ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್, ಲಿಯೋ ಕ್ಲಬ್ ಯೆನ್ ಇನ್ಸ್ ಫಯರ್, ಹರಿಹರ ಭಜನಾ ಮಂಡಳಿ ಪುತ್ತೂರು, ಮಹಾಲಿಂಗೇಶ್ವರ ಗೆಳೆಯರ ಬಳಗ, ವಿಸಿಸಿ ಕ್ರಿಕೆಟ್ ಕ್ಲಬ್ ಕರ್ನಿರೆ, ಧೂಮವತಿ ಸಾನ ನಡಿಬೆಟ್ಟು ಆಡಳಿತ ಮಂಡಳಿ, ಅಂಬಾಭವಾನಿ ಭಜನಾ ಮಂದಿರ ಕವತ್ತಾರು, ಜೋಗಿದೋಟ್ಟು ಯುವಕ ವೃಂದ ಕವತ್ತಾರು, ಇದರ ಜಂಟಿ ಆಶ್ರಯದಲ್ಲಿ ಎ.ಜೆ.ಶೆಟ್ಟಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮಂಗಳೂರು ಹಾಗೂ ಎ.ಬಿ.ಶೆಟ್ಟಿ ಮೆಮರಿಯಲ್ ಡೆಂಟಲ್ ಸೈನ್ಸ್ ಇದರ ಸಹಯೋಗದೊಂದಿಗೆ ಬೃಹತ್ ಆರೋಗ್ಯ ಶಿಬಿರ ಹಾಗೂ ಉಚಿತ ದಂತ ವೈದ್ಯಕೀಯ ಶಿಬಿರ ಜರಗಿತು.
ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಬಳಿಕ ಮಾತನಾಡಿದ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ಉಪಾಧ್ಯಕ್ಷರಾದ ಪುಷ್ಪರಾಜ್ ಚೌಟರು ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ಗ್ರಾಮೀಣ ಪ್ರದೇಶದ ಜನರ ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸಿ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಶಿಬಿರಗಳನ್ನು ನಡೆಸುತ್ತಾ ಬರುತ್ತಿದೆ. ವಿಶೇಷವಾಗಿ ಈ ಬಾರಿ ಎ ಜೆ ಶೆಟ್ಟಿ ಆಸ್ಪತ್ರೆಯವರು ಉಚಿತವಾಗಿ ಹಣ್ಣಿನ ಪೊರೆಯ ಶಾಸ್ತ್ರಚಿಕಿತ್ಸೆಯನ್ನು ನೆರವೇರಿಸುತ್ತಿದ್ದು, ಗ್ರಾಮೀಣ ಪ್ರದೇಶದ ಜನರು ಇದರ ಉಪಯೋಗವನ್ನು ಪಡೆದುಕೊಳ್ಳಬೇಕಾಗಿ ವಿನಂತಿಸಿದರು.
ಕಾರ್ಯದರ್ಶಿ ಲಯನ್ ಪ್ರತಿಭಾ ಹೆಬ್ಬಾರ್, ಕೋಶಾಧಿಕಾರಿ ಅನಿಲ್ ಕುಮಾರ್ ನಿಕಟ ಪೂರ್ವ ಅಧ್ಯಕ್ಷರಾದ ಸುದೀರ್ ಎನ್ ಬಾಳಿಗ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಮೋಹನದಾಸ್ ಶೆಟ್ಟಿ, ಅಶೋಕ ಭಂಡಾರಿ, ಪಾಂಡುರಂಗ ಕಾಮತ್, ರಾಮದಾಸ್ ಶೆಟ್ಟಿ, ದಯಾನಂದ ರಾವ್, ಹರೀಶ್ ಶೆಟ್ಟಿ ,ಪ್ರೀತಮ್ ರೈ, ಎಜೆ ಶೆಟ್ಟಿ ಆಸ್ಪತ್ರೆಯ ಡಾ.ಆಕಾಂಕ್ಷ ಶೆಟ್ಟಿ, ಎ. ಬಿ ಶೆಟ್ಟಿ ದಂತ ವೈದ್ಯಕೀಯ ಆಸ್ಪತ್ರೆಯ ಡಾ. ಶೋಭಿತ್ ಮುಂತಾದವರು ಉಪಸ್ಥಿತರಿದ್ದರು.