Monday, December 2, 2024
HomeUncategorizedದೆಹಲಿಯಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ.. !

ದೆಹಲಿಯಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ.. !


ನವದೆಹಲಿ – ದೆಹಲಿ ಪೊಲೀಸರ ಹಳೆಯ ಕಾರ್ಯಾಲಯದಿಂದ ಕೆಲವೇ ಅಂತರದಲ್ಲಿ ಮಹಿಳೆಯರು ಮತ್ತು ಬಡವರಿಗಾಗಿ ಕೆಲಸ ಮಾಡುತ್ತಿದ್ದ 34 ವರ್ಷದ ಮಹಿಳೆಯ ಮೇಲೆ ಮೂರು ಜನರು ಸಾಮೂಹಿಕ ಬಲಾತ್ಕಾರ ಮಾಡಿದ್ದಾರೆ.
ತದ ನಂತರ ರಿಕ್ಷಾ ಚಾಲಕನೊಬ್ಬನು ಅವಳ ಮೇಲೆ ರಾಜಘಾಟ್‌ನ ಗಾಂಧಿ ಸ್ಮೃತಿ ಸರ್ವಿಸ್ ರಸ್ತೆ ಬಳಿ ರಿಕ್ಷಾದಲ್ಲಿಯೇ ಬಲಾತ್ಕಾರ ಮಾಡಿದ್ದಾನೆ. ಮೇಲಿಂದ ಮೇಲೆ ಬಲಾತ್ಕಾರವಾಗಿದ್ದರಿಂದ ಮಹಿಳೆಯು ಮಾನಸಿಕ ಸಮತೋಲನ ಕಳೆದುಕೊಂಡಳು. ಅವಳು ಅರೆ ಬೆತ್ತಲೆಯ ಸ್ಥಿತಿಯಲ್ಲಿ ರಾಜಘಾಟ್‌ನಿಂದ ನಡೆದು ಸರಾಯ್ ಕಾಲೇಖಾನ್ ತಲುಪಿದಳು. ಮಹಿಳೆಯ ಜನನಾಂಗದಿಂದ ರಕ್ತಸ್ರಾವವಾಗುತ್ತಿತ್ತು. ಈ ಮಾರ್ಗದಲ್ಲಿ ಸಂಚರಿಸುವ ಸಾವಿರಾರು ವಾಹನಗಳಲ್ಲಿ ಯಾರೂ ಅವಳಿಗೆ ಸಹಾಯ ಮಾಡಲಿಲ್ಲ. ಈ ಘಟನೆ ಅಕ್ಟೋಬರ್ 11 ರಂದು ರಾತ್ರಿ 9.30 ರ ಸುಮಾರಿಗೆ ಸಂಭವಿಸಿದೆ. ಇದೀಗ ಬೆಳಕಿಗೆ ಬಂದಿದೆ.

ಇಲ್ಲಿ ಮಹಿಳೆಯನ್ನು ನೋಡಿದ ನೌಕಾದಳದ ಅಧಿಕಾರಿಯು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ಅಧಿಕಾರಿಯು ಮಾತನಾಡಿ, ನಮಗೆ ಈ ಮಾಹಿತಿ ಸಿಗದೇ ಇದ್ದರೆ, ಮಹಿಳೆ ಸಾವನ್ನಪ್ಪುತ್ತಿದ್ದಳು ಎಂದು ಹೇಳಿದ್ದಾರೆ. ಏಮ್ಸ್ ನಲ್ಲಿ ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆಸಲಾಯಿತು. ತೀವ್ರ ಆಘಾತದಿಂದಾಗಿ, ಸಧ್ಯಕ್ಕೆ ಆಕೆಯನ್ನು ಏಮ್ಸ್ನ ಮನೋವೈದ್ಯಕೀಯ ವಿಭಾಗಕ್ಕೆ ದಾಖಲಿಸಲಾಗಿದೆ. ಸುಮಾರು 21 ದಿನಗಳ ಅವಿರತ ಪ್ರಯತ್ನದ ನಂತರ, ಪೊಲೀಸರು ರಿಕ್ಷಾ ಚಾಲಕ ಪ್ರಭು, ಗುಜರಿ ಅಂಗಡಿಯ ಕೆಲಸಗಾರ ಪ್ರಮೋದ್ ಮತ್ತು ಶಂಶುಲ್ ಲಗಡಾ ಈ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಬಂಧಿಸಿದ ಬಳಿಕ ಸಂತ್ರಸ್ತ ಮಹಿಳೆ ಮೇಲೆ ನಡೆದಿರುವ ಬಲಾತ್ಕಾರ ಬೆಳಕಿಗೆ ಬಂದಿದೆ.

RELATED ARTICLES
- Advertisment -
Google search engine

Most Popular