ಕಾರ್ಕಳ ಬಸ್ ಏಜೆಂಟ್ ರ ಬಳಗ ಕಾರ್ಕಳ ಭಾರತೀಯ ರೆಡ್ ಸೊಸೈಟಿ, ಬಸ್ ಸ್ಟ್ಯಾಂಡ್ ಗಣೇಶ್ ಉತ್ಸವ ಸಮಿತಿ, ಕಾರ್ಕಳ ರೋಟರ್ ಆಕ್ಟ್, ಜೆಸಿ ಐ ಕಾರ್ಕಳ, ಕಾಳಿಕಾಂಬ ಮತ್ತು ಜೆಸಿಐ ಕಾರ್ಕಳ ರೋಟರಿ ಆನ್ಲೈನ್ ಕ್ಲಬ್, ಕಾರ್ಕಳ ಸಹಬಾಳ್ವೆ, ಉಡುಪಿ ಜಿಲ್ಲೆ ಕಾರ್ಕಳ ಘಟಕ ಇವರ ಜಂಟಿ ಆಶ್ರಯದಲ್ಲಿ , ರಕ್ತ ನಿಧಿ ವಿಭಾಗ ಉಡುಪಿ ಜಿಲ್ಲೆ ಇವರ ಸಹಯೋಗದೊಂದಿಗೆ ಕಾರ್ಕಳ ಬಸ್ ನಿಲ್ದಾಣದಲ್ಲಿ ಬೃಹತ್ ರಕ್ತದಾನ ಶಿಬಿರ ಜರುಗಿತು. ಈ ಸಂದರ್ಭದಲ್ಲಿ ಮಾತನಾಡಿದ ರೋಟರಿ ಕ್ಲಬ್ ಅಧ್ಯಕ್ಷರಾದ ಇಕ್ಬಾಲ್ ಅಹಮದ್ ಮಾತನಾಡಿದ ಅವರು ದಾನಗಳಲ್ಲಿ ಪವಿತ್ರವಾದ ದಾನ ರಕ್ತದಾನವಾಗಿದೆ ಒಬ್ಬ ರಕ್ತದಾನ ಮಾಡಿದ್ದಲ್ಲಿ ಆರು ಜನರ ಪ್ರಾಣವನ್ನು ಉಳಿಸಬಹುದು. ನಾವು ಇಂಥ ಕಾರ್ಯಕ್ರಮಗಳನ್ನು 23 ವರ್ಷಗಳಿಂದ ಹಮ್ಮಿಕೊಂಡು ಬಂದಿದ್ದೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ, ಉದ್ಯಮಿ ಮೊಹಮ್ಮದ್ ಗೌಸ್, ಶೈಲೇಂದ್ರ ರಾವ್, ಜೋಕಿಮ್ ಪಿಂಟೋ, ನಿರಂಜನ ಜೈನ್, ಜೆಸಿ ಸಂತೋಷ್, ಹಾಗೂ, ವಸಂತ್ ಎಂ ಮುಂತಾದವರು ಉಪಸ್ಥಿತರಿದ್ದರು.
ಕಾರ್ಕಳದಲ್ಲಿ ಬೃಹತ್ ರಕ್ತದಾನ ಶಿಬಿರ
RELATED ARTICLES