Friday, March 21, 2025
Homeದಾವಣಗೆರೆಶ್ರೀ ಗಾಯಿತ್ರಿ ಪರಿವಾರದ ಆಶ್ರಯದಲ್ಲಿ ಭಾರತ ಹುಣ್ಣಿಮೆ ಅಂಗವಾಗಿ ಫೆಬ್ರವರಿ 12 ರಂದು ಸಾಮೂಹಿಕ ಶ್ರೀ...

ಶ್ರೀ ಗಾಯಿತ್ರಿ ಪರಿವಾರದ ಆಶ್ರಯದಲ್ಲಿ ಭಾರತ ಹುಣ್ಣಿಮೆ ಅಂಗವಾಗಿ ಫೆಬ್ರವರಿ 12 ರಂದು ಸಾಮೂಹಿಕ ಶ್ರೀ ಗಾಯತ್ರಿ ಪೂಜೆ ಹಾಗೂ ಉಪಾಸನೆ ಕಾರ್ಯಕ್ರಮ

ದಾವಣಗೆರೆ, ಫೆಬ್ರವರಿ ನಗರದ ಶ್ರೀ ಗಾಯತ್ರಿ ದೇವಿಯ ಉಪಾಸಕರ ಕ್ರಿಯಾತ್ಮಕ ಆಧ್ಯಾತ್ಮ ಸಂಸ್ಥೆ ಶ್ರೀ ಗಾಯತ್ರಿ ಪರಿವಾರದಿಂದ ಪ್ರತೀ ತಿಂಗಳ ಹುಣ್ಣಿಮೆಯೆಂದು ನಡೆಸುವ ಸಾಮೂಹಿಕ ಶ್ರೀ ಗಾಯತ್ರಿ ಪೂಜೆ, ಉಪಾಸನೆ, ಭಾರತ ಹುಣ್ಣಿಮೆ ಅಂಗವಾಗಿ ದಿನಾಂಕ 12-02-2025 ರಂದು ಬುಧವಾರ ಬೆಳಿಗ್ಗೆ 7-00ಕ್ಕೆ ನಡೆಯಲಿದೆ ಎಂದು ಶ್ರೀ ಗಾಯಿತ್ರಿ ಪರಿವಾರದ ಅಧ್ಯಕ್ಷರಾದ ಡಾ. ರಮೇಶ್ ಪಟೇಲ್ ತಿಳಿಸಿದ್ದಾರೆ.

ನಗರದ ಜಯದೇವ ವೃತ್ತದಲ್ಲಿರುವ ಶ್ರೀ ಶಂಕರಮಠದಲ್ಲಿ ನಡೆಯಲಿರುವ ಈ ಅಪ್ಪಟ ಆಧ್ಯಾತ್ಮ ಸಮಾರಂಭದ ಈ ಬಾರಿಯ ಪೂಜಾ ಸೇವಾಕರ್ತರು ಶ್ರೀ ಬಿ.ಸತ್ಯನಾರಾಯಣಮೂರ್ತಿ ಮತ್ತು ಕುಟುಂಬ ದವರು ಕಳೆದ ಇಪ್ಪತ್ತೈದು ವರ್ಷಗಳಿಂದಲೂ ನಿರಂತರವಾಗಿ ಪ್ರತೀ ಪೂರ್ಣಿಮೆ ಯಂದು ನಡೆಯುವ ಈ ಧಾರ್ಮಿಕ ಪ್ರಕ್ರಿಯೆಯಲ್ಲಿ ಆಸಕ್ತ ಸಾರ್ವಜನಿಕರು ಯಾವುದೇ ಜಾತಿ, ಮತ, ವರ್ಣ, ಲಿಂಗ ಬೇಧವಿಲ್ಲದೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಪರಿವಾರದ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್ ಶೆಣೈ ವಿನಂತಿಸಿದ್ದಾರೆ.

RELATED ARTICLES
- Advertisment -
Google search engine

Most Popular