Saturday, July 20, 2024
Homeಉಡುಪಿಮಾ.8-10: ಮಲ್ಪೆ ಪಡುಗುಡ್ಡೆ ಶ್ರೀ ಕ್ಷೇತ್ರ ಸರ್ವೇಶ್ವರ ದೇವಸ್ಥಾನದ 28ನೇ ವರ್ಧಂತಿ, ಶಿವರಾತ್ರಿ ಮಹೋತ್ಸವ

ಮಾ.8-10: ಮಲ್ಪೆ ಪಡುಗುಡ್ಡೆ ಶ್ರೀ ಕ್ಷೇತ್ರ ಸರ್ವೇಶ್ವರ ದೇವಸ್ಥಾನದ 28ನೇ ವರ್ಧಂತಿ, ಶಿವರಾತ್ರಿ ಮಹೋತ್ಸವ

ಮಲ್ಪೆ : ಇಲ್ಲಿನ ಬಾಪುತೋಟ ಪಡುಗುಡ್ಡೆ ಶ್ರೀ ಕ್ಷೇತ್ರ ಸರ್ವೇಶ್ವರ ದೇವಸ್ಥಾನದ 28ನೇ ವರ್ಧಂತಿ, ಶಿವರಾತ್ರಿ ಮಹೋತ್ಸವವು ಮಾ. 8ರಿಂದ 10ರ ವರೆಗೆ ಕೋಟ ಚಂದ್ರಶೇಖರ ಸೋಮಯಾಜಿ ಅವರ ನೇತೃತ್ವದಲ್ಲಿ ನಡೆಯಲಿದೆ.

ಮಾ. 8ರಂದು ಬೆಳಗ್ಗೆ ಪ್ರಾರ್ಥನೆ, ರುದ್ರ ಕುಂಭಸ್ಥಾಪನೆ, ರುದ್ರಾಭಿಷೇಕ, ಕಲಶಾಭಿಷೇಕ, ಮಹಾಪೂಜೆ, ಮಧ್ಯಾಹ್ನ ತುಲಾಭಾರ ಸೇವೆ, ರಾತ್ರಿ ರಂಗಪೂಜೆ ಜರಗಲಿದೆ. ಬಳಿಕ ಮಕ್ಕಳಿಂದ ಮನೋರಂಜನೆ, ತುಳು ನಾಟಕ ಪ್ರದರ್ಶನ ನಡೆಯಲಿದೆ. ಮಾ. 9ರಂದು ಬೆಳಗ್ಗೆ 8.30ರಿಂದ ಪಂಚದೈವ ನಾಗಬ್ರಹ್ಮಸ್ಥಾನದಲ್ಲಿ ಆಶ್ಲೇಷಾ ಬಲಿ, ಕಲಾಭಿವೃದ್ಧಿ ಹೋಮ, ನವಕಲಶ ಸಂಪನ್ನ, ಮಹಾಪೂಜೆ, ಸಂಜೆ 6ಕ್ಕೆ ರಕೇಶ್ವರಿ ಸನ್ನಿಧಿಯಲ್ಲಿ ಕಲಾಭಿವೃದ್ಧಿ ಹೋಮ, ನವಕಲಶ ಸಂಪನ್ನ, ಮಹಾಪೂಜೆ, ರಾತ್ರಿ ತುಳು ನಾಟಕ ಪ್ರದರ್ಶನಗೊಳ್ಳಲಿದೆ.

ಮಹಾಅನ್ನಸಂತರ್ಪಣೆ : ಮಾ. 10ರಂದು ಬೆಳಗ್ಗೆ ಸರ್ವೇಶ್ವರ ಸನ್ನಿಧಿಯಲ್ಲಿ ಬ್ರಹ್ಮಕಲಶ ಸ್ಥಾಪನೆ, ಕಲಾಭಿವೃದ್ಧಿ ಹೋಮ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಕಿದಿಯೂರು ಪಡುಕರೆ ರಾಮಮಿತ್ರ ಭಜನಮಂದಿರದವರಿಂದ ಭಜನೆ ನಡೆಯಲಿದೆ ಎಂದು ದೇಗುಲದ ಆಡಳಿತ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.

RELATED ARTICLES
- Advertisment -
Google search engine

Most Popular