ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ , ಸೈಂಟ್ ಅನ್ಸ್ ನರ್ಸಿಂಗ್ ಕಾಲೇಜು, ರೆಡ್ ಕ್ರಾಸ್ ಲೇಡಿ ಗೋಷನ್ ಜಂಟಿ ಆಶ್ರಯದಲ್ಲಿ ಕಾರ್ನಾಡು ಸೈಂಟ್ ಅನ್ಸ್ ನರ್ಸಿಂಗ್ ಕಾಲೇಜಿನಲ್ಲಿ ಬೃಹತ್ರ ರಕ್ತದಾನ ಶಿಬಿರ ಜರಗಿತು. ರಕ್ತದಾನದ ಪೂರ್ವ ಮೂಲ್ಕಿ ವಿಜಯ ಸನ್ನಿಧಿಯಿಂದ ಕಾರ್ನಾಡ್ ಚೇತನ ನರ್ಸಿಂಗ್ ಹೋಮ್ ವರೆಗೆ ರಕ್ತದಾನದ ಉಪಯೋಗದ ಬಗ್ಗೆ ಜಾಥ ಜರಗಿತು. ಡಾಕ್ಟರ್ ಜೆ. ಎನ್. ಭಟ್ ರಕ್ತದಾನದ ಬಗ್ಗೆ ಮಾಹಿತಿಯನ್ನು ನೀಡಿದರು. ವೇದಿಕೆಯಲ್ಲಿ ರೆಡ್ ಕ್ರಾಸ್ ಲೇಡಿಗೋಶನ್ ಆಸ್ಪತ್ರೆಯ ಸಂಯೋಜಕರಾದ ಪ್ರವೀಣ್, ಅಧ್ಯಕ್ಷರಾದ ಸುಧೀರ್ ಬಾಳಿಗ ಕೋಶಾಧಿಕಾರಿ ಶಿವಪ್ರಸಾದ್, ವಲಯ ಅಧ್ಯಕ್ಷರಾದ ಪ್ರತಿಭಾ ಹೆಬ್ಬಾರ್ ಸ್ಥಾಪಕ ಅಧ್ಯಕ್ಷರಾದ ವೆಂಕಟೇಶ್ ಹೆಬ್ಬಾರ್ , ಗುರುಪ್ರಸಾದ್ ನಾಯಕ್ ಅಕ್ಷತಾ ನಾಯಕ್ ಪ್ರನಮ್ ಶರ್ಮ ಮೊದಲಾದವರು ಉಪಸ್ಥಿತರಿದ್ದರು 72 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು.