Friday, February 14, 2025
Homeಬೆಳ್ತಂಗಡಿ"ಮಚ್ಚಿನ ಸ್ವಚ್ಚತಾ ಕಾರ್ಯಕ್ರಮ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶ್ರೇಷ್ಠ ಸೇವೆ"

“ಮಚ್ಚಿನ ಸ್ವಚ್ಚತಾ ಕಾರ್ಯಕ್ರಮ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶ್ರೇಷ್ಠ ಸೇವೆ”

ಮಚ್ಚಿನ: ಮಚ್ಚಿನ ಹಿಂದೂ ರುದ್ರಭೂಮಿ ಸಮಿತಿಯ ಸದಸ್ಯರು ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಚ್ಚಿನ ಘಟಕ ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯ ಎಲ್ಲಾ ಸದಸ್ಯರು ಸ್ವಚ್ಚತಾ ಕಾರ್ಯವನ್ನು ಮಾಡಿದರು.̤ ಈ ಸ್ಥಳದಲ್ಲಿ ನಲ್ಲಿ ನೀರಿನ ಅವಶ್ಯಕತೆ ಇರುವುದರಿಂದ ದಾನಿಗಳಾದ ನಮನ ಹಾರ್ಡ್ ವೇರ್ ನ ಮಾಲಕರಾದ ಅವಿನಾಶ್ ಕುಲಾಲ್ 1000 ಲೀಟರ್ ನೀರಿನ ಟ್ಯಾಂಕ್ ಮತ್ತು ಪೈಪ್ ಫಿಟ್ಟಿಂಗ್,
ಮುಡಿಪಿರೆ ಕೊರೆ ಸೋಮನಾಥ ಗ್ರಾನೈಟ್ ಮಾಲಕರು ಸೂರ್ಯ ನಾರಾಯಣ ಭಟ್ 100 ಸಿಮೆಂಟ್ ಬ್ಲಾಕ್, ಹಿಟಾಚಿ ಮಾಲಕ ಚಂದ್ರಕಾಂತ್ ನಿಡ್ಡಾಜೆ ಹಿಟಾಚಿ ಮೂಲಕ ಸ್ವಚ್ಛತೆ ಕೆಲಸ ಮೂಲಕ ಸಹಕರಿಸಿದರು.
ಈ ಕಾರ್ಯಕ್ಕೆ ಗ್ರಾಮಸ್ಥರಿoದ ಮೆಚ್ಚುಗೆ ವ್ಯಕ್ತವಾಯಿತು.

RELATED ARTICLES
- Advertisment -
Google search engine

Most Popular