ ಬೆಳಿಗ್ಗೆ 7ಕ್ಕೆ ಮಹಾಪೂಜೆ, ಸಮಾರಾಧನ,. ರಾತ್ರಿ ರಂಗಪೂಜೆ, ಉತ್ಸವ ಬಲಿ ಅಡ್ವೆ ಚೀಂಕ್ರಿಗುತ್ತಿನವರಿಂದ.

9-3-2024 ಶನಿವಾರ ಮಧ್ಯಾಹ್ನ 12ಕ್ಕೆ ಮಹಾಪೂಜೆ, ಸಮಾರಾಧನೆ, ರಾತ್ರಿ ರಂಗಪೂಜೆ, ಉತ್ಸವ ಬಲಿ ಪಡುಮನೆ ಕುಟುಂಬಸ್ಥರಿಂದ.

10-3-2024 ಆದಿತ್ಯವಾರ ಮಧ್ಯಾಹ್ನ 12ಕ್ಕೆ ಮಹಾಪೂಜೆ, ಸಮಾರಾಧನೆ, ರಾತ್ರಿ ರಂಗಪೂಜೆ, ಉತ್ಸವ ಬಲಿ ಪಟ್ಟಿಂಜೆ ಗುತ್ತಿನವರಿಂದ.

11-3-2024 ಸೋಮವಾರ ಮಧ್ಯಾಹ್ನ 12ಕ್ಕೆ ಮಹಾಪೂಜೆ, ಸಮಾರಾಧನೆ, ರಾತ್ರಿ ರಂಗಪೂಜೆ, ಉತ್ಸವ ಬಲಿ ಅಡ್ವೆ ಕುಂಞರೈ ಮನೆಯವರಿಂದ.

12-3-2024 ಮಂಗಳವಾರ ಮಧ್ಯಾಹ್ನ 12ಕ್ಕೆ ಮಹಾಪೂಜೆ, ಸಮಾರಾಧನೆ, ರಾತ್ರಿ ರಂಗಪೂಜೆ, ಉತ್ಸವ ಬಲಿ ಅಡ್ವೆ ಕೆಂಗಡಗುತ್ತಿನವರಿಂದ.

13-3-2024 ಬುಧವಾರ ಮಧ್ಯಾಹ್ನ 12ಕ್ಕೆ ಮಹಾಪೂಜೆ, ಸಮಾರಾಧನೆ, ಅಡ್ವೆ ದೇವಸ್ಯ ಕುಟುಂಬಸ್ಥರಿಂದ, ಅಂಕುರಾರೋಹಣ, ಪ್ರಾಸಾದ ಶುದ್ದಿ 7ಕ್ಕೆ, ಮಹಾ ರಂಗಪೂಜೆ-ಅವರಾಲು ದಾರಡಗುತ್ತು ದಿ| ಮೀನಕ್ಕ ಶೆಡ್ತಿಯವರ ಮೊಮ್ಮಕ್ಕಳಿಂದ, ರಾತ್ರಿ ಉತ್ಸವ ಬಲಿ ದೇವಾಡಿಗ ಸಮಾಜದವರಿಂದ.

14-3-2024 ಗುರುವಾರ ಬೆಳಿಗ್ಗೆ ನವಗ್ರಹಯಾಗ, ಕಂಕಣಬಂಧ, 11ಕ್ಕೆ ಧ್ವಜಾರೋಹಣ, ನವಕ ಕಲಶಾಭಿಷೇಕ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಸಮಾರಾಧನೆ, ಕೋಚಬಾಳಿಕೆ ಕುಟುಂಬಸ್ಥರಿಂದ.

15-3-2024 ಶುಕ್ರವಾರ ಬೆಳಿಗ್ಗೆ ನವಕ ಕಲಶಾಭಿಷೇಕ, 12ಕ್ಕೆ ಮಹಾಪೂಜೆ, ಸಮಾರಾಧನೆ ರಾಘವೇಂದ್ರ ರಾವ್, ತಿಲಕ್ ರಾವ್ ಮತ್ತು ಕೆಲ್ಲಾರು ದಿ। ಭಾಗಿ ಶೆಡ್ತಿ ಮನೆಯವರಿಂದ. ಸಂಜೆ ಗಂಟೆ 4-00ಕ್ಕೆ ಉತ್ಸವ ಬಲಿ-ಅವರಾಲು ಬಡಗುಮನೆ ಕುಟುಂಬಸ್ಥರಿಂದ, ಸಂಜೆ 4-30ಕ್ಕೆ ಬಡಗು ಸವಾರಿ (ಕಟ್ಟೆಪೂಜೆ).

16-3-2024 ಶನಿವಾರ ಬೆಳಿಗ್ಗೆ ನವಕ ಕಲಶಾಭಿಷೇಕ, ಮಧ್ಯಾಹ್ನ 12-00ಕ್ಕೆ ಮಹಾಪೂಜೆ, ಸಮಾರಾಧನೆ- ದೇವಳದ ವತಿಯಿಂದ. ಸಂಜೆ 4-00ಕ್ಕೆ ಉತ್ಸವ ಬಲಿ ಅಡ್ವೆ ಕೆಲ್ಲಾರುಗುತ್ತು ಕುಟುಂಬಸ್ಥರಿಂದ. ಸಂಜೆ ಗಂಟೆ 4-30ಕ್ಕೆ ಮೂಡು ಸವಾರಿ (ಕಟ್ಟೆ ಪೂಜೆ).

17-3-2024 ಆದಿತ್ಯವಾರ ನವಕ ಕಲಶಾಭಿಷೇಕ, ಮಧ್ಯಾಹ್ನ 12-00ಕ್ಕೆ ಮಹಾಪೂಜೆ, ಸಮಾರಾಧನೆ, ಸಂಜೆ ಉತ್ಸವ ಬಲಿ, ಚಂದ್ರಮಂಡಲ ಉತ್ಸವ, ಕೆರೆದೀಪ ಅವರಾಲು ತಿರ್ತೊಟ್ಟು ಮನೆ ಕುಟುಂಬಸ್ಥರಿಂದ, 6-00ಕ್ಕೆ ಪಡು ಸವಾರಿ (ಕಟ್ಟೆ ಪೂಜೆ).

18-3-2024 ಸೋಮವಾರ ನವಕ ಕಲಶಾಭಿಷೇಕ, ಮಹಾಪೂಜೆ, ಪೂರ್ವಾಹ್ನ 11-00ಕ್ಕೆ ರಥಾರೋಹಣ, ಬ್ರಾಹ್ಮಣ ಸುವಾಸಿನಿ ಆರಾಧನೆ, ನಂದಿಕೂರು ಕಟ್ಟೆಮನೆ ಅನುವಂಶಿಕ ಅರ್ಚಕ ದಿ। ಕೃಷ್ಣ ಭಟ್ ಮತ್ತು ಪತ್ನಿ ದಿ| ಕೃಷ್ಣವೇಣಿ ಅಮ್ಮನವರ ಸ್ಮರಣಾರ್ಥ ಅವರ ಮಗ ಎನ್. ಶ್ರೀನಿವಾಸ ಭಟ್ ಮತ್ತು ಮೊಮ್ಮಕ್ಕಳಿಂದ, ಭೂರಿ ಭೋಜನ 1ಕ್ಕೆ, ರಾತ್ರಿ ಸ್ಯಾಕ್ರೋಫೋನ್ ವಾದನ- ದಿ. ಓಬು ಶೇರಿಗಾರರ ಮೊಮ್ಮಗಳು- ಅಕ್ಷತಾ ಅನೂಪ್ ದೇವಾಡಿಗ ಇವರಿಂದ. ರಾತ್ರಿ 7-30ಕ್ಕೆ ಮಹಾ ರಥೋತ್ಸವ, ಉತ್ಸವ ಬಲಿ, ಶ್ರೀ ಭೂತ ಬಲಿ, ಕವಾಟ ಬಂಧನ.

19-3-2024 ಮಂಗಳವಾರ ಸೂರ್ಯೋದಯಕ್ಕೆ ಕವಾಟೋದ್ಘಾಟನೆ, ತುಲಾಭಾರ, ಸಾರ್ವಜನಿಕ ಹೂವಿನ ಪೂಜೆ, ಉತ್ಸವ ಬಲಿ, ನವಕ ಕಲಶಾಭಿಷೇಕ, ಮಹಾಪೂಜೆ, ಸಮಾರಾಧನೆ ಬಾರ್ಪಣೆ ದಿ। ಪದ್ಮನಾಭಯ್ಯನವರ ಮಕ್ಕಳಿಂದ ಹಾಗೂ ಬರಿಮಾರು ಕೃಷ್ಣ ಶೆಟ್ಟಿ ಮತ್ತು ಪಟ್ಟಿಂಜೆ ಗುತ್ತು ಶಿವ ಶೆಟ್ಟಿ ಕುಟುಂಬಸ್ಥರಿಂದ. ಸಂಜೆ 6ಕ್ಕೆ ಓಕುಳಿ, ತೆಂಕು ಸವಾರಿ, ಅವಕೃತ ಸ್ನಾನ, ಪಾಲಕಿ ಉತ್ಸವ, ಬಲಿ, ಗಂಧಪೂಜೆ, ಧ್ವಜ ಅವರೋಹಣ, ರಾತ್ರಿ ಪೂಜೆ, ಮಹಾ ಮಂತ್ರಾಕ್ಷತೆ, ಜಾರಂದಾಯ ದೈವದ ಕೋಲ.

20-3-2024 ಬುಧವಾರ ಸಂಪ್ರೋಕ್ಷಣೆ, ಮಧ್ಯಾಹ್ನ 12ಕ್ಕೆ ಮಹಾಪೂಜೆ.
21-3-2024 ಗುರುವಾರ ಸಂಜೆ 5-00ಕ್ಕೆ ರಕೇಶ್ವರಿ ತಂಬಿಲ.

RELATED ARTICLES
- Advertisment -
Google search engine

Most Popular