Monday, July 15, 2024
Homeರಾಜ್ಯಊಟದಲ್ಲಿ ಸಿಹಿ ನೀಡಿಲ್ಲವೆಂದು ಮದುವೆಯೇ ರದ್ದು!

ಊಟದಲ್ಲಿ ಸಿಹಿ ನೀಡಿಲ್ಲವೆಂದು ಮದುವೆಯೇ ರದ್ದು!

ಮಡಿಕೇರಿ: ಮದುವೆ ಹಿಂದಿನ ದಿನದ ರಾತ್ರಿ ಊಟದಲ್ಲಿ ಸಿಹಿ ನೀಡಿಲ್ಲವೆಂಬ ಕಾರಣಕ್ಕೆ ಮದುವೆಯನ್ನೇ ರದ್ದುಗೊಳಿಸಿದ ಘಟನೆ ಮಡಿಕೇರಿಯಲ್ಲಿ ನಡೆದಿದೆ. ನಗರದ ಮದುವೆ ಹಾಲ್ ಒಂದರಲ್ಲಿ ಈ ಘಟನೆ ನಡೆದಿದೆ.

ಹಾನಗಲ್ಲು ಗ್ರಾಮದ ಸಿದ್ಧಾರ್ಥ ಬಡಾವಣೆಯ ಯುವತಿಯ ವಿವಾಹ ತುಮಕೂರು ಜಿಲ್ಲೆಯ ಯುವಕನೊಂದಿಗೆ ನಿಶ್ಚಿತಾರ್ಥವಾಗಿತ್ತು. ಮೇ 5, ಭಾನುವಾರ ನಗರದ ಜಾನಕಿ ಕನ್ವೆನ್ಷನ್ ಹಾಲ್ ನಲ್ಲಿ ವಿವಾಹ ನಿಗದಿಯಾಗಿತ್ತು.

ವರನ ಕಡೆಯವರು ಶನಿವಾರ ಸಂಜೆ ಮದುವೆ ಹಾಲ್ ಗೆ ಬಂದಿದ್ದರು. ಈ ವೇಳೆ ರಾತ್ರಿಯ ಊಟಕ್ಕೆ ಸಿಹಿತಿಂಡಿ ಇರಲಿಲ್ಲವೆಂದು ತಗಾದೆ ತೆಗೆದು ಗಲಾಟೆ ಆರಂಭವಾಗಿದೆ. ಹಾಲ್ ನಲ್ಲಿ ಮಾತಿನ ಚಕಮಕಿ ನಡೆದು ತಳ್ಳಾಟ, ನೂಕಾಟ ನಡೆಯಿತು.

ಭಾನುವಾರ ಬೆಳಗ್ಗೆ ಪೊಲೀಸ್ ಠಾಣೆಯಲ್ಲಿ ವರ ಮದುವೆಯಾಗುತ್ತೇನೆ ಎಂದಿದ್ದ. ಆದರೆ ಮದುವೆಯೇ ಬೇಡವೆಂದು ಉಂಗುರ ಕಳಚಿಕೊಟ್ಟಿದ್ದ ವರನ ಜೊತೆಗೆ ಮದುವೆ ಬೇಡವೆಂದು ವಧು ನಿರ್ಧರಿಸಿದಳು. ಹೀಗಾಗಿ ಠಾಣೆಯಲ್ಲಿ ಮದುವೆ ಮುರಿದುಬಿತ್ತು.

RELATED ARTICLES
- Advertisment -
Google search engine

Most Popular