ಮರ್ಣೆ – ಮಣಿಪುರ ಶಕ್ತಿ ಕೇಂದ್ರದ ಸಭೆ ಇಂದು ದಿನಾಂಕ 31-03-2024 ರಂದು ದೆಂದೂರುಕಟ್ಟೆ ಸಿದ್ಧಿವಿನಾಯಕ ಸಭಾಭವನದಲ್ಲಿ ನಡೆಯಿತು. ಸಭೆಯಲ್ಲಿ ಶಾಸಕರಾದ ಗುರ್ಮೆ ಸುರೇಶ ಶೆಟ್ಟಿ ಅವರು ಭಾಗವಹಿಸಿದರು.
ಶಾಸಕರು ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಮೆಚ್ಚಿ ವಿದೇಶಿ ಗಣ್ಯರು ಅವರನ್ನು ವಿಶ್ವ ನಾಯಕ ಎಂದು ಕರೆಯುತ್ತಿದ್ದಾರೆ. ಇಂತಹ ಸಮರ್ಥ ನಾಯಕ ಮಗದೊಮ್ಮೆ ಪ್ರಧಾನ ಮಂತ್ರಿರನ್ನಾಗಿಸಲು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಸರಳ ಸಜ್ಜನಿಕೇಯ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕು ಎಂದರು.
ಈ ಸಂದರ್ಭದಲ್ಲಿ ಕಾಪು ಮಂಡಲ ಬಿಜೆಪಿ ಅಧ್ಯಕ್ಷರಾದ ಜಿತೇಂದ್ರ ಶೆಟ್ಟಿ, ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್, ಕಾಪು ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲಕೃಷ್ಣ ರಾವ್, 80 ಬಡಗಬೆಟ್ಟು ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿಗಳಾದ ಪದ್ಮನಾಭ ನಾಯಕ್, ಮರ್ಣೆ ಶಕ್ತಿ ಕೇಂದ್ರದ ಸಂಚಾಲಕರಾದ ಪ್ರಜ್ವಲ್ ಹೆಗ್ಡೆ, ಸಹ ಸಂಚಾಲಕರಾದ ಗಣಪತಿ ನಾಯಕ್, ಮಣಿಪುರ ಶಕ್ತಿ ಕೇಂದ್ರದ ಸಂಚಾಲಕರಾದ ರಾಜೇಶ್ ಪುತ್ರನ್, ಸಹ ಸಂಚಾಲಕರಾದ ನಾಗೇಶ್ ಶೆಟ್ಟಿ, ಮಣಿಪುರ ಗ್ರಾಮ ಪಂಚಾಯತ್ ಸದಸ್ಯರು, ಪಕ್ಷದ ಹಿರಿಯರು, ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.