Saturday, July 20, 2024
Homeಮೂಡುಬಿದಿರೆಮಾ.29: ರಾಜ್ಯಮಟ್ಟದ ಜಾನಪದ ರಸಪ್ರಶ್ನೆ ಸ್ಪರ್ಧೆ

ಮಾ.29: ರಾಜ್ಯಮಟ್ಟದ ಜಾನಪದ ರಸಪ್ರಶ್ನೆ ಸ್ಪರ್ಧೆ

ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ಜಾನಪದ ಪರಿಷತ್ ಮೂಡುಬಿದಿರೆ ತಾಲೂಕು ಘಟಕದ ಜಾನಪದ ರಸಪ್ರಶ್ನೆ ರಾಜ್ಯಮಟ್ಟದ ಸ್ಪರ್ಧೆ ಮಾರ್ಚ್ 29 ರಂದು ಬೆಳಗ್ಗೆ .9.30 ಕ್ಕೆ ಮೂಡುಬಿದಿರೆಯ ಎಂ.ಸಿ.ಎಸ್ ಬ್ಯಾಂಕ್ ನ ಕಲ್ಪವ್ರಕ್ಷ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಎಂ.ಸಿ.ಎಸ್ ಬ್ಯಾಂಕ್ ನ ವಿಶೇಷ ಕಾರ್ಯನಿರ್ವಹಣಾ ಅಧಿಕಾರಿ ಚಂದ್ರಶೇಖರ ಎಂ ಮತ್ತು ಅಧ್ಯಕ್ಷರಾದ ಬಾಹುಬಲಿ ಪ್ರಸಾದ್ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಲಿರುವವರು. ಜಾನಪದ ಪರಿಷತ್ ಮಂಗಳೂರಿನ ಜಿಲ್ಲಾ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್ ಹಾಗು ಕಾರ್ಯದರ್ಶಿ ರಾಜೇಶ್ ಸ್ಕೈಲಾರ್ಕ್ ತುಳುವರ್ಡ್ ಡಾ.ರಾಜೇಶ್ ಆಳ್ವ, ಸಂಚಾಲಕರಾದ ಚೇತನ ರಾಜೇಂದ್ರ ಹೆಗ್ಡೆ, ತಾಲೂಕು ಘಟಕದ ಉಪಾಧ್ಯಕ್ಷರಾದ ಚಂದ್ರಹಾಸ ದೇವಾಡಿಗ, ಅಗರಿ ರಾಘವೇಂದ್ರ ರಾವ್, ಸಾಣೂರು ಅರುಣ್ ಶೆಟ್ಟಿಗಾರ್, ಡಾ.ರಾಮಕ್ರಷ್ಣ ಶಿರೂರು, ಡಾ. ಮಂದಾರ ರಾಜೇಶ್ ಭಟ್, ಯತಿರಾಜ್ ಜೈನ್, ಉಪಾಧ್ಯಕ್ಷರಾದ ಅಭಿಷೇಕ್ ಶೆಟ್ಟಿ ಐಕಳ, ಕೋಶಾಧಿಕಾರಿ ಡಾ.ನಾಗರಾಜ ಶೆಟ್ಟಿ ಅಂಬೂರಿ, ಕಾರ್ಯದರ್ಶಿ ಮಲ್ಲಿಕಾ ಸುಖೇಶ್, ಜಾನಪದ ಪರಿಷತ್ ಮೂಡುಬಿದಿರೆ ತಾಲೂಕು ಘಟಕದ ಸದಸ್ಯರಾದ ಭವ್ಯವಿನಯ್, ಡಾ. ಸೋಮಶೇಖರ ಮಯ್ಯ, ಸೀತಾರಾಮ ಕಟೀಲು, ಸದಾನಂದ ನಾರಾವಿ, ಬಾಸ್ಕರ ದೇವಾಡಿಗ, ಸಂತೋಷ್ ಕುಮಾರ್ ನ್ಯೂದುರ್ಗ, ಮೋಹನ್ ಕುಮಾರ್ ಹೊಸ್ಮಾರು, ಮಹದೇವ ಮೂಡು ಕೋಣಾಜೆ, ಕಿರಣ್ ಶೆಟ್ಟಿ ಅತ್ತೂರು, ರಘನಾಥ ಕಾಮತ್, ಸತೀಶ್ ಅಬ್ಬನಡ್ಕ, ಆಕರ್ಷಣ ಮಯ್ಯ, ಹಾಗೂ ವಾಯ್ಸ್ ಆಪ್ ಆರಾಧನದ ಪ್ರತಿಭೆಗಳು ಭಾಗವಹಿಸಲಿದ್ದಾರೆ. ಜಾನಪದ ಕಲೆ ಸಾಹಿತ್ಯ ಜಾನಪದ ಕ್ರೀಡೆ ಪರಿಕರಗಳು ಜಾನಪದ ಉಡುಪುಗಳು ಇದರ ಬಗ್ಗೆ ಪ್ರಶ್ನೆ ಕೇಳಲಾಗುವುದು ಎಂದು ಜಾನಪದ ಪರಿಷತ್ ಮೂಡುಬಿದಿರೆಯ ತಾಲೂಕು ಘಟಕದ ಅಧ್ಯಕ್ಷರಾದ ಪದ್ಮಶ್ರೀ ಭಟ್ ನಿಡ್ಡೋಡಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ: 8660140615 ಸಂಪರ್ಕಿಸಿ

RELATED ARTICLES
- Advertisment -
Google search engine

Most Popular