Sunday, July 14, 2024
HomeUncategorizedತಾಳಿ ಕಟ್ಟಿಸಿಕೊಳ್ಳುವ ಕೊನೇಕ್ಷಣದಲ್ಲಿ ಕೈಕೊಟ್ಟ ಮದುಮಗಳು: ಅರ್ಧದಲ್ಲೇ ನಿಂತ  ಮದುವೆ!

ತಾಳಿ ಕಟ್ಟಿಸಿಕೊಳ್ಳುವ ಕೊನೇಕ್ಷಣದಲ್ಲಿ ಕೈಕೊಟ್ಟ ಮದುಮಗಳು: ಅರ್ಧದಲ್ಲೇ ನಿಂತ  ಮದುವೆ!

ಕಡಬ: ಎಲ್ಲಾ ಸಂಪ್ರದಾಯಗಳನ್ನು ಪೂರ್ಣಗೊಳಿಸಿ ಇನ್ನೇನು ತಾಳಿ ಕಟ್ಟಬೇಕೆನ್ನುವಷ್ಟರಲ್ಲಿ ಮದುಮಗಳಲು  ತನಗೆ ಈ ಮದುವೆ ಇಷ್ಟವಿಲ್ಲವೆಂದ ಘಟನೆ ಕಡಬ ತಾಲೂಕಿನ ಕೋಣಾಲು ಗ್ರಾಮದಲ್ಲಿ ನಡೆದಿದೆ.

ಕೊಣಾಲು ಗ್ರಾಮದ ಉಮೇಶ ಎಂಬವರ ವಿವಾಹವು ಬಂಟ್ವಾಳ ತಾಲೂಕಿನ ಸರಸ್ವತಿ ಎಂಬಾಕೆಯೊಂದಿಗೆ ನಿಶ್ಚಯವಾಗಿತ್ತು. ಅದರಂತೆ ಕಾಂಚನ ಪೆರ್ಲದ ಶ್ರೀ ಷಣ್ಮುಖ ದೇವಸ್ಥಾನದಲ್ಲಿ ವಿವಾಹ ಸಂಪ್ರದಾಯ ಏ.26ರಂದು ಬೆಳಿಗ್ಗೆ ನಡೆಯುತ್ತಿತ್ತು. ಮದುಮಗ ಹಾಗೂ ಮದುಮಗಳ ಕಡೆಯವರು ಅದ್ದೂರಿಯಾಗಿ ದಿಬ್ಬಣದಲ್ಲಿ ಬಂದಿದ್ದರು. ದಾರೆ ಸೀರೆ ಹಾಗೂ ಶೃಂಗಾರದೊಂದಿಗೆ ಮದುವೆ ಮಂಟಪಕ್ಕೆ ಬಂದಿದ್ದ ಮದುಮಗಳು ಸರಸ್ವತಿ ಹಾಗೂ ಮದುಮಗ ಉಮೇಶ್ ಪರಸ್ಪರ ಹೂ ಮಾಲೆ ಹಾಕಿಕೊಂಡಿದ್ದರು. ಇನ್ನೇನು ತಾಳಿ ಕಟ್ಟಬೇಕೆನ್ನುವಷ್ಟರಲ್ಲಿ ಮದುಮಗಳು ತಾಳಿ ಕಟ್ಟಿಸಿಕೊಳ್ಳಲು ನಿರಾಕರಿಸಿದಳು. ತನಗೆ ಈ ಮದುವೆ ಇಷ್ಟವಿಲ್ಲವೆಂದು ಹೇಳಿದಳು. ಇದರಿಂದ ಎರಡೂ ಮನೆಯವರು ಮತ್ತು ಬಂದಿದ್ದ ಬಂಧು ಮಿತ್ರರು ವಿಚಲಿತರಾದರು. ಹಿರಿಯರು ಮನವೊಲಿಸಿ ತಾಳಿ ಕಟ್ಟಿಸಲು ಮುಂದಾದರೂ ಮದುಮಗಳು ಮಾತ್ರ ಒಪ್ಪಲೇ ಇಲ್ಲ. ಹೀಗಾಗಿ ಎರಡೂ ಕಡೆಯವರು ಉಪ್ಪಿನಂಗಡಿಗೆ ಪೊಲೀಸ್ ಠಾಣೆಗೆ ತೆರಳಿದರು.

ಬಳಿಕ ಠಾಣೆಯಲ್ಲಿ ನಡೆದ  ಮಾತುಕತೆಯಲ್ಲಿ  ಮದುಮಗಳು ಸರಸ್ವತಿ ಮದುವೆಗೆ ಒಪ್ಪಿದರಾದರೂ, ಈ ವೇಳೆ ಉಮೇಶ ಅವರು ಮದುವೆಯಾಗಲು ನಿರಾಕರಿಸಿದರು. ಬಳಿಕ ಎರಡೂ ಕಡೆಯವರು ಠಾಣೆಯಲ್ಲಿ ಮುಚ್ಚಳಿಕೆ ಬರೆದು ತಮ್ಮ ಮನೆಗಳಿಗೆ ತೆರಳಿದರು ಎಂದು ತಿಳಿದುಬಂದಿದೆ.

RELATED ARTICLES
- Advertisment -
Google search engine

Most Popular