ಹೊಸೂರು: ಶ್ರೀ ಬೀರಲಿಂಗೇಶ್ವರ ಶ್ರೀ ಚೌಡೇಶ್ವರಿ ಹಾಗೂ ಪರಿವಾರ ದೇವಸ್ಥಾನದಲ್ಲಿ 8-3-2024 ರಂದು 13ನೇ ವರ್ಷದ ವರ್ಧಂತಿ ಹಾಗೂ ಬೆಳಿಗ್ಗೆ 8ಕ್ಕೆ ವಿವಿಧ ಧಾರ್ಮಿಕ ಕಾರ್ಯಕ್ರದಿಂದ ಮೊದಲ್ಗೊಂಡು ಶ್ರೀ ದೇವರ ಸನ್ನಿಧಿಯಲ್ಲಿ ಬೆಳಿಗ್ಗೆ 10ಕ್ಕೆ 25ನೇ ವರ್ಷದ ಸಾಮೂಹಿಹ ಶ್ರೀ ಸತ್ಯನಾರಾಣ ವ್ರತ, ಮಧ್ಯಾಹ್ನ 12ಕ್ಕೆ ಗಣಹೋಮ, 1ಕ್ಕೆ ಮಹಾಪೂಜೆ, 1:30ಕ್ಕೆ ಅನ್ನಸಂತರ್ಪಣೆ, ರಾತ್ರಿ 8ಕ್ಕೆ ರಂಗಪೂಜೆ ಹಾಗೂ 9ಕ್ಕೆ ಭಕ್ತದಿಗಳಿಂದ ಮಹಾಪೂಜೆ, ಹೂವಿನ ಪೂಜೆ ಹಾಗೂ ಇತರೆ ಪೂಜೆಗಳಿ ನಡೆಯಲಿದೆ.
ರಾತ್ರಿ 10 ಕ್ಕೆ ಶ್ರೀ ದೇವರ ಸನ್ನಿಧಿಯಲ್ಲಿ 39ನೇ ವರ್ಷದ ಕೆಂಡೋತ್ಸವವು ನಡೆಯಲಿದೆ. ಕೆಂಡೋತ್ಸವ ಸಂತರ ಶ್ರೀ ಭದ್ರಕಾಳಿ ಅಮ್ಮನವರ ಕೃಪಾನುಗ್ರಹದ ಹವ್ಯಾಸಿ ಕಲಾ ಸಂಘ ಅವರ್ಸೆ ವತಿಯಿಂದ ಶ್ರೀರಾಮ ದರ್ಶನ- ರುಕ್ಮಾವತಿ ಕಲ್ಯಾಣ ಯಕ್ಷಗಾನ ನಡೆಯಲಿದೆ.